ETV Bharat / sitara

ಅಭಿಮಾನಿಗೆ ಹುಟ್ಟುಹಬ್ಬದ ಶುಭ ಕೋರಿ ಸರಳತೆ ಮೆರೆದ ಪುನೀತ್ ರಾಜ್​​ಕುಮಾರ್ - Rajaratna appu youth president

ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ಮಂಜು ಎಂಬ ಅಭಿಮಾನಿಗೆ ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಬರ್ತ್​ಡೇ ಶುಭ ಕೋರಿ ಸರಳತೆ ಮರೆದಿದ್ದಾರೆ.

Puneet rajkumar wished his fan birthday
ಪುನೀತ್ ರಾಜ್​ಕುಮಾರ್
author img

By

Published : Aug 26, 2020, 1:59 PM IST

ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ದೊಡ್ಡ ಸ್ಟಾರ್ ಆದರೂ ಬಹಳ ಸರಳ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಸಹನಟರಾಗಲೀ, ಅಭಿಮಾನಿಗಳನ್ನಾಗಲೀ ಬಹಳ ಪ್ರೀತಿಯಿಂದ ಮಾತನಾಡಿಸುವ ಸ್ವಭಾವ ಅವರದ್ದು.

ಅಪ್ಪು ಅಭಿಮಾನಿಗೆ ನಿರ್ದೇಶಕರ ವಿಶ್​​​

ಇದೀಗ ಪುನೀತ್ ರಾಜ್​ಕುಮಾರ್ ಚಾಮರಾಜನಗರದ ತಮ್ಮ ಅಭಿಮಾನಿಯೊಬ್ಬರಿಗೆ ವಾಟ್ಸಾಪ್ ಮೂಲಕ ಹುಟ್ಟುಹಬ್ಬದ ಶುಭಾಶಯ ಕೋರಿ ಅಭಿಮಾನಿಗಳ ಮನಸ್ಸಿಗೆ ಮತ್ತಷ್ಟು ಹತ್ತಿರವಾಗಿದ್ದಾರೆ.

ಅಭಿಮಾನಿ ಹುಟ್ಟುಹಬ್ಬಕ್ಕೆ ಶುಭ ಕೋರಿದ ಪುನೀತ್

ಚಾಮರಾಜನಗರದಲ್ಲಿ ಟೀ ಕ್ಯಾಂಟೀನ್ ನಡೆಸುತ್ತಿರುವ ರಾಜರತ್ನ ಅಪ್ಪು ಯುವ ಸೇನಾ ಸಮಿತಿ ಅಧ್ಯಕ್ಷ ಕ್ಯಾಂಟೀನ್ ಮಂಜು ಪುನೀತ್ ಅವರ ಅಪ್ಪಟ ಅಭಿಮಾನಿ. ಡಾ. ರಾಜ್​ಕುಮಾರ್ ಅಭಿನಯದ 'ಪರಶುರಾಮ' ಚಿತ್ರದ ನಗುತಾ ನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಹಾಡುವ ಮೂಲಕ ಅಪ್ಪು ಮಂಜುಗೆ ಹುಟ್ಟುಹಬ್ಬದ ಶುಭ ಕೋರಿದ್ದಾರೆ.

Puneet rajkumar wished his fan birthday
ಪುನೀತ್ ರಾಜ್​ಕುಮಾರ್ ಜೊತೆ ಅಭಿಮಾನಿ

ಸ್ಟಾಂಡಲ್​ವುಡ್​ ನಿರ್ದೇಶಕರಾದ ಪವನ್ ಒಡೆಯರ್, ಚೇತನ್ ಕುಮಾರ್, ಸಂತೋಷ್ ಆನಂದ್ ರಾಮ್ ಹಾಗೂ ಎ. ಹರ್ಷ ಕೂಡಾ ಮಂಜು ಅವರಿಗೆ ಬರ್ತ್​ಡೇ ಶುಭ ಕೋರಿದ್ದಾರೆ. ಮೆಚ್ಚಿನ ನಟ ಪುನೀತ್ ರಾಜ್​ಕುಮಾರ್ ಹಾಗೂ ಸ್ಯಾಂಡಲ್​ವುಡ್ ಖ್ಯಾತ ನಿರ್ದೇಶಕರು ತಮ್ಮ ಹುಟ್ಟುಹಬ್ಬಕ್ಕೆ ಶುಭ ಕೋರಿರುವುದದಕ್ಕೆ ಮಂಜು ಸಂತೋಷ ವ್ಯಕ್ತಪಡಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.