ETV Bharat / sitara

ಕೋಟಿಗೊಬ್ಬ 3 ಬಿಡುಗಡೆ ಆಗದಂತೆ ಷಡ್ಯಂತ್ರ: ಕ್ಷಮೆಯಾಚಿಸಿದ ನಿರ್ಮಾಪಕ ಸೂರಪ್ಪ ಬಾಬು - kotigobba 3 film

ಕೋಟಿಗೊಬ್ಬ 3 ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿಡಿಯೋ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹಾಗೂ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಮಾಡದಂತೆ ಷಡ್ಯಂತ್ರ ನಡೆದಿದೆ. ನನಗೆ ಇಂದು ಸಿನಿಮಾ‌ ರಿಲೀಸ್ ಮಾಡೋದಿಕ್ಕೆ ಆಗುತ್ತಿಲ್ಲ. ಕೆಲವು ವಿತರಕರು ಮಾಡಿದ ಮೋಸದಿಂದ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿಲ್ಲ. ಇದರಲ್ಲಿ ನನ್ನ ಯಾವುದೇ ತಪ್ಪಿಲ್ಲ ಅಂತ ನಿರ್ಮಾಪಕ ಸೂರಪ್ಪ ಬಾಬು ಕ್ಷಮೆಯಾಚಿಸಿದ್ದಾರೆ.

Producer Surappa Babu
ನಿರ್ಮಾಪಕ ಸೂರಪ್ಪ ಬಾಬು
author img

By

Published : Oct 14, 2021, 4:05 PM IST

Updated : Oct 14, 2021, 4:25 PM IST

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಸಿನಿಮಾ ರಾಜ್ಯಾದ್ಯಂತ ಇಂದು ಬಿಡುಗಡೆ ಆಗಬೇಕಿತ್ತು. ಆದರೆ ತಾಂತ್ರಿಕ ಕಾರಣದಿಂದ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗಿಲ್ಲ.

ನಿನ್ನೆಯಿಂದ ಆನ್​ಲೈನ್ ಮೂಲಕ ಟಿಕೆಟ್ ಪಡೆದಿದ್ದ ನೂರಾರು ಅಭಿಮಾನಿಗಳು ಭೂಮಿಕಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಲು ಬಂದಿದ್ದ ಅಭಿಮಾನಿಗಳಿಗೆ ಶಾಕ್ ಕಾದಿತ್ತು. ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಪ್ರದರ್ಶನ ಆಗೋದಿಕ್ಕೆ ಫೈನಾಶಿಯರ್ ನಿಂದ ಎನ್​ಒಸಿ ಸಿಕ್ಕಿಲ್ಲ ಎಂಬ ಕಾರಣಕ್ಕೆ, ಭೂಮಿಕಾ ಚಿತ್ರಮಂದಿರ ಅಲ್ಲದೇ ರಾಜ್ಯಾದ್ಯಂತ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗಿಲ್ಲ. ಭೂಮಿಕಾ ಚಿತ್ರಮಂದಿರದಲ್ಲಿ ಟಿಕೆಟ್ ಪಡೆದಿದ್ದ ನೂರಾರು ಅಭಿಮಾನಿಗಳು ಚಿತ್ರಮಂದಿರದವರಿಗೆ ತಮ್ಮ ಹಣ ವಾಪಸ್ ಕೊಡುವಂತೆ ಒತ್ತಾಯಿಸಿದರು. ಅದರಂತೆ ಅಭಿಮಾನಿಗಳಿಗೆ ಹಣವನ್ನ ವಾಪಸ್​ ಕೊಡುವ ಕೆಲಸ ಆಗಿತ್ತು.

ಕ್ಷಮೆಯಾಚಿಸಿದ ನಿರ್ಮಾಪಕ ಸೂರಪ್ಪ ಬಾಬು

ಇನ್ನು ಕೋಟಿಗೊಬ್ಬ 3 ಚಿತ್ರ ನಿರ್ಮಾಪಕ ಸೂರಪ್ಪ ಬಾಬು ವಿಡಿಯೋ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಹಾಗೂ ಸುದೀಪ್ ಅಭಿಮಾನಿಗಳಿಗೆ ಕ್ಷಮೆ ಕೇಳಿದ್ದಾರೆ. ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಮಾಡದಂತೆ ಷಡ್ಯಂತ್ರ ನಡೆದಿದೆ. ನನಗೆ ಇಂದು ಸಿನಿಮಾ‌ ರಿಲೀಸ್ ಮಾಡೋದಿಕ್ಕೆ ಆಗುತ್ತಿಲ್ಲ. ಕೆಲವು ವಿತರಕರು ಮಾಡಿದ ಮೋಸದಿಂದ ಈ ಸಿನಿಮಾ ರಿಲೀಸ್ ಮಾಡಲಾಗುತ್ತಿಲ್ಲ. ಇದರಲ್ಲಿ ನನ್ನದು ಯಾವುದೇ ತಪ್ಪಿಲ್ಲ ಅಂತ ನಿರ್ಮಾಪಕ ಸೂರಪ್ಪ ಬಾಬು ಕ್ಷಮೆಯಾಚಿಸುವುದರ ಜೊತೆ ಸ್ಪಷ್ಟನೆಯನ್ನು ನೀಡಿದ್ದಾರೆ.

ಇದನ್ನೂ ಓದಿ: ಕೋಟಿಗೊಬ್ಬ-3 ಬಿಡುಗಡೆ ವಿಳಂಬ: ಅಭಿಮಾನಿಗಳಲ್ಲಿ ಕ್ಷಮೆ ಕೋರಿದ ಕಿಚ್ಚ ಸುದೀಪ್

ಸುದೀಪ್ ನಟನೆಯ ಕೋಟಿಗೊಬ್ಬ 3 ಏಕೆ ಬಿಡುಗಡೆ ಆಗಿಲ್ಲ ಎಂಬ ಪ್ರಶ್ನೆಗೆ, ಸಿನಿಮಾ ವಿತರಕರು ಈ ಚಿತ್ರವನ್ನ ಬಿಡುಗಡೆ ಮಾಡೋದಿಕ್ಕೆ ಬಂದಿಲ್ಲ. ಹಣದ ಬಿಕ್ಕಟ್ಟಿನಿಂದ ಕೋಟಿಗೊಬ್ಬ 3 ಸಿನಿಮಾ ರಿಲೀಸ್ ಆಗಿಲ್ಲ ಅನ್ನೋದು ಗಾಂಧಿನಗರದಲ್ಲಿ ಕೇಳಿ ಬರುತ್ತಿರುವ ಮಾತು. ನಾಳೆ ರಾಜ್ಯಾದ್ಯಂತ ಕೋಟಿಗೊಬ್ಬ 3 ಸಿನಿಮಾ ಬಿಡುಗಡೆ ಆಗುತ್ತಿದೆ. ಆರು ಗಂಟೆಗೆ ಶೋ ಹಮ್ಮಿಕೊಳ್ಳಲಾಗಿದೆ ಅಂತ ನಿರ್ಮಾಪಕ ಸೂರಪ್ಪ ಬಾಬು ಭರವಸೆ ನೀಡಿದ್ದಾರೆ.

Last Updated : Oct 14, 2021, 4:25 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.