ಬೆಂಗಳೂರು: ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ಗೆ ಕೊರೊನಾ ಭೀತಿ ಶುರುವಾಗಿದ್ದು, ಮುನ್ನೆಚ್ಚರಿಕೆಯಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ರಾಕ್‌ಲೈನ್ ಅವರು ಸಂಸದೆ, ನಟಿ ಸುಮಲತಾ ಅವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಅವರಿಗೂ ಕೊರೊನಾ ಆತಂಕ ಎದುರಾಗಿದೆ.
ಕಳೆದ ಭಾನುವಾರವೇ ರಾಕ್‌ಲೈನ್ ವೆಂಕಟೇಶ್ ರಾಜಾಜಿನಗರದ ಸುಗುಣ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ರಾಕ್‌ಲೈನ್ ಅವರ ಹಿರಿಯ ಪುತ್ರ ವೈದ್ಯರಾಗಿದ್ದು, ಸುಮಲತಾ ಅವರಿಗೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆರೋಗ್ಯದ ದೃಷ್ಟಿಯಿಂದ ತಂದೆಗೆ ಆಸ್ಪತ್ರೆಗೆ ದಾಖಲಾಗುವಂತೆ ಸಲಹೆ ನೀಡಿದ್ದರು.
ಇನ್ನು ರಾಕ್‌ಲೈನ್ ಆಪ್ತ ಮೂಲಗಳ ಪ್ರಕಾರ, ಮುನ್ನೆಚ್ಚರಿಕೆಯಾಗಿ ರಾಕ್‌ಲೈನ್ ವೆಂಕಟೇಶ್ ಅವರ ಪತ್ನಿ ಕೂಡ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಲ್ಲದೇ ಅವರ ಕಿರಿಯ ಪುತ್ರ ಯತೀಶ್ ಹಾಗೂ ಅವರ ಪತ್ನಿ ಮತ್ತು ಮೊಮ್ಮಗ ಮಹಾಲಕ್ಷ್ಮೀ ಲೇಔಟ್ನಲ್ಲಿನ ಮನೆಯಲ್ಲಿ ಹೋಂ ಕ್ವಾರಂಟೈನ್ಗೆ ಒಳಗಾಗಿದ್ದಾರೆ ಎಂದು ತಿಳಿದು ಬಂದಿದೆ.