ಕೋವಿಡ್-19 ಮಹಾಮಾರಿ ಇಂದ ‘ಲಾಕ್ ಡೌನ್’ ಸಮಯದಲ್ಲಿ ನಿರ್ಮಾಪಕ ಎಸ್ ಆರ್ ರಘುನಾಥ್ ಹಾಗೂ ಅವರ ಮಡದಿ ಶ್ರೀಮತಿ ವಾಣಿಶ್ರೀ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮಾತುಗಳಿಂದ ಪ್ರಭಾವಿತರಾಗಿ ಸಹಾಯ ಹಸ್ತ ನೀಡುತ್ತಿದ್ದಾರೆ.
ಎಸ್‌ಆರ್‌ವಿ ಗ್ರೂಪ್ಸ್ ‘ಒಗಾರ ಫೂಡ್ಸ್’ ಫ್ಯಾಕ್ಟರಿಯಲ್ಲಿ ಉತ್ಪಾದನೆ ಆಗಿರುವ 75 ಲಕ್ಷ ರೂಪಾಯಿನಷ್ಟು ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ಈ ಸಂದರ್ಭದಲ್ಲಿ ದಾನ ಮಾಡಲು ತೀರ್ಮಾನಿಸಿದ್ದಾರೆ. ಈ ₹75 ಲಕ್ಷ ಆಹಾರ ಪದಾರ್ಥಗಳು ರೆಡಿ ಟು ಈಟ್ ಕೆಲವಾದರೆ ಮತ್ತೆ ಕೆಲವು ಬಿಸಿ ನೀರಿಗೆ ಹಾಕಿ ಖಾದ್ಯ ತಯಾರಿಸಿ ಸೇವಿಸಬಹುದು.
ನಿರ್ಮಾಪಕ ಎಸ್ ಆರ್ ರಘುನಾಥ್ ಹಾಗೂ ‘ಒಗಾರ’ ಸಂಸ್ಥೆಯ ಒಡತಿ ಶ್ರೀಮತಿ ವಾಣಿಶ್ರೀ ರಘುನಾಥ್ ಒಂದು ಬ್ಯಾಗ್‌ನ ₹2000 ಬೆಲೆ ಬಾಳುವ ಆಹಾರ ಪದಾರ್ಥಗಳನ್ನು ಇಟ್ಟು ಪ್ಯಾಕ್ ಮಾಡಿ ಅದನ್ನು ತಮ್ಮ ತಂಡದೊಂದಿಗೆ ಖುದ್ದಾಗಿ ಹಂಚುವುದಕ್ಕೆ ಮುಂದಾಗಿದ್ದಾರೆ. ಮೊದಲ ಹಂತದಲ್ಲಿ ಒಗಾರ ಫುಡ್ಸ್ ವೈದ್ಯರಿಗೆ ಹಾಗೂ ಪೊಲೀಸರಿಗೆ ನೀಡುತ್ತಿದೆ. ಆಮೇಲೆ ಕೊರೊನಾ ಹೋಗಲಾಡಿಸಲು ದುಡಿಯುತ್ತಿರುವ ಅನೇಕ ವಿಭಾಗಗಳ ವ್ಯಕ್ತಿಗಳಿಗೂ ಸಹ ಇದನ್ನು ನೀಡಲಾಗುವುದು.
ಈ ಆಹಾರ ಪದಾರ್ಥಗಳನ್ನು ಹಂಚುವುದಕ್ಕೆ ಉಪ ಮುಖ್ಯಮಂತ್ರಿ ಡಾ ಅಶ್ವತ್ಥ್ ನಾರಾಯಣ್ ನೆರವಿಗೆ ಬಂದಿದ್ದಾರೆ. ಎಸ್ ಆರ್ ವಿ ಗ್ರೂಪ್ಸ್ ಕಂಪನಿಗೆ ಬೇಕಾದ ಪಾಸುಗಳನ್ನು ನೀಡಲು ಸಹಕರಿಸಿದ್ದಾರೆ. ಇದಕ್ಕೆ ಶ್ರೀ ರಘುನಾಥ್ ಹಾಗೂ ವಾಣಿ ಅವರು ಕೃತಜ್ಞತೆ ತಿಳಿಸಿದ್ದಾರೆ.
‘ಆ್ಯಕ್ಸಿಡೆಂಟ್, ಹೆಬ್ಬುಲಿ, ಜಿಗರ್ ತಂಡ’ ಕನ್ನಡ ಸಿನಿಮಾಗಳ ನಿರ್ಮಾಪಕ ಎಸ್ ಆರ್ ರಘುನಾಥ್ ಆಹಾರ ಪದಾರ್ಥಗಳ ಉದ್ಯಮದಲ್ಲಿ ಸಹ ಹೆಸರುವಾಸಿ. ಅವರ ಎಸ್ ಆರ್ ವಿ ಗ್ರೂಪ್ಸ್ ‘ಒಗಾರ’ ಆಹಾರ ಪದಾರ್ಥಗಳ ಸಂಸ್ಥೆ ಸುಮಾರು 20 ಪದಾರ್ಥಗಳ ಉತ್ಪಾದನೆ ಮಾಡುತ್ತಿದ್ದಾರೆ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಇವರ ಉತ್ಪನ್ನಗಳು ಲಭ್ಯ.
ಈ ಆಹಾರ ಉತ್ಪನ್ನಗಳಿಗೆ ಜನಪ್ರಿಯ ನಟ ಅನಂತ್ ನಾಗ್ ರಾಯಭಾರಿ. ಎರಡು ವರ್ಷದ ಹಿಂದೆ ಮಂತ್ರಾಲಯದ ಶ್ರೀ ಸುಭುದೇಂದ್ರ ತೀರ್ಥರು ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫೆಬ್ರವರಿ 2, 2018ರಂದು ಉದ್ಘಾಟನೆ ಮಾಡಿದ್ದರು. ಬೆಂಗಳೂರಿನ ಮಲ್ಲೇಶ್ವರಂದಲ್ಲಿ ಎಸ್ ಆರ್ ವಿ ಸಂಸ್ಥೆಯ ಕಚೇರಿ ಮತ್ತು ಪ್ರದರ್ಶನ ಮಂದಿರ ಸಹ ಇದೆ. ಅಲ್ಲಿಯೇ ಬಹುತೇಕ ಸಿನಿಮಾ ಪತ್ರಿಕಾಗೋಷ್ಠಿಗಳು ನಡೆಯುತ್ತವೆ. ಜತೆಗೆ ಸೆನ್ಸಾರ್ ಮಂಡಳಿ ಸಿನಿಮಾ ಸಹ ಇಲ್ಲಿ ವೀಕ್ಷಣೆ ಮಾಡಬಹುದಾಗಿದೆ.