ಪಾಪ್ ಕಾರ್ನ್ ಮಂಕಿ ಟೈಗರ್ ಸ್ಯಾಂಡಲ್ವುಡ್ ಅಂಗಳದಲ್ಲಿ ತುಂಬಾ ದೊಡ್ಡ ನಿರೀಕ್ಷೆ ಹುಟ್ಟಿಸಿರೋ ಸಿನಿಮಾ. ಟಗರು ಹಿಟ್ ಆದ ನಂತರ ನಿರ್ದೇಶಕ ಸೂರಿ ಮತ್ತು ಡಾಲಿ ಧನಂಜಯ್ ಜೊತೆಯಾಗಿ ಮಾಡಿರೋ ಸಿನಿಮಾ ಇದು.
ಬರೀ ಪೋಸ್ಟರ್ನಿಂದಲೇ ಸುದ್ದಿ ಮಾಡಿದ್ದ ಈ ಚಿತ್ರ, ಡಬ್ಬಿಂಗ್ ವಿಡಿಯೋಗಳಿಂದಲೂ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಇನ್ನು ಡಾಲಿ ಧನಂಜಯ ಡೈಲಾಗ್ ಡಬ್ಬಿಂಗ್ ಮಾಡ್ತಿರೋ ಸಂದರ್ಭದಲ್ಲಿ ಮಾಡಿದ್ದ ಮೇಕಿಂಗ್ ವಿಡಿಯೋಗಳು ಸಖತ್ ವೈರಲ್ ಆಗಿದ್ವು. ಈ ನಡುವೆ ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರತಂಡದಿಂದ ಮತ್ತೊಂದು ಬಿಗ್ ನ್ಯೂಸ್ ಹೊರ ಬಿದಿದ್ದೆ. ಅದೇನಂದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾಕ್ಕೆ ಸಾಥ್ ನೀಡುತ್ತಿದ್ದಾರೆ.
![PRK buying Pop Corn Manky Tiger audio right](https://etvbharatimages.akamaized.net/etvbharat/prod-images/kn-bng-01-pop-corna-monky-taiger-cinmakke-puneeth-saathu-7204735_24122019123238_2412f_1577170958_632.jpg)
ಹೌದು ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಆಡಿಯೋ ಹಕ್ಕನ್ನು ಪವರ್ ಸ್ಟಾರ್ ಮಾಲಿಕತ್ವದ ಪಿಆರ್ಕೆ ಆಡಿಯೋ ಸಂಸ್ಥೆ ಖರೀದಿಸುತ್ತಿದೆ. ಈ ಬಗ್ಗೆ ಈಗಾಗಲೇ ಮಾತುಕತೆಯಾಗಿದ್ದು, ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಅಫಿಶಿಯಲ್ ಫಸ್ಟ್ ಲುಕ್ ಟೀಸರ್ನ ರಿಲೀಸ್ ಡೇಟ್ ಅನೌನ್ಸ್ ಮಾಡೋ ಮೂಲಕ ಅಧಿಕೃತವಾಗಿ ತಿಳಿಸಲಿದೆಯಂತೆ.
![PRK buying Pop Corn Manky Tiger audio right](https://etvbharatimages.akamaized.net/etvbharat/prod-images/kn-bng-01-pop-corna-monky-taiger-cinmakke-puneeth-saathu-7204735_24122019123238_2412f_1577170958_156.jpg)
ಪಾಪ್ ಕಾರ್ನ್ ಮಂಕಿ ಟೈಗರ್ ಚಿತ್ರದ ಫಸ್ಟ್ ಲುಕ್ ಟೀಸರ್ ಹೊಸ ವರ್ಷಕ್ಕೆ ಲಾಂಚ್ ಆಗೋ ಸಾಧ್ಯತೆ ಇದೆಯಂತೆ. ಈಗಾಗ್ಲೇ ಸಿನಿಮಾದ ಫಸ್ಟ್ ಲುಕ್ ಟೀಸರ್ ಕಟ್ಟಿಂಗ್ನಲ್ಲಿ ತೊಡಗಿದ್ದು, ಸದ್ಯದಲ್ಲೇ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆಯಂತೆ.
![PRK buying Pop Corn Manky Tiger audio right](https://etvbharatimages.akamaized.net/etvbharat/prod-images/kn-bng-01-pop-corna-monky-taiger-cinmakke-puneeth-saathu-7204735_24122019123238_2412f_1577170958_625.jpg)
![PRK buying Pop Corn Manky Tiger audio right](https://etvbharatimages.akamaized.net/etvbharat/prod-images/kn-bng-01-pop-corna-monky-taiger-cinmakke-puneeth-saathu-7204735_24122019123238_2412f_1577170958_547.jpg)