ETV Bharat / sitara

ಉಪ್ಪಿ ಹುಟ್ಟುಹಬ್ಬಕ್ಕೆ ಪತ್ನಿಯ ಅಡ್ವಾನ್ಸ್​ ಗಿಫ್ಟ್​​​​... ಮನೆಗೆ ಬಂತು ದುಬಾರಿ ಕಾರು! - ಕಿಯಾ ಕಂಪನಿಯ ಹೈಯರ್ ಯಂಡ್ ಕಾರ್​​

ಉಪೇಂದ್ರ ಹುಟ್ಟುಹಬ್ಬದ ಹಿನ್ನೆಲೆ ಪತ್ನಿ ಪ್ರಿಯಾಂಕಾ ದುಬಾರಿ ಬೆಲೆಯ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಸುಮಾರು 60 ಲಕ್ಷ ಬೆಲೆಯ ಕಾರು ಉಪೇಂದ್ರ ಮನೆಗೆ ಆಗಮಿಸಿದ್ದು, ಅಡ್ವಾನ್ಸ್​ ಗಿಫ್ಟ್​​ ನೀಡಿದ್ದಾರೆ.

Priyanka upendra gifts a brand new car to Upendra for his Birth day
ಉಪ್ಪಿ ಹುಟ್ಟುಹಬ್ಬಕ್ಕೆ ಪತ್ನಿಯ ಅಡ್ವಾನ್ಸ್​ ಗಿಫ್ಟ್​​​​...ಮನೆಗೆ ಬಂತು ಬರೋಬ್ಬರಿ ಅರ್ಧಕೋಟಿ ಕಾರು
author img

By

Published : Sep 16, 2020, 4:43 PM IST

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬಕ್ಕೆ ಇನ್ನೂ ಎರಡು ದಿನ ಬಾಕಿ ಇದೆ. ಅಷ್ಟರಲ್ಲೇ ಪ್ರಿಯಾಂಕಾ ಉಪೇಂದ್ರ ಅವರು ಪತಿಗೆ ಅರ್ಧ ಕೋಟಿ ಬೆಲೆ ಬಾಳುವ ಕಾರೊಂದನ್ನ ಬರ್ತ್​​​​ಡೇ ಗಿಫ್ಟ್ ಆಗಿ‌ ನೀಡಿದ್ದಾರೆ.

ಉಪ್ಪಿ ಹುಟ್ಟುಹಬ್ಬಕ್ಕೆ ಪತ್ನಿಯ ಅಡ್ವಾನ್ಸ್​ ಗಿಫ್ಟ್​​​​...ಮನೆಗೆ ಬಂತು ಬರೋಬ್ಬರಿ ಅರ್ಧಕೋಟಿ ಕಾರು

ಈ ವರ್ಷ ಕೊರೊನಾದಿಂದಾಗಿ ತಮ್ಮ ಹುಟ್ಟುಹಬ್ಬವನ್ನು ಆಚರಿಸದಂತೆ ತಮ್ಮ ಅಭಿಮಾನಿಗಳಿಗೆ ಉಪೇಂದ್ರ ಮನವಿ ಮಾಡಿದ್ದಾರೆ. ಆದರೆ ರಿಯಲ್ ಸ್ಟಾರ್ ಮನೆಯಲ್ಲಿ ಹುಟ್ಟುಹಬ್ಬದ ಸಂಭ್ರಮ‌ ಮನೆ ಮಾಡಿದೆ.

Priyanka upendra with Upendra
ನಟ ಉಪೇಂದ್ರ ಹಾಗೂ ಪತ್ನಿ ಪ್ರಿಯಾಂಕಾ

ಈ ವರ್ಷದ ಹುಟ್ಟುಹಬ್ಬಕ್ಕೆ ಕಿಯಾ ಕಂಪನಿಯ ಹೈಯರ್ ಯಂಡ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಕಿಯಾ ಕಾರು ಬೆಲೆ ಬರೋಬ್ಬರಿ ಅರ್ಧ ಕೋಟಿಯಾಗಿದೆ.

ಅಂದರೆ ಬರೋಬ್ಬರಿ 60 ಲಕ್ಷ ಬೆಲೆ ಬಾಳುವ ಕಾರು ಇದಾಗಿದ್ದು, ಸ್ವತಃ ಉಪೇಂದ್ರ ಈ ಐಷಾರಾಮಿ ಕಾರನ್ನು ರಿಸೀವ್ ಮಾಡಿಕೊಂಡಿದ್ದಾರೆ. ಹೈ ಟೆಕ್ನಾಲಜಿ ಹೊಂದಿರುವ ಈ ಕಾರನ್ನು ನೋಡಿ ಉಪೇಂದ್ರ ಕೂಡ ಬೋಲ್ಡ್ ಆಗಿದ್ದಾರೆ. ಇಂದು ಕತ್ರಿಗುಪ್ಪೆಯಲ್ಲಿರೋ ಉಪೇಂದ್ರ ನಿವಾಸಕ್ಕೆ ಈ ಕಾರು ಬಂದಿಳಿದಿದೆ.

ಉಪ್ಪಿ ಜೊತೆಗೆ ಅವರ ತಂದೆ- ತಾಯಿ ಕೂಡ ಈ ಹೊಸ ಕಾರನ್ನು ರಿವೀಲ್ ಮಾಡಿದ್ರು. ಇನ್ನು 6 ವರ್ಷದ ಹಿಂದೆ ಪ್ರಿಯಾಂಕಾ, ಉಪೇಂದ್ರ ಹುಟ್ಟು ಹಬ್ಬಕ್ಕೆ ಜಾಗ್ವಾರ್ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.