ETV Bharat / sitara

ಶೂಟಿಂಗ್ ವೇಳೆ ಆಯತಪ್ಪಿ ಬಿದ್ದ ವಿಡಿಯೋ ಹಂಚಿಕೊಂಡು ತಾನೇ ನಕ್ಕ ಕಣ್ಸನ್ನೆ ಹುಡುಗಿ - Telugu Check movie shooting

ತೆಲುಗು ನಟ ನಿತಿನ್ ಜೊತೆ 'ಚೆಕ್' ಚಿತ್ರೀಕರಣದ ವೇಳೆ ನಡೆದ ಫನ್ನಿ ವಿಡಿಯೋವೊಂದನ್ನು ಮಲಯಾಳಂ ನಟಿ ಪ್ರಿಯಾ ಪ್ರಕಾಶ್ ವಾರಿಯರ್ ತಮ್ಮ ಇನ್ಸ್ಟಾಗ್ರಾಮ್​​​ನಲ್ಲಿ ಹಂಚಿಕೊಂಡಿದ್ದಾರೆ.

Priya prakash
ಪ್ರಿಯಾ ಪ್ರಕಾಶ್ ವಾರಿಯರ್
author img

By

Published : Feb 26, 2021, 7:45 PM IST

ಮಲಯಾಳಿ ಚೆಲುವೆ ಪ್ರಿಯಾ ಪ್ರಕಾಶ್ ವಾರಿಯರ್ ರಾತ್ರೋ ರಾತ್ರಿ ಸ್ಟಾರ್ ಆದ ನಟಿ. 'ಒರು ಅದಾರ್ ಲವ್​ ಸ್ಟೋರಿ' ಚಿತ್ರದ ಒಂದೇ ಒಂದು ದೃಶ್ಯದಲ್ಲಿ ಹುಬ್ಬು ಹಾರಿಸಿ, ಕಣ್ಣು ಹೊಡೆಯುವ ಮೂಲಕ ಕಣ್ಸನ್ನೆ ಹುಡುಗಿ ಎಂದೇ ಹೆಸರಾದ ಪ್ರಿಯಾ ಪ್ರಕಾಶ್ ಈಗ ಕನ್ನಡ, ಹಿಂದಿ, ತೆಲುಗು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ: ನಾನು ಆರೋಗ್ಯವಾಗಿದ್ದೇನೆ, ಶೀಘ್ರದಲ್ಲೇ ಚಿತ್ರೀಕರಣ ಪುನಾರಂಭಿಸಲಿದ್ದೇವೆ...ರಜನಿಕಾಂತ್​

ತೆಲುಗಿನಲ್ಲಿ ನಿತಿನ್ ಜೊತೆ 'ಚೆಕ್' ಎಂಬ ಚಿತ್ರದಲ್ಲಿ ಪ್ರಿಯಾ ಪ್ರಕಾಶ್ ನಟಿಸಿದ್ದಾರೆ. ಈ ಸಿನಿಮಾ ಇಂದು ಬಿಡುಗಡೆಯಾಗಿದೆ. ಈ ಸಿನಿಮಾ ಚಿತ್ರೀಕರಣದ ವೇಳೆ ಜರುಗಿದ ಫನ್ನಿ ವಿಡಿಯೋವೊಂದನ್ನು ಪ್ರಿಯಾ ಪ್ರಕಾಶ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಲಾಫಿಂಗ್ ಎಮೋಜಿಯೊಂದಿಗೆ ಹಂಚಿಕೊಂಡು ತಮ್ಮ ಪರಿಸ್ಥಿತಿ ನೋಡಿ ತಾವೇ ನಕ್ಕು ಸುಮ್ಮನಾಗಿದ್ದಾರೆ. ಈ ಸಿನಿಮಾದಲ್ಲಿ ನಿತಿನ್ ಹಿಂದಿನಿಂದ ಓಡಿಬರುವ ಪ್ರಿಯಾ,ಅವರ ಬೆನ್ನ ಮೇಲೆ ಏರುವ ದೃಶ್ಯವೊಂದಿದೆ. ಈ ಚಿತ್ರೀಕರಣದ ಸಮಯದಲ್ಲಿ ನಿತಿನ್ ಹಿಂದಿನಿಂದ ಓಡಿಬರುವ ಪ್ರಿಯಾ, ನಿತಿನ್​​​​​​ ಬೆನ್ನ ಮೇಲೆ ಏರುವ ಪ್ರಯತ್ನ ಮಾಡುತ್ತಾರೆ. ಆದರೆ ಆಯತಪ್ಪಿ ಕೆಳಗೆ ಬೀಳುತ್ತಾರೆ. ಕೂಡಲೇ ಚಿತ್ರತಂಡದ ಸದಸ್ಯರು ಓಡಿಬಂದು ಪ್ರಿಯಾ ಅವರನ್ನು ಮೇಲೆತ್ತುತ್ತಾರೆ. ಈ ವಿಡಿಯೋವನ್ನು ಅಲ್ಲೇ ಇದ್ದವರು ರೆಕಾರ್ಡ್ ಮಾಡಿದ್ದಾರೆ. ಪ್ರಿಯಾ ತಮ್ಮ ಇನ್ಸ್ಟಾಗ್ರಾಮ್​​ನಲ್ಲಿ ಈ ವಿಡಿಯೋ ಹಂಚಿಕೊಂಡು "ನಾನು ಪ್ರತಿ ಬಾರಿ ನಂಬಿಕೆಯಿಟ್ಟು ಮೇಲೇರಲು ಯತ್ನಿಸುತ್ತಿದ್ದರೆ ಜೀವನ ನನ್ನನ್ನು ಹೀಗೆ ಕೆಳಗೆ ಬೀಳಿಸುತ್ತಲೇ ಇದೆ" ಎಂದು ಬರೆದುಕೊಂಡಿದ್ದಾರೆ. ನೆಟಿಜನ್ಸ್ ಕೂಡಾ ಈ ವಿಡಿಯೋ ನೋಡಿ ಲಾಫಿಂಗ್ ಎಮೋಜಿ ಹಾಕಿ ಕಮೆಂಟ್ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.