ETV Bharat / sitara

ಶಿವಣ್ಣನ ಮೇಲಿನ ಅಭಿಮಾನ: 'ಪ್ರೇಮಂ ಪೂಜ್ಯಂ' ಸಿನೆಮಾ ಬಿಡುಗಡೆ ಮುಂದಕ್ಕೆ ಹಾಕಿದ್ರು ಪ್ರೇಮ್ - 'ಪ್ರೇಮಂ ಪೂಜ್ಯಂ' ಸಿನಿಮಾ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಒಂದು ಹಾಡಿಗೆ ದನಿಯಾಗಿದ್ದಾರೆ. ಇನ್ನು ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥೆ ಹೊಂದಿರುವ ಪ್ರೇಮಂ ಪೂಜ್ಯಂ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್​ ಪಡೆದುಕೊಂಡಿದೆ.

Prem
ಪ್ರೇಮ್
author img

By

Published : Oct 25, 2021, 7:33 PM IST

ಲವ್ಲಿ ಸ್ಟಾರ್ ಪ್ರೇಮ್ ಅಭಿನಯಿಸುತ್ತಿರೋ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ' ಸದ್ಯ ಟ್ರೈಲರ್ ಹಾಗೂ ಹಾಡುಗಳಿಂದಲೇ ಜನಪ್ರಿಯವಾಗಿದೆ. ಇದು ಕನ್ನಡ ಚಿತ್ರರಂಗ ಅಲ್ಲದೇ ಪರಭಾಷೆಯವರು ಮಾತನಾಡುವ ಮಟ್ಟಿಗೆ ಸೆನ್ಸೆಷನಲ್ ಕ್ರಿಯೇಟ್ ಮಾಡಿದೆ.

'ಪ್ರೇಮಂ ಪೂಜ್ಯಂ' ಸಿನೆಮಾ ತಂಡ ಚಿತ್ರದ ಬಿಡುಗಡೆ ದಿನಾಂಕ ಘೋಷಿಸಿತ್ತು

ಅದ್ದೂರಿ ಮೇಕಿಂಗ್​ನಿಂದಲೇ ಸ್ಯಾಂಡಲ್​ವುಡ್​ನಲ್ಲಿ ಸದ್ದು ಮಾಡ್ತಿರೋ ಈ ಸಿನಿಮಾ ಇದೇ ಅಕ್ಟೋಬರ್ 29ರಂದು ಬಿಡುಗಡೆ ಮಾಡುತ್ತೇವೆ ಎಂದು ಚಿತ್ರತಂಡ ಅನೌನ್ಸ್​ ಮಾಡಿತ್ತು. ಆದರೆ, ಈ ಬಗ್ಗೆ ನೆನಪಿರಲಿ ಪ್ರೇಮ್ ಅವರು ಮಾತನಾಡಿ, ನಾನು ಶಿವಣ್ಣ ಸಿನಿಮಾಗಳನ್ನ ನೋಡಿ ಇಂಡಸ್ಟ್ರಿಗೆ ಬಂದಿದ್ದೇನೆ. ಹೀಗಾಗಿ ಶಿವರಾಜ್ ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ರಿಲೀಸ್​ ದಿನದಂದು ನಮ್ಮ 'ಪ್ರೇಮಂ ಪೂಜ್ಯಂ' ಸಿನಿಮಾವನ್ನ ಬಿಡುಗಡೆ ಮಾಡುತ್ತಿಲ್ಲ ಅಂದಿದ್ದಾರೆ.

ಈ ಚಿತ್ರದಲ್ಲಿ ನೆನಪಿರಲಿ ಪ್ರೇಮ್ ಒಂಬತ್ತು ಶೇಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರೋ ರಾಘವೇಂದ್ರ ಬಿ. ಎಸ್ ಅವರು ಈ ಚಿತ್ರವನ್ನ ನಿರ್ದೇಶಿಸುವುದರ ಜೊತೆಗೆ ಕಥೆ ಮತ್ತು ಚಿತ್ರಕಥೆ ಹಾಗೂ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರದಲ್ಲಿ ಪ್ರೇಮ್​ಗೆ ನಾಯಕಿಯಾಗಿ ಶೃಂಗೇರಿ ಹುಡುಗಿ ಬೃಂದಾ ಆಚಾರ್ಯ ಜೋಡಿಯಾಗಿದ್ದಾರೆ.

ಇದರ ಜೊತೆಗೆ ಐಂದ್ರಿತಾ ರೇ, ಸುಮನ್, ಮಾಸ್ಟರ್ ಆನಂದ್​, ಸಾಧು ಕೋಕಿಲಾ, ಅನು ಪ್ರಭಾಕರ್, ನಿರ್ದೇಶಕ ಟಿ.ಎಸ್ ನಾಗಾಭರಣ, ತಪಸ್ವಿನಿ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.

ಮುನ್ನಾರ್‌ನಿಂದ ಡಾರ್ಜಿಲಿಂಗ್‌ ಹಾಗೂ ವಿಯೆಟ್ನಾಂನಲ್ಲಿ ಎರಡು ಹಾಡುಗಳನ್ನು ಚಿತ್ರೀಕರಣ ಮಾಡಲಾಗಿದೆ. ರವಿಚಂದ್ರನ್ ಅವರ ಪ್ರೇಮ ಲೋಕದಂತೆ ಈ ಚಿತ್ರದಲ್ಲಿ 12 ಹಾಡುಗಳಿವೆ. ಹರಿಹರನ್, ಮೋಹಿತ್ ಚೌಹಾಣ್, ವಿಜಯ್ ಪ್ರಕಾಶ್, ಸೋನು ನಿಗಮ್ ಮತ್ತು ಅರ್ಮಾನ್ ಮಲಿಕ್ ಸೇರಿದಂತೆ ದೇಶದ ಹೆಸರಾಂತ ಗಾಯಕರು ಈ ಹಾಡುಗಳನ್ನು ಹಾಡಿದ್ದಾರೆ.

ಅಲ್ಲದೇ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಕೂಡ ಒಂದು ಹಾಡಿಗೆ ದನಿಯಾಗಿದ್ದಾರೆ. ಇನ್ನು ಲವ್ ಸ್ಟೋರಿ ಜೊತೆಗೆ ಫ್ಯಾಮಿಲಿ ಕಥೆ ಹೊಂದಿರುವ ಪ್ರೇಮಂ ಪೂಜ್ಯಂ ಸಿನಿಮಾ ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್​ ಪಡೆದುಕೊಂಡಿದೆ.

U / A Certificate
ಯು/ಎ ಸರ್ಟಿಫಿಕೇಟ್​

ಅಷ್ಟೇ ಅಲ್ಲದೇ, ಸೆನ್ಸಾರ್ ಮಂಡಳಿಯವರು ಈ ಚಿತ್ರವನ್ನು ವೀಕ್ಷಿಸಿ ಅದರ ಬಗ್ಗೆ ಉತ್ತಮವಾದ ಪ್ರಶಂಸೆ ವ್ಯಕ್ತಪಡಿಸಿ ಯು/ಎ ಪ್ರಮಾಣ ಪತ್ರವನ್ನು ನೀಡಿರೋದು ಚಿತ್ರತಂಡಕ್ಕೆ ಖುಷಿ ತಂದಿದೆ. ಡಾ. ರಕ್ಷಿತ್ ಕೆಡಂಬಾಡಿ, ಡಾ. ರಾಜ್​ಕುಮಾರ್ ಜಾನಕಿರಾಮನ್‌, ಮನೋಜ್ ಕೃಷ್ಣನ್ ಅದ್ದೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ಮಾಧವ್ ಕ್ರಿನಿ ಈ ಸಿನಿಮಾದ ಕಾರ್ಯಕಾರಿ ನಿರ್ಮಾಪಕರಾಗಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ ಪ್ರೇಮಂ ಪೂಜ್ಯಂ ಸಿನಿಮಾ ನವೆಂಬರ್ 12ಕ್ಕೆ ವಿಶ್ವಾದ್ಯಂತ ಬಿಡುಗಡೆ ಆಗಲಿದೆ.

ಓದಿ: ಮುಗಿಲ್​ಪೇಟೆಯಲ್ಲೂ ‘ಪ್ರೇಮಲೋಕ’.. ಮನು ಸಿನಿಮಾದಲ್ಲಿ ರವಿಮಾಮನ ಮುತ್ತಿನ ಪಾಠ..!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.