ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ನಶೆಯ ನಂಟು ಜೋರಾಗಿದೆ ಅಂತಾ ಹೇಳಿಕೆ ನೀಡಿ ಕಳೆದ ಒಂದು ವಾರದಿಂದ ಪ್ರಶಾಂತ್ ಸಂಬರಗಿ ಸುದ್ದಿಯಲ್ಲಿದ್ದಾರೆ. ಜೊತೆಗೆ ಫಿಲ್ಮ್ ಚೇಂಬರ್ ಮಾಜಿ ಅಧ್ಯಕ್ಷ ಸಾ ರಾ ಗೋವಿಂದ್ ರೋಲ್ ಕಾಲ್ ಗಿರಾಕಿ ಅಂತಾ ಆರೋಪಿಸಿದ್ರು.
ಸಂಬರಗಿ ಅವರ ಈ ಆರೋಪಕ್ಕೆ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ ರಾ ಗೋವಿಂದ್ ತಿರುಗೇಟು ನೀಡಿದ್ದಾರೆ. ಡ್ರಗ್ಸ್ ಪೆಡ್ಲರ್ ರಾಹುಲ್ ಜೊತೆ ನಂಟು ಹೊಂದಿರುವ ಪ್ರಶಾಂತ್ ಸಂಬರಗಿಯನ್ನ ಕೂಡಲೇ ಪೊಲೀಸ್ ಅಧಿಕಾರಿಗಳು ಬಂಧಿಸಬೇಕು ಅಂತಾ ಆಗ್ರಹಿಸಿದರು.
ಪ್ರಶಾಂತ್ ಸಂಬರಗಿಗೆ ರಾಜಕೀಯದ ಹುಚ್ಚು ಹಿಡಿದಿದೆ. ಈ ಕಾರಣಕ್ಕೆ ಹೀಗೆಲ್ಲಾ ಮಾಡ್ತಿದ್ದಾನೆ. ಹಾಗೇ ನನ್ನ ಮೇಲೆ ಮಾಡಿರುವ ಆರೋಪಗಳನ್ನ ಸಾಬೀತು ಮಾಡಿದ್ರೆ, ನಾನು ಸಿನಿಮಾ ಇಂಡಸ್ಟ್ರಿ ಬಿಡುತ್ತೇನೆ, ಇಲ್ಲ ಆರೋಪಗಳು ಸುಳ್ಳುದಾರೆ ನೀನು ಕರ್ನಾಟಕ ಬಿಡಬೇಕು ಅಂತಾ ಸಾ ರಾ ಗೋವಿಂದ್, ಪ್ರಶಾಂತ್ ಸಂಬರಗಿಗೆ ಸವಾಲ್ ಹಾಕಿದರು.
ಬಾಹುಬಲಿ-2 ಸಿನಿಮಾ ರಿಲೀಸ್ ಟೈಮ್‌ನಲ್ಲಿ ನಿರ್ಮಾಪಕರಿಂದ ಹಣ ಪಡೆದಿದ್ದಾರೆ ಎಂಬ ಆರೋಪಕ್ಕೆ ಸಾ ರಾ ಕೆಂಡಾಮಂಡಲರಾಗಿ ಖಡಕ್ ಎಚ್ಚರಿಕೆ ನೀಡಿದರು.