ETV Bharat / sitara

ಕೆಜಿಎಫ್​​​ ಕುತೂಹಲ... ಪ್ರಶಾಂತ್​ ನೀಲ್​​​ರ ಈ ಫೋಟೋ​​​​​ ಅರ್ಥವೇನು?

author img

By

Published : Jan 2, 2020, 4:14 PM IST

ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​​ವೊಂದನ್ನು ಹಾಕುವ ಮೂಲಕ ನಿರ್ದೇಶಕ ಪ್ರಶಾಂತ್​​ ನೀಲ್​ ಕೆಜಿಎಫ್​ 3 ಸಿನಿಮಾ ಬಗ್ಗೆ ಸುಳಿವು ನೀಡಿದ್ದಾರೆ.

Prashant Neel who hinted about KGF 3 cinema
ಕೆಜಿಎಫ್​ 3 ಬಗ್ಗೆ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟ ಪ್ರಶಾಂತ್​ ನೀಲ್​​​!

ಕನ್ನಡ ಸಿನಿ ರಂಗದತ್ತ ಪ್ರಪಂಚವೇ ಒಮ್ಮೆ ತಿರುಗಿ ನೋಡುವಂತೆ ಮಾಡಿದ ಸಿನಿಮಾ ಅಂದ್ರೆ ಅದು ಪ್ರಶಾಂತ್​​ ನೀಲ್​​ ನಿರ್ದೇಶನದ, ಯಶ್​​ ನಟಿಸಿರುವ ಕೆಜಿಎಫ್​ ಸಿನಿಮಾ. ಈ ಸಿನಿಮಾ ಹಲವು ಭಾಷೆಗಳಲ್ಲಿ ರಿಲೀಸ್​​ ಆಗಿ ಹತ್ತಾರು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಅಲ್ಲದೆ ಈ ಚಿತ್ರದಿಂದ ಯಶ್​​​ ಹೆಸರು ಕೂಡ ಪ್ರಪಂಚದಾದ್ಯಂತ ಪಸರಿಸಿದೆ.

ಇನ್ನು ಕೆಜಿಎಫ್​​ ಚಾಪ್ಟರ್​​ 2 ರಿಲೀಸ್​ಗೆ ರೆಡಿಯಾಗುತ್ತಿದ್ದು, ಇತ್ತೀಚೆಗಷ್ಟೆ ಕೆಜಿಎಫ್​ ಚಾಪ್ಟರ್​​ 2 ಸಿನಿಮಾದ ಫಸ್ಟ್​ ಲುಕ್​ ಕೂಡ ರಿಲೀಸ್​​ ಆಗಿದೆ. ಕೇವಲ ಪೋಸ್ಟರ್​ನಿಂದಲೇ ಚಾಪ್ಟರ್ 2 ಸಿನಿಮಾ ಬಗ್ಗೆ ತುಂಬಾನೇ ಕುತೂಹಲ ಮೂಡಿದೆ. ಈ ನಡುವೆ ಪ್ರಶಾಂತ್​​ ನೀಲ್​​ ಮತ್ತೊಂಸು ಸುದ್ದಿ ನೀಡಿದ್ದು, ಕೆಜಿಎಫ್​​ 3 ಸಿನಿಮಾದ ಸುಳಿವು ನೀಡಿದ್ದಾರೆ. ಅಲ್ಲದೆ ತಮ್ಮ ಪೋಸ್ಟ್​​ನಿಂದ ಅಭಿಮಾನಿಗಳ ತಲೆಯಲ್ಲಿ ಹುಳ ಬಿಟ್ಟಿದ್ದಾರೆ.

ಹೌದು, ಪ್ರಶಾಂತ್​ ನೀಲ್​ ತಮ್ಮ ಮಗನಿಗೆ 3 ಆಕಾರದ ಹೇರ್​​​​ ಕಟಿಂಗ್​ ಮಾಡಿಸಿ ಇನ್​ಸ್ಟಾಗ್ರಾಂ​ನಲ್ಲಿ ಶೇರ್​ ಮಾಡಿದ್ದಾರೆ. ಇನ್ನು ಈ ಬಗ್ಗೆ ಬರೆದಿರುವ ಪ್ರಶಾಂತ್​ ನೀಲ್​​,' ಈ ಫೋಸ್ಟ್​​ ಶೇರ್​​ ಮಾಡಿದ ನಂತ್ರ ಎಲ್ಲರಲ್ಲೂ ಕಾಡುವ ಪ್ರಶ್ನೆ ಅಂದ್ರೆ ಕೆಜಿಎಫ್​ 3 ಸಿದ್ಧವಾಗುತ್ತಿದೆಯಾ ಎಂದು. ಗೆಳೆಯರೇ ಇದಕ್ಕೆ ಉತ್ತರ ಕೊಡುವವರೆಂದರೆ ಅದು ಪ್ರಶಾಂತ್​ ನೀಲ್​ ಒಬ್ರೆ' ಎಂದು ಅಭಿಮಾನಿಗಳ ಬುದ್ಧಿಗೆ ಕೆಲಸ ಕೊಟ್ಟಿದ್ದಾರೆ. ಹಾಗೂ ಕೆಜಿಎಫ್​ 3 ಬಗ್ಗೆ ಕುತೂಹಲದ ಬೀಜ ಬಿತ್ತಿದ್ದಾರೆ.

Intro:Body:

giri film

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.