ದಕ್ಷಿಣ ಭಾರತದ ಖ್ಯಾತ ನಟ ಪ್ರಕಾಶ್ ರೈ ಕನ್ನಡ ಸಿನಿಮಾ ಹೊರತು ಪಡಿಸಿ ಇತರ ಭಾಷೆಯ ಸಿನಿಮಾಗಳಲ್ಲಿ ಪ್ರಕಾಶ್ ರಾಜ್ ಎಂದೇ ಪರಿಚಿತ. ಕನ್ನಡ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ 'ಬಿಸಿಲು ಕುದುರೆ' ಧಾರಾವಾಹಿ ಮೂಲಕ ಬಣ್ಣದ ಬದುಕು ಆರಂಭಿಸಿದ ಈ ಅದ್ಭುತ ನಟ ಇದೀಗ ಪರಭಾಷೆ ಸಿನಿಮಾಗಳಲ್ಲಿ ಬಹಳ ಖ್ಯಾತರು.

ಪ್ರಕಾಶ್ ರಾಜ್ ತೆರೆ ಮೇಲೆ ಎಷ್ಟು ನೆಗೆಟಿವ್ ಪಾತ್ರಗಳಲ್ಲಿ ನಟಿಸುತ್ತಾರೋ, ತೆರೆಯ ಹಿಂದೆ ಬಹಳ ಪ್ರಶಾಂತವಾಗಿ ಇರುತ್ತಾರೆ. ಲೈಟ್ ಬಾಯ್, ಮೇಕಪ್ ಮ್ಯಾನ್ ಎಂದೆಲ್ಲಾ ನೋಡದೆ ಪ್ರತಿಯೊಬ್ಬರನ್ನು ಬಹಳ ಆತ್ಮೀಯತೆಯಿಂದ ಮಾತನಾಡಿಸುತ್ತಾರೆ. ಅದರಲ್ಲೂ ಮಕ್ಕಳ ವಿಚಾರದಲ್ಲಂತೂ ಇನ್ನೂ ಶಾಂತವಾಗಿ ಖುಷಿಯಿಂದ ಇರುತ್ತಾರೆ. ಈ ಫೋಟೋ ಅದಕ್ಕೆ ಸಾಕ್ಷಿ. ಪ್ರಕಾಶ್ ರಾಜ್, 'ಕ್ಲಾಪ್' ಚಿತ್ರದಲ್ಲಿ ಬ್ಯುಸಿಯಿದ್ದಾರೆ. ಈ ಚಿತ್ರೀಕರಣ ಸೆಟ್ನಲ್ಲಿ ಪ್ರಕಾಶ್ ರಾಜ್ ಫ್ರೀ ಆಗಿ ಕುಳಿತಿದ್ದಾಗ ಅವರನ್ನು ಮಾತನಾಡಿಸಲು ಮಕ್ಕಳು ಬಂದಿದ್ದಾರೆ. ತಾನು ಸ್ಟಾರ್ ಎಂಬ ಹಮ್ಮು ಬಿಮ್ಮು ಇಲ್ಲದೆ, ಪ್ರಕಾಶ್ ರಾಜ್ ಆ ಮಕ್ಕಳ ಜೊತೆ ನಗುತ್ತಾ ಮಾತನಾಡುತ್ತಿದ್ದಾರೆ. ಪ್ರಕಾಶ್ ರಾಜ್ ಆ ಹುಡುಗನಿಗೆ ಅದೇನು ಕೇಳಿದರೋ, ಆ ಹುಡುಗ ಏನು ಉತ್ತರ ನೀಡಿದನೋ ಗೊತ್ತಿಲ್ಲ, ಅದರೆ ಅಲ್ಲಿದ್ದವರೆಲ್ಲಾ ನಗುತ್ತಿರುವ ದೃಶ್ಯವನ್ನು ನೀವು ನೋಡುತ್ತಿರಬಹುದು. ಈ ಫೋಟೋ ನೋಡಿ ತೆಲುಗು ಪ್ರೇಕ್ಷಕರು ವಾಹ್, ಪ್ರಕಾಶ್ ರಾಜ್ ಎನ್ನುತ್ತಿದ್ದಾರೆ.
'ಕ್ಲಾಪ್' ಚಿತ್ರದಲ್ಲಿ ಆದಿ ಪಿನಿಶೆಟ್ಟಿ, ಆಕಾಂಕ್ಷ ಸಿಂಗ್ ಹಾಗೂ ಇನ್ನಿತರರು ನಟಿಸುತ್ತಿದ್ದಾರೆ. ಈ ಚಿತ್ರವನ್ನು ಪೃಥ್ವಿ ನಿರ್ದೇಶಿಸುತ್ತಿದ್ದಾರೆ. ಬುಧವಾರ ಚಿತ್ರೀಕರಣ ಆರಂಭವಾಗಿದ್ದು, ಪ್ರಕಾಶ್ ರಾಜ್ ಹಾಗೂ ಇನ್ನಿತರರು ಚಿತ್ರೀರಕರಣದಲ್ಲಿ ಭಾಗಿಯಾಗಿದ್ದಾರೆ.