ETV Bharat / sitara

ನಾಳೆ ಸಾಹೋ ಎದುರು ಪುಣ್ಯಾತ್​ಗಿತ್ತಿರು ಸೆಣಸಾಟ - ಶ್ರದ್ದಾ ಕಪೂರ್

ಪ್ಯಾನ್ ಇಂಡಿಯಾ ಸಿನಿಮಾ ‘ಸಾಹೋ’ ಎದುರು ಕನ್ನಡ ಸಿನಿಮಾ ಪುಣ್ಯಾತ್​ಗಿತ್ತಿರು ನಾಳೆ ಬಿಡುಗಡೆ ಆಗುತ್ತಿದೆ.

saaho
author img

By

Published : Aug 29, 2019, 9:39 AM IST

Updated : Aug 29, 2019, 3:13 PM IST

ಪ್ರಭಾಸ್ ಹಾಗೂ ಶ್ರದ್ದಾ ಕಪೂರ್ ಅಭಿನಯದ 300 ಕೋಟಿ ವೆಚ್ಚದ ‘ಸಾಹೋ’ ಸಿನಿಮಾ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ‘ಸಾಹೋ’ ಕರ್ನಾಟಕದಲ್ಲೂ ಸಹ ಸುಮಾರು 250 ಕ್ಕೂ ಹೆಚ್ಚು ಪರದೆಗಳಲ್ಲಿ ಅಬ್ಬರಿಸಲಿದೆ.

ಎರಡು ವರ್ಷಗಳ ಬಳಿಕ ತೆಲುಗು ಚಿತ್ರರಂಗದ ಜನಪ್ರಿಯ ನಾಯಕ ಪ್ರಭಾಸ್ ಅಭಿನಯದ ಸಿನಿಮಾ ಸಾಹೋ ಬಿಡುಗಡೆ ಆಗುತ್ತಿದೆ. ಈ ಚಿತ್ರವನ್ನು ಸುಜೀತ್ ರಚನೆ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಿವುಡ್​ನ ಹಲವು ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಜೊತೆಗೆ ಕನ್ನಡದ ಹೆಮ್ಮೆಯ ಪ್ರಕಾಶ್ ಬೆಳವಾಡಿ ಸಹ ಅಭಿನಯಿಸಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾ ‘ಸಾಹೋ’ ಎದುರು ‘ಪುಣ್ಯಾತ್​ಗಿತ್ತಿರು’ ಕೂಡ ನಾಳೆ ತೆರೆಗೆ ಅಪ್ಪಳಿಸಲಿದೆ.

ಸತ್ಯ ಮೂವಿ ಪ್ರೊಡಕ್ಷನ್ ಅಡಿಯಲ್ಲಿ ಸತ್ಯನಾರಾಯಣ ಮನ್ನೆ ಅವರ ನಿರ್ಮಾಣದ ‘ಪುಣ್ಯಾತ್​ಗಿತ್ತಿರು’ ಸಿನಿಮಾ ಶುಕ್ರವಾರ ತೆರೆಗೆ ಬರುತ್ತಿದೆ. ನಾಲ್ವರು ಅನಾಥ ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅನೇಕ ಘಟನೆಗಳನ್ನು ಎದುರಿಸುತ್ತಾ, ತಾವು ಎಷ್ಟು ಗಟ್ಟಿಗಿತ್ತಿರು ಅನ್ನೋದನ್ನು ಸಾಬೀತುಪಡಿಸುವ ಕಥಾ ಹಂದರವನ್ನು ಇದು ಹೊಂದಿದೆ.

ರಾಜ್.ಬಿ.ಎನ್ ನಿರ್ದೇಶನದ ಈ ಚಿತ್ರದಲ್ಲಿ ಪುಣ್ಯಾತ್​ಗಿತ್ತಿಯರಾಗಿ ಮಮತಾ ರಾವುತ್, ಐಶ್ವರ್ಯಾ, ದಿವ್ಯಶ್ರೀ, ಸಂಭ್ರಮ ಅವರು ಕಾಣಿಸಿಕೊಂಡಿದ್ದಾರೆ. ನಾಲ್ವರು ನಾಯಕಿಯರು ವಿಭಿನ್ನ ಪಾತ್ರಗಳಲ್ಲಿ ಮಿಂಚಲಿದ್ದಾರೆ.

ಶರತ್ ಕುಮಾರ್ ಜಿ ಛಾಯಾಗ್ರಹಣ, ರಾಮಾನುಜಮ್ ಸಂಗೀತ, ಶಿವಪ್ರಸಾದ್ ಯಾದವ್ ಸಂಕಲನ, ದಿನೇಶ್​ ಕುಮಾರ್ ಹಿನ್ನೆಲೆ ಸಂಗೀತ, ತ್ರಿಭುವನ್ ನೃತ್ಯ, ವಿನೋದ್ ಸಾಹಸ, ಡಾ.ವಿ ನಾಗೇಂದ್ರ ಪ್ರಸಾದ್, ರಾಜ್ ಬಿ ಎ, ಎನ್ ಸ್ವರಾಜ್, ಕೆ.ಶಿ ಮೋಹನ್ ಗೀತೆಗಳು, ಸಂದೀಪ್ ಕನಕಪುರ ಸಂಭಾಷಣೆ, ಜಾನ್ಸನ್ ಎಫೆಕ್ಟ್ಸ್ಅನ್ನು ಈ ಚಿತ್ರಕ್ಕೆ ಒದಗಿಸಿದ್ದಾರೆ.

ನಾಳೆ 300 ಕೋಟಿ ಸಾಹೋ ಎದುರು ಈ 50 ಲಕ್ಷದ ಪುಣ್ಯಾತ್ ಗಿತ್ತಿರು

ನಾಳೆ ಆಗಸ್ಟ್ 30, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ರಭಾಸ್ ಹಾಗೂ ಶ್ರದ್ದ ಕಪೂರ್ ಅಭಿನಯದ 300 ಕೋಟಿ ವೆಚ್ಚದ ಸಾಹೋ ಬಿಡುಗಡೆ ಆಗುತ್ತಿದೆ. ಸಾಹೋ ಕರ್ನಾಟಕದಲ್ಲೂ ಸಹ ಸುಮಾರು 250 ಕ್ಕೂ ಹೆಚ್ಚು ಪರದೆಗಳಲ್ಲಿ ಅಬ್ಬರಿಸುತ್ತಿದೆ.

ನಾಲ್ಕು ವರ್ಷಗಳ ಬಳಿಕ ತೆಲುಗು ಚಿತ್ರ ರಂಗದ ಮನೆ ಮಾತದ ನಾಯಕ ಪ್ರಭಾಸ್ ಅಭಿನಯದ ಸಿನಿಮಾ ಸಾಹೋ ಬಿಡುಗಡೆ ಆಗುತ್ತಿದೆ. ಅವರ ಬಾಹುಬಲಿ ದಿ ಬಿಗಿನ್ನಿಂಗ್... ಬಾಕ್ಸ್ ಆಫೀಸು ಅಲ್ಲಿ ಚಿಂದಿ ಉಡಾಯಿಸಿದ್ದು ಗೊತ್ತೇ ಇದೆ.

ಸಾಹೋ ಚಿತ್ರವನ್ನ ಸುಜೀತ್ ಅವರು ರಚನೆ ಮಾಡಿ ನಿರ್ದೇಶನ ಸಹ ಮಾಡಿದ್ದಾರೆ. ಹಿಂದಿ ಚಿತ್ರ ರಂಗದ ಹಲವಾರು ಕಲಾವಿದರು ಪಾತ್ರವರ್ಗದಲ್ಲಿ ಇದ್ದಾರೆ. ಜೊತೆಗೆ ಕನ್ನಡದ ಹೆಮ್ಮೆಯ ಪ್ರಕಾಶ್ ಬೆಳವಾಡಿ ಸಹ ಅಭಿನಯಿಸಿದ್ದಾರೆ ಸಾಹೋ ಚಿತ್ರದಲ್ಲಿ.

ಸಾಹೋ ಫ್ಯಾನ್ ಇಂಡಿಯ ಅಲ್ಲದೆ ವಿಶ್ವ ಮಟ್ಟದಲ್ಲೂ ಸಹ ಬಿಡುಗಡೆ ಆಗುತ್ತಿರುವ ಸಿನಿಮಾ ಎದುರು ಸುಮಾರು 50 ಲಕ್ಷ ವೆಚ್ಚದ ಕನ್ನಡ ಸಿನಿಮಾ ಪುಣ್ಯಾತ್ ಗಿತ್ತಿರು ಬಿಡುಗಡೆ ಆಗುತ್ತಿದೆ.

ಪುಣ್ಯಾತ್ ಗಿತ್ತಿರು

ಸತ್ಯ ಮೂವಿ ಪ್ರೊಡಕ್ಷನ್ ಅಡಿಯಲ್ಲಿ ಸತ್ಯನಾರಾಯಣ ಮನ್ನೆ ಅವರ ನಿರ್ಮಾಣದ ಈ ಸಿನಿಮಾ ಪುಣ್ಯಾತ್ ಗಿತ್ತಿರು ನಾಲ್ಕು ಅನಾಥ ಹೆಣ್ಣು ಮಕ್ಕಳು ಬೆಳೆದು ದೊಡ್ಡವರಾದ ಮೇಲೆ ಅನೇಕ ಘಟನೆಗಳನ್ನು ಅನುಭವಿಸುತ್ತಾ ತಾವು ಎಷ್ಟು ಗಟ್ಟಿ ಗಿತ್ತಿರು ಎಂದು ಸಹ ಪ್ರೂವ್ ಮಾಡಿಕೊಳ್ಳುವ ಸಿನಿಮಾ.

ರಾಜ್ ಬಿ ಎನ್ ನಿರ್ದೇಶನದಲ್ಲಿ ನಾಲ್ಕು ಪುಣ್ಯಾತ್ ಗಿತ್ತಿರು – ಮಮತ ರಾವುಟ್ ಆರ್ಟಿಸ್ಟ್ ಆರತಿ, ಆಯಿಶು ಬೈ ಬಡ್ಕಿ ಭವ್ಯ, ದಿವ್ಯಶ್ರೀ ಮೀಟ್ರು ಮಂಜುಳ, ಸಂಭ್ರಮ ಸುಳ್ಳಿ ಸುಜಾತ ಆಗಿ ಅಭಿನಯಿಸಿದ್ದಾರೆ. ಶೋಭರಾಜ್, ಕುರಿ ರಂಗ, ಗೋವಿಂದೆ ಗೌಡ, ಸುಧೀರ್ ಹಾಗೂ ಇತರರು ತಾರಗಣದಲ್ಲಿದ್ದಾರೆ.

ಶರತ್ ಕುಮಾರ್ ಜಿ ಛಾಯಾಗ್ರಹಣ, ರಾಮನುಜಮ್ ಸಂಗೀತ, ಶಿವಪ್ರಸಾದ್ ಯಾದವ್ ಸಂಕಲನ, ದಿನೇಷ್ ಕುಮಾರ್ ಹಿನ್ನಲೆ ಸಂಗೀತ, ತ್ರಿಭುವನ್ ನೃತ್ಯ, ವಿನೋದ್ ಸಾಹಸ, ಡಾ ವಿ ನಾಗೇಂದ್ರ ಪ್ರಸಾದ್, ರಾಜ್ ಬಿ ಎ, ಎನ್ ಸ್ವರಾಜ್,, ಶಿ ಮೋಹನ್ ಗೀತೆಗಳು, ಸಂದೀಪ್ ಕನಕಪುರ ಸಂಭಾಷಣೆ, ಜಾನ್ಸನ್ ಎಫ್ಫೆಕ್ಟ್ಸ್ ಈ ಚಿತ್ರಕ್ಕೆ ಒದಗಿಸಿದ್ದಾರೆ. 

Last Updated : Aug 29, 2019, 3:13 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.