ಮುಂಬೈ (ಮಹಾರಾಷ್ಟ್ರ): ಬಾಹುಬಲಿ ಖ್ಯಾತಿಯ ಟಾಲಿವುಡ್ ರೆಬೆಲ್ ಸ್ಟಾರ್ ಪ್ರಭಾಸ್ ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದು ಘೋಷಣೆಯಾಗಿದ್ದು ಪ್ರಭಾಸ್ ಅಭಿಮಾನಿಗಳ ಸಂತಸ ಇಮ್ಮಡಿಗೊಳಿಸಿದೆ.
ಆದಿಪುರುಷ್ ಎಂಬ ಟೈಟಲ್ ಸಿನಿಮಾಗಿದ್ದು, ಟೈಟಲ್ ಪೋಸ್ಟರ್ ಅನ್ನು ಟ್ವಿಟರ್ನಲ್ಲಿ ನಿರ್ದೇಶಕ ಓಂ ಪ್ರಕಾಶ್ ರಾವತ್ ಹಂಚಿಕೊಂಡಿದ್ದಾರೆ. ''ಸೆಲೆಬ್ರೇಟಿಂಗ್ ದ ವಿಕ್ಟರಿ ಆಫ್ ಗುಡ್ ಓವರ್ ಇವಿಲ್'' ಎಂದು ಬರೆದು ಕೊಂಡಿದ್ದಾರೆ.
- " class="align-text-top noRightClick twitterSection" data="
">
ಪ್ರಭಾಸ್ ಅವರ 22ನೇ ಚಿತ್ರ ಇದಾಗಿದ್ದು, ಭೂಷಣ್ ಕುಮಾರ್, ಕೃಷ್ಣಕುಮಾರ್, ಓಂ ರಾವತ್, ರಾಜೇಶ್ ನಾಯರ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ಹಿಂದಿ ಹಾಗೂ ತೆಲುಗು ಭಾಷೆಗಳಲ್ಲಿ ಸಿನಿಮಾ ಹೊರಬರಲಿದ್ದು, ತಮಿಳು, ಮಲಯಾಳಂ, ಕನ್ನಡ ಭಾಷೆಗಳಿಗೆ ಡಬ್ಬಿಂಗ್ ಆಗಲಿದೆ.
ಓಂ ರಾವತ್ ನಿರ್ದೇಶನದಲ್ಲಿ ಇದು ಮೊದಲನೇ ಸಿನಿಮಾ ಆಗಿದ್ದು, ಈ ಮೊದಲು ಭೂಷಣ್ ಕುಮಾರ್ ಸಾಹೋ ಚಿತ್ರಕ್ಕೆ ಭೂಷಣ್ಕುಮಾರ್ ಜೊತೆಯಾಗಿದ್ದರು. ಮುಂದಿನ ವರ್ಷ ಈ ಚಿತ್ರ ಸೆಟ್ಟೇರುವ ಸಾಧ್ಯತೆ ಇದ್ದು, 2022ಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ.