ETV Bharat / sitara

'ಯುವರತ್ನ' ಚಿತ್ರದ 'ಪವರ್​​ ಆಫ್​ ಯೂತ್'​ ಹಾಡಿನ ಪ್ರೋಮೋ ರಿಲೀಸ್​​ - ಯುವರತ್ನ ಸಿನಿಮಾದ ಪವರ್​ ಆಫ್​ ಯೂತ್​ ಹಾಡು

ವಿಶೇಷ ಏನಂದ್ರೆ ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್​​​​​ ಆನಂದ್​ ರಾಮ್​​ ಕೂಡ ಹೆಜ್ಜೆ ಹಾಕಿದ್ದಾರೆ. 'ಹೆಸರು ಮಾಡು ಹರಿರಾಗೋ ಹಾಗೆ.. ಉಸಿರು ಹೋದರು ಹೆಸರಿರೊ ಹಾಗೆ.. ಆ ಚರಿತ್ರಗೆ ನೀನೆ ಮುನ್ನುಡಿ' ಎಂಬ ಸಾಲುಗಳು ಹಾಡಿನ ಮೇಲೆ ಹುತೂಹಲ ಹೆಚ್ಚಿಸಿವೆ..

Power of Youth Promo Released
'ಯುವರತ್ನ' ಚಿತ್ರದ 'ಪವರ್​​ ಆಫ್​ ಯೂತ್'​ ಹಾಡಿದ ಪ್ರೋಮೋ ರಿಲೀಸ್​​
author img

By

Published : Nov 27, 2020, 5:21 PM IST

ಪವರ್​​ಸ್ಟಾರ್​​ ಪುನೀತ್​ ರಾಜ್​ಕುಮಾರ್​​ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ಯುವರತ್ನ ಸಿನಿಮಾ ದಿನದಿಂದ ದಿನಕ್ಕೆ ಅಭಿಮಾನಿಗಳಿಗೆ ಕುತೂಹಲದ ಆಗರವಾಗುತ್ತಿದೆ. ಒಂದಿಲ್ಲೊಂದು ಕ್ಯೂರಿಯಾಸಿಟಿ ಮಾಹಿತಿ ಹೊರ ಬಿಡುತ್ತಿರುವ ಚಿತ್ರತಂಡ ಅಭಿಮಾನಿಗಳ ಕೌತುಕ ಹೆಚ್ಚಿಸುತ್ತಿದೆ.

ಯುವರತ್ನ ಸಿನಿಮಾದ ಪವರ್​​ ಆಫ್​​ ಯೂತ್​ ಹಾಡನ್ನು ಇದೇ ಡಿಸೆಂಬರ್​​ 2ರಂದು ರಿಲೀಸ್​​ ಮಾಡುತ್ತೇವೆ ಎಂದು ಪುನೀತ್​​ ರಾಜ್​​ಕುಮಾರ್​ ಮತ್ತು ನಿರ್ದೇಶಕ ಸಂತೋಷ್​​​​​ ಆನಂದ್​ ರಾಮ್​ ತಿಳಿಸಿದ್ದರು. ಇದೀಗ ಈ ಹಾಡಿನ ಪ್ರೋಮೋ ಒಂದನ್ನು ಬಿಡುಗಡೆ ಮಾಡಿ ಪವರ್​ ಆಫ್​​​ ಯೂತ್​​ ಹಾಡಿನ ಬಗೆಗಿನ ಆಸಕ್ತಿ ಹೆಚ್ಚಿಸಿದ್ದಾರೆ.

ಇದೀಗ ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಪುನೀತ್​​ ಗಿಟಾರ್​​ ಹಿಡಿದು ಸ್ಟೈಲಿಶ್​​ ಲುಕ್​​ನಲ್ಲಿ ಡ್ಯಾನ್ಸ್​​ ಮಾಡಿದ್ದಾರೆ. ಮತ್ತೊಂದು ವಿಶೇಷ ಏನಂದ್ರೆ ಈ ಪ್ರೋಮೋದಲ್ಲಿ ನಿರ್ದೇಶಕ ಸಂತೋಷ್​​​​​ ಆನಂದ್​ ರಾಮ್​​ ಕೂಡ ಹೆಜ್ಜೆ ಹಾಕಿದ್ದಾರೆ. 'ಹೆಸರು ಮಾಡು ಹರಿರಾಗೋ ಹಾಗೆ.. ಉಸಿರು ಹೋದರು ಹೆಸರಿರೊ ಹಾಗೆ.. ಆ ಚರಿತ್ರಗೆ ನೀನೆ ಮುನ್ನುಡಿ' ಎಂಬ ಸಾಲುಗಳು ಹಾಡಿನ ಮೇಲೆ ಹುತೂಹಲ ಹೆಚ್ಚಿಸಿವೆ.

ಇನ್ನು, ಪವರ್​​ ಆಫ್​​​​​ ಯೂತ್​ ಹಾಡಿಗೆ ಸಂತೋಷ್​​​ ಆನಂದ್​ರಾಮ್​​ ಸಾಹಿತ್ಯ ಬರೆದಿದ್ದು, ತಮನ್​​ ಸಂಗೀತ ನೀಡಿದ್ದಾರೆ. ಯುವರತ್ನ ಚಿತ್ರಕ್ಕೆ ಕೆಜಿಎಫ್​ ನಿರ್ಮಾಪಕ ವಿಜಯ್​​ ಕಿರಗಂದೂರು ಬಂಡವಾಳ ಹಾಕಿದ್ದಾರೆ.

  • " class="align-text-top noRightClick twitterSection" data="">

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.