ETV Bharat / sitara

ಕೊರೊನಾ ಕಾಲಘಟ್ಟ: ಹಾಲಿವುಡ್​ನಲ್ಲಿ ಲಿಪ್​ಲಾಕ್​ ಸೀನ್​ ಹೇಗೆ ಚಿತ್ರಿಸುವರು ಗೊತ್ತೇ? - ಕೊರೊನಾ ಬಳಿಕ ಸನಿಹದ ದೃಶ್ಯಾವಳಿ ಚಿತ್ರೀಕರಣ

ಹಾಲಿವುಡ್‌ನ ಸಿನಿಮಾ ಮತ್ತು ಟಿವಿ ಉದ್ಯಮವು ಜೂನ್ 12ರಿಂದ ಪುನರಾರಂಭಗೊಳ್ಳುವ ನಿರೀಕ್ಷೆಯಿದೆ. ಸ್ಟುಡಿಯೋ ಮತ್ತು ಚಲನಚಿತ್ರ ನಿರ್ಮಾಪಕರು ಇದಕ್ಕಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

COVID-19
ಕೋವಿಡ್
author img

By

Published : Jun 8, 2020, 4:26 PM IST

ಲಾಸ್ ಏಂಜಲೀಸ್: ಕೊರೊನಾದಿಂದಾಗಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲೇಬೇಕಾಗಿರುವುದರಿಂದ ಹಾಲಿವುಡ್​ ಸಿನಿಮಾಗಳ ಲಿಪ್​ಲಾಕ್​ ಸೀನ್​ಗಳಿಗೆ ಬಹಳಷ್ಟು ತೊಂದರೆಯಾಗಿದೆ.

ಮುಂದಿನ ದಿನಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸಾಮಾನ್ಯ ಆಗುವುದರಿಂದ ಹಾಲಿವುಡ್ ಸ್ಟುಡಿಯೋಗಳು ಸಿಜಿಐ (ಗ್ರಾಫಿಕ್ಸ್ ದೃಶ್ಯಾವಳಿ) ಬಳಸಿ ಲಿಪ್​ಲಾಕ್​ನಂತಹ ಸೀನ್​ಗಳನ್ನು ಸೃಷ್ಟಿಸಲು ಯೋಜಿಸುತ್ತಿವೆ.

ಹಾಲಿವುಡ್​​ನಲ್ಲಿ​​ ತೀರ ಸನಿಹದ ಲಿಪ್​ಲಾಕ್​ ದೃಶ್ಯಾವಳಿಗಳನ್ನು ಶೂಟ್​ ಮಾಡಿದ ನಂತರ ಗ್ರಾಫಿಕ್​ ಎಡಿಟಿಂಗ್​ ಮಾಡಲಾಗುತ್ತಿದೆ. ಕೆಲವು ಸ್ಟುಡಿಯೋಗಳು ಸಿಜಿಐ ಬಳಸಿ ಕಿಸ್ಸಿಂಗ್​ ದೃಶ್ಯಗಳನ್ನು ನಿಭಾಯಿಸುವ ಯೋಜನೆ ಹಾಕಿಕೊಂಡಿದ್ದರೆ ಮತ್ತೆ ಕೆಲವರು ಅವುಗಳನ್ನು ಸಂಪೂರ್ಣವಾಗಿ ರದ್ದುಗೊಳಿಸಲಿದ್ದಾರೆ ಎಂದು ದಿ ಸನ್​ ವರದಿ ಮಾಡಿದೆ.

ಉದ್ಯಮದ ವರದಿಗಳ ಪ್ರಕಾರ ತಾರಾಗಣದಲ್ಲಿರುವವರು ಮತ್ತು ಸಿಬ್ಬಂದಿಯನ್ನು ನಿತ್ಯ ಕೊರೊನಾ ವೈರಸ್​​ ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕೈ ತೊಳೆಯುವ ಬಗ್ಗೆ ಟ್ಯುಟೋರಿಯಲ್ ನೀಡಲಾಗುತ್ತದೆ. ಚಲನಚಿತ್ರ ಸಂಪಾದಕರ ವ್ಯಾಪಾರ ಸಂಘದಿಂದ 22 ಪುಟಗಳ ಮಾರ್ಗಸೂಚಿ ರಚಿಸಲಾಗಿದೆ. ಕ್ಯಾಲಿಫೋರ್ನಿಯಾ ಗವರ್ನರ್ ಗೇವಿನ್ ನ್ಯೂಸಮ್ ಅವರು ಜೂನ್ 12ರಿಂದ ಚಿತ್ರೀಕರಣ ಮರುಆರಂಭಕ್ಕೆ ಹಸಿರು ನಿಶಾನೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.