ಅರ್ಜುನ್ ರೆಡ್ಡಿ, ಗೀತ ಗೋವಿಂದಂ ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ನಟ ವಿಜಯ್ ದೇವರಕೊಂಡ. ಇವರ ಹೆಸರಿನಲ್ಲಿ ಹಲವಾರು ಅಭಿಮಾನಿ ಗ್ರೂಪ್ಗಳಿದ್ದು, ಸಾವಿರಾರು ಅಭಿಮಾನಿಗಳು ಇವರ ನಟನೆ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ವ್ಯಕ್ತ ಪಡಿಸುತ್ತಾರೆ. ಆದ್ರೆ ಇಲ್ಲೊಬ್ಬ ವಿಕಲ ಚೇತನ ಹೆಣ್ಣು ಮಗಳು ವಿಜಯ್ ದೇವರಕೊಂಡಗೆ ವಿಶೇಷ ಗಿಫ್ಟ್ ನೀಡಿದ್ದಾರೆ.
ಇದನ್ನೂ ಓದಿ : 'ದಿಯಾ' ಹೀರೋ ಜೊತೆ ನಟಿಸುತ್ತಿದ್ದಾರೆ 'ಲವ್ ಮಾಕ್‌ಟೈಲ್' ನಿಧಿಮಾ
ಹೌದು ಎರಡೂ ಕೈಗಳು ಇಲ್ಲದ ಸ್ವಪ್ನಿಕಾ ಎಂಬುವವರು ಬಾಯಿಯಿಂದಲೇ ವಿಜಯ್ ದೇವರಕೊಂಡ ಅವರ ಚಿತ್ರವನ್ನು ಬಿಡಿಸಿದ್ದಾರೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ಹಾಕಿದ್ದು, ನಮ್ಮ ಹೊಸ ಚಿತ್ರ ಕಲೆ ಎಂದು ಬರೆದಿದ್ದಾರೆ. ಇದೇ ವಿಡಿಯೋವನ್ನು ವಿಜಯ್ ದೇವಕೊಂಡ ಕೂಡ ತಮ್ಮ ಟ್ವಿಟರ್ನಲ್ಲಿ ಶೇರ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಭಾವ ಚಿತ್ರವನ್ನು ಬಿಡಿಸಿರುವ ವಿಡಿಯೋ ಶೇರ್ ಮಾಡಿ ಮೆಚ್ಚುಗೆ ವ್ಯಕ್ತ ಪಡಿಸಿರುವ ವಿಜಯ್ ದೇವರಕೊಂಡ, 'ಅಪಾರವಾದ ಪ್ರೀತಿಯನ್ನು ನೀಡುತ್ತಿದ್ದೇನೆ. ಹಾಗೆ ನೀವು ನಮಗೆ ಶಕ್ತಿ ಮತ್ತು ಸ್ಪೂರ್ತಿಯಾಗಿದ್ದೀರಿ. ಚಿತ್ರ ಬಿಡಿಸಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ.
-
Sending you lots of love Swapnika.
— Vijay Deverakonda (@TheDeverakonda) December 11, 2020 " class="align-text-top noRightClick twitterSection" data="
And taking strength and inspiration from you.
Thank you ❤️ https://t.co/8kzZUijuGT
">Sending you lots of love Swapnika.
— Vijay Deverakonda (@TheDeverakonda) December 11, 2020
And taking strength and inspiration from you.
Thank you ❤️ https://t.co/8kzZUijuGTSending you lots of love Swapnika.
— Vijay Deverakonda (@TheDeverakonda) December 11, 2020
And taking strength and inspiration from you.
Thank you ❤️ https://t.co/8kzZUijuGT