ETV Bharat / sitara

ಗಾಯಾಳು ಪೊಲೀಸ್‌ ಪೇದೆಗೆ ದರ್ಶನ್​​ ಕೊಟ್ಟ ₹2 ಲಕ್ಷ ನೆರವು ತಿರಸ್ಕರಿಸಿದ ಅಧಿಕಾರಿಗಳು! - ದರ್ಶನ್​​ ಹುಟ್ಟಹಬ್ಬ

ನಟ ದರ್ಶನ್ ಹುಟ್ಟು ಹಬ್ಬದ ವೇಳೆ ಅಭಿಮಾನಿಗಳಿಂದ ಕಲ್ಲೇಟು ತಿಂದಿದ್ದ ಕಾನ್​​ಸ್ಟೇಬಲ್ ದೇವರಾಜ್ ಚಿಕಿತ್ಸೆಗಾಗಿ ದರ್ಶನ್ ಪರ ಹಣ ನೀಡಲು ಬಂದಿದ್ದ ವ್ಯವಸ್ಥಾಪರ ಹಣವನ್ನು ಜ್ಞಾನಭಾರತಿ ಪೊಲೀಸರು ನಿರಾಕರಿಸಿದ್ದಾರೆ.

police beaten by  darshan fans in his birthday
ದರ್ಶನ್​​ ಕೊಟ್ಟ 2 ಲಕ್ಷ ತಿರಸ್ಕರಿಸಿದ ಪೊಲೀಸ್​​​ ಅಧಿಕಾರಿಗಳು!
author img

By

Published : Feb 22, 2020, 5:33 PM IST

ಬೆಂಗಳೂರು : ನಟ ದರ್ಶನ್ ಹುಟ್ಟು ಹಬ್ಬದ ವೇಳೆ ಅಭಿಮಾನಿಗಳಿಂದ ಕಲ್ಲೇಟು ತಿಂದಿದ್ದ ಗಾಯಾಳು ಪೊಲೀಸ್‌ ಕಾನ್​​ಸ್ಟೇಬಲ್ ದೇವರಾಜ್ ಅವರನ್ನ ಚಿಕಿತ್ಸೆಗಾಗಿ ಆಸ್ಪತ್ರೆ ದಾಖಲಿಸಿದ್ದಾರೆ. ಆಸ್ಪತ್ರೆ ಖರ್ಚಿಗೆಂದು ಹಣ ನೀಡಲು ದರ್ಶನ್ ಪರ ಬಂದಿದ್ದ ಅವರ ಮ್ಯಾನೇಜರ್‌ನ ಪೊಲೀಸರು ವಾಪಸ್‌ ಕಳುಹಿಸಿದ್ದಾರೆ. ಹಣದ ನೆರವು ಪಡೆಯಲು ಪೊಲೀಸರು ನಿರಾಕರಿಸಿದ್ದಾರೆ.

ಆರ್‌ಆರ್‌ನಗರದ ಐಡಿಯಲ್​ ​ಹೋಮ್ ಬಳಿ ಇದೇ ತಿಂಗಳು 15ರಂದು ದರ್ಶನ್ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳು‌ ಜಮಾವಣೆಗೊಂಡಿದ್ದರು. ಭದ್ರತೆಗಾಗಿ ಕಾನ್​​ಸ್ಟೇಬಲ್ ದೇವರಾಜ್ ಅವರನ್ನು‌ ನಿಯುಕ್ತಿಗೊಳಿಸಲಾಗಿತ್ತು. ಈ ವೇಳೆ ಅಭಿಮಾನಿಗಳ‌ ತಳ್ಳಾಟ ನಿಯಂತ್ರಿಸಲು ಹೋದ ದೇವರಾಜ್ ಮುಖಕ್ಕೆ ಗುಂಪಿನಲ್ಲಿದ್ದ ಅಭಿಮಾನಿಯೊಬ್ಬ ಕಲ್ಲು ಎಸೆದಿದ್ದ. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ದೇವರಾಜ್ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು.

police beaten by  darshan fans in his birthday
ದರ್ಶನ್​​ ಕೊಟ್ಟ ₹2 ಲಕ್ಷ ತಿರಸ್ಕರಿಸಿದ ಪೊಲೀಸ್​​​ ಅಧಿಕಾರಿಗಳು!

ಚಿಕಿತ್ಸಾ ವೆಚ್ಚವು ಪೊಲೀಸ್ ಇಲಾಖೆಯ ಆರೋಗ್ಯ ಯೋಜನೆಯಡಿ ಬರುವುದಿಲ್ಲವಾದರೂ ಇದೊಂದು ವಿಶೇಷ ಪ್ರಕರಣ ಎಂದು ಭಾವಿಸಿ ಹಿರಿಯ ಪೊಲೀಸ್ ಅಧಿಕಾರಿಗಳೇ ಚಿಕಿತ್ಸಾ ವೆಚ್ಚ ಭರಿಸಲು ಕ್ರಮ ಕೈಗೊಂಡಿದ್ದರು. ಈ ಮಧ್ಯೆ ದರ್ಶನ್ ಅವರ ವ್ಯವಸ್ಥಾಪಕರು ಚಿಕಿತ್ಸಾ ವೆಚ್ಚಕ್ಕಾಗಿ 2 ಲಕ್ಷ ರೂ. ನೀಡುವುದಾಗಿ ಮುಂದೆ ಬಂದಿದ್ದರು.

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿ ನಿಮ್ಮ ಬೇಜವಾಬ್ದಾರಿಯಿಂದಲೇ ಈ ಘಟನೆ ಸಂಭವಿಸಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕೈಗೊಳ್ಳುತ್ತೇವೆ ಎಂದು ಪೊಲೀಸರು ಹಣವನ್ನು ತಿರಸ್ಕಾರ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.