ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮತ್ತು ರಶ್ಮಿಕಾ ಮಂದಣ್ಣ ಲೀಡ್ ರೋಲ್ನಲ್ಲಿ ನಟಿಸಿರುವ ಪೊಗರು ಚಿತ್ರದ ಬಿಡುಗಡೆ ದಿನಾಂಕವನ್ನು ನಿರ್ದೇಶಕರು ತಿಳಿಸಿದ್ದಾರೆ.
ಈಗಾಗಲೇ ಪೊಗರು ಸಿನಿಮಾ ಶೂಟಿಂಗ್ ಸಂಪೂರ್ಣ ಮುಗಿದಿದ್ದು, ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಈ ನಡುವೆ ನಿರ್ದೇಶಕ ನಂದ ಕಿಶೋರ್ ಚಿತ್ರ ಬಿಡುಗಡೆಗೆ ಎರಡು ದಿನಾಂಕಗಳನ್ನು ಹೇಳಿದ್ದಾರೆ ಎನ್ನಲಾಗಿದೆ.
ಹಲವು ಸಿನಿಮಾದ ನಿರ್ಮಾಪಕರು ಕೊರೊನಾ ಹೊಡೆತಕ್ಕೆ ಬೆದರಿದ್ದು, ತಮ್ಮ ಹೊಸ ಸಿನಿಮಾಗಳನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಆದ್ರೆ ನಂದ ಕಿಶೋರ್ ಒಂಚೂರ ಧೈರ್ಯ ಮಾಡಿದ್ದು, ಪೊಗರು ಚಿತ್ರವನ್ನು ರಿಲೀಸ್ ಮಾಡಲು ಮುಂದಾಗಿದ್ದಾರೆ.
ಪೊಗರು ಸಿನಿಮಾವನ್ನು ಇದೇ ಡಿಸೆಂಬರ್ 25 ಅಥವಾ ಜನವರಿ 14ರಂದು ತೆರೆ ಮೇಲೆ ತರುವ ತಯಾರಿ ನಡೆದಿದೆಯಂತೆ. ಕೊರೊನಾ ಪರಿಸ್ಥಿತಿಯಲ್ಲಿ ಚಿತ್ರರಂಗ ಸ್ಥಗಿತಗೊಂಡಿದೆ. ಮತ್ತೆ ಚಿತ್ರರಂಗವನ್ನು ಪುನಶ್ಚೇತನಗೊಳಿಸಲು ಯಾರಾದರೂ ಮುಂದೆ ಬರಬೇಕಿದೆ. ಆಗ ಮಾತ್ರ ಚೇತರಿಕೆ ಸಾಧ್ಯ ಎಂದು ನಂದಕಿಶೋರ್ ಹೇಳಿದ್ದಾರೆ.
ಪೊಗರು ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಟೀಚರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಇವರ ಜೊತೆ ಕುರಿ ಪ್ರತಾಪ್, ಚಿಕ್ಕಣ್ಣ, ಮಯೂರಿ, ರವಿಶಂಕರ್, ನಟಿಸಿದ್ದಾರೆ.
ಪೊಗರಿನ ಮತ್ತೊಂದು ವಿಶೇಷ ಏನಂದ್ರೆ, ಅಂತಾರಾಷ್ಟ್ರೀಯ ಬಾಡಿಬಿಲ್ಡರ್ಗಳಾದ ಕೈ ಗ್ರೀನ್, ಮೋರ್ಗನ್ ಅಸ್ಟೆ, ಜೋಹಾನ್ ಲ್ಯೂಕಾಸ್ ಕೂಡ ನಟಿಸಿದ್ದಾರೆ.