ETV Bharat / sitara

ರಾಮಮಂದಿರ ನಿರ್ಮಾಣಕ್ಕಾಗಿ 30 ಲಕ್ಷ ರೂ. ದೇಣಿಗೆ ನೀಡಿದ ಪವನ್​ ಕಲ್ಯಾಣ್​! - ನಟ ಪವನ್ ಕಲ್ಯಾಣ ಧನಸಹಾಯ

ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮನ ಭವ್ಯ ಮಂದಿರಕ್ಕಾಗಿ ನಟ ಪವನ್ ಕಲ್ಯಾಣ್​ 30 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

Pawan Kalyan
Pawan Kalyan
author img

By

Published : Jan 23, 2021, 1:55 AM IST

ಅಮರಾವತಿ(ಆಂಧ್ರಪ್ರದೇಶ): ಅಯೋದ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಶ್ರೀರಾಮ ಮಂದಿರಕ್ಕಾಗಿ ಈಗಾಗಲೇ ಸಾವಿರಾರು ಜನರು ದೇಣಿಗೆ ನೀಡುತ್ತಿದ್ದು, ಇದೀಗ ನಟ ಪವನ್ ಕಲ್ಯಾಣ್ ಕೂಡ ಅದಕ್ಕೆ ಕೈ ಜೋಡಿದ್ದಾರೆ.

ಓದಿ: ಶ್ರೀರಾಮ ಮಂದಿರ ನಿಧಿ ಸಂಗ್ರಹ: ಸ್ಕೂಟಿ ಮೇಲೆ ತೆರಳಿ ದೇಣಿಗೆ ಸಂಗ್ರಹಿಸಿದ ಶಾಸಕಿ!

ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಜನಸೇನಾ ಪಕ್ಷದ ಸಂಸ್ಥಾಪಕ ಪವನ್​ ಕಲ್ಯಾಣ್​ 30 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಇದರ ಜತೆಗೆ 11 ಸಾವಿರ ರೂ.ಗಳ ಮತ್ತೊಂದು ಚೆಕ್​ ಸಿಬ್ಬಂದಿಗೆ ನೀಡಿದ್ದಾರೆ. ತಿರುಪತಿಗೆ ಆಗಮಿಸಿದ್ದ ನಟ ಪವನ್ ಕಲ್ಯಾಣ್​, ಮಾಜಿ ಸಚಿವ ಕಾಮಿನೇನಿ ಶ್ರೀನಿವಾಸ್​ ಅವರ ಸಮ್ಮುಖದಲ್ಲಿ ಚೆಕ್​ ನೀಡಿದ್ದಾರೆ. ದೇಣಿಗೆ ನೀಡಿರುವ ಅಕ್ಷಯ್ ಕುಮಾರ್​ ಪ್ರಭು ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕಾಗಿ ಕೈಲಾದಷ್ಟು ಸಹಾಯ ಮಾಡುವಂತೆ ಮನವಿ ಮಾಡಿದ್ದಾರೆ.

ಈಗಾಗಲೇ ನಟ, ನಟಿಯರು,ರಾಜಕಾರಣಿಗಳು, ಉದ್ಯಮಿಗಳು, ಕ್ರಿಕೆಟರ್ಸ್​​ ದೇಣಿಗೆ ನೀಡುತ್ತಿದ್ದಾರೆ. ಲಭ್ಯವಾಗಿರುವ ಮಾಹಿತಿ ಪ್ರಕಾರ ದೇಣಿಗೆ ಸಂಗ್ರಹ ಕಾರ್ಯ ಶುರುವಾದ ಮೂರು ದಿನದಲ್ಲಿ ಅಂದಾಜು 100 ಕೋಟಿ ರೂ ಸಂಗ್ರಹವಾಗಿದೆ ಎನ್ನಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.