ಮೆಗಾಸ್ಟಾರ್ ಮಮ್ಮುಟ್ಟಿ ಅವರು ತಮ್ಮ ಮುಂದಿನ ಪ್ರಾಜೆಕ್ಟ್ 'ಪುಝು' ಚಿತ್ರದಲ್ಲಿ ಮೊದಲ ಬಾರಿಗೆ ಪಾರ್ವತಿ ತಿರುವೊಥ್ ಅವರೊಂದಿಗೆ ಸ್ಕ್ರೀನ್ ಹಂಚಿಕೊಳ್ಳುತ್ತಿದ್ದಾರೆ. ಚಿತ್ರವನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಘೋಷಿಸಿದ್ದು, ಇದನ್ನು ರಥೀನಾ ಶರ್ಷದ್ ನಿರ್ದೇಶಿಸಲಿದ್ದಾರೆ.
ಪುಝು ಎಂದರೆ ಹುಳ. ಈ ಚಿತ್ರ ಮಹಿಳಾ ದಿನದಂದು ಘೋಷಣೆಯಾಗಿರುವುದರಿಂದ ಸ್ತ್ರೀ ಕೇಂದ್ರಿತ ಕಥಾಹಂದರ ಇರಲಿದೆ ಎಂದು ನಿರೀಕ್ಷಿಸಲಾಗಿದೆ.
ದುಲ್ಕರ್ ಸಲ್ಮಾನ್ ಅವರ ವೇಫೇರ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದೆ. ಮೊದಲ ಬಾರಿಗೆ ದುಲ್ಕರ್ ತನ್ನ ತಂದೆಯೊಂದಿಗೆ ಕೆಲಸ ಮಾಡಲಿದ್ದಾರೆ.
'ಪುಝು' ಚಿತ್ರ ತಂಡದೊಂದಿಗೆ ಸೇರ್ಪಡೆಗೊಂಡಿದ್ದಕ್ಕೆ ದುಲ್ಕರ್ ಸೋಶಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ.