ಇಂದು, ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಮಹಿಳಾ ನಿರ್ಮಾಪಕಿ ಎಂಬ ಹೆಗ್ಗಳಿಕೆ ಪಡೆದಿರುವ, ದಿವಂಗತ ಪಾರ್ವತಮ್ಮ ರಾಜ್‍ಕುಮಾರ್ ಹುಟ್ಟಿದ ದಿನ . ಈ ವಿಶೇಷ ದಿನದಂದು ಅಣ್ಣಾವ್ರ ಕುಟುಂಬ ಡಾ. ರಾಜ್‍ಕುಮಾರ್ ಸಮಾಧಿ ಬಳಿ ತೆರಳಿ ಅಲ್ಲಿ ಪಾರ್ವತಮ್ಮ ರಾಜ್‍ಕುಮಾರ್ ಅವರ ಹುಟ್ಟುಹಬ್ಬವನ್ನು ಆಚರಿಸಿದೆ.
ನಟ ಶಿವರಾಜ್ಕುಮಾರ್, ರಾಘವೇಂದ್ರ ರಾಜ್‍ಕುಮಾರ್, ಪುನೀತ್ ರಾಜ್‍ಕುಮಾರ್ ಪತ್ನಿಯರು ಹಾಗೂ ಮಕ್ಕಳ ಸಹಿತ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ. ಇನ್ನು ಈ ವೇಳೆ, ರಾಘವೇಂದ್ರ ರಾಜ್‍ಕುಮಾರ್ ಅಮ್ಮನ ಬಗ್ಗೆ ಕೆಲವೊಂದು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಪಾರ್ವತಮ್ಮ ರಾಜ್‍ಕುಮಾರ್ ತಮ್ಮ ಹುಟ್ಟಿದ ದಿನದಂದು ಮೂರು ಸೀರೆಗಳನ್ನು ತರಿಸುತ್ತಿದ್ದರಂತೆ. ಅವರಿಗೆ ಕೆಂಪು ಬಣ್ಣದ ಸೀರೆ ಎಂದರೆ ಬಹಳ ಇಷ್ಟವಂತೆ. ಹಾಗಾಗಿ ಇಂದು ರಾಘವೇಂದ್ರ ರಾಜ್‍ಕುಮಾರ್ ಕೆಂಪು ಷರ್ಟ್ ಧರಿಸಿ ಪೂಜೆಯಲ್ಲಿ ಭಾಗವಹಿಸಿದ್ದರು.
- " class="align-text-top noRightClick twitterSection" data="
">
ಇನ್ನು ಕಿರಿಯ ಪುತ್ರ ಪುನೀತ್ ರಾಜ್‍ಕುಮಾರ್ ಅಂದ್ರೆ ಪಾರ್ವತಮ್ಮ ಅವರಿಗೆ ಪ್ರೀತಿ ಸ್ವಲ್ಪ ಹೆಚ್ಚಾಗಿತ್ತು. ಪವರ್ ಸ್ಟಾರ್ ಯಶಸ್ಸಿನ ಹಿಂದೆ ಅಮ್ಮನ ಶಕ್ತಿ ದೊಡ್ಡದು. ಅಮ್ಮನ ಕೈ ಹಿಡಿದಿರುವ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿರುವ ಪುನೀತ್ ರಾಜ್‍ಕುಮಾರ್ 'ಅಮ್ಮ ಅಂದು ಇಂದು ಎಂದೆಂದಿಗೂ ನನ್ನ ಶಕ್ತಿ'ಎಂದು ಬರೆದುಕೊಂಡಿದ್ದಾರೆ.