ETV Bharat / sitara

ಲಾಕ್​​ಡೌನ್​ ವೇಳೆ 'ಒಂದು ಗಿಫ್ಟ್ ಕಥೆ' ಹೇಳ್ತಿದ್ದಾರೆ ಪದ್ಮಜ ರಾವ್

ಪದ್ಮಜಾ ರಾವ್​ 30 ನಿಮಿಷದ ಕಿರುಚಿತ್ರವೊಂದನ್ನು ತಯಾರಿಸಿದ್ದಾರೆ. ಈ ಚಿತ್ರಕ್ಕೆ ವಿದೇಶದಲ್ಲಿ ಚಿತ್ರೀಕರಿಸಿದ ವಿಡಿಯೋ ತುಣುಕುಗಳ್ನು ಬಳಸಲಾಗಿದೆಯಂತೆ.

PADMAJA RAO
ಪದ್ಮಜ ರಾವ್
author img

By

Published : Apr 21, 2020, 10:07 AM IST

ಕನ್ನಡ ಚಿತ್ರರಂಗದ ಖ್ಯಾತ ತಾಯಿ ಪಾತ್ರಧಾರಿ, ಮದರ್ ಆಫ್ ಆಲ್ ಹೀರೋಸ್ ಪದ್ಮಜ ರಾವ್ ‘ಒಂದು ಗಿಫ್ಟ್​​ ಕಥೆ’ ಕಿರು ಚಿತ್ರವನ್ನು ತಯಾರಿಸಿದ್ದಾರೆ.

ಈ ಕಿರುಚಿತ್ರದ ವಿಶೇಷತೆ ಏನಂದ್ರೆ, 30 ನಿಮಿಷದ ಕಿರುಚಿತ್ರಕ್ಕೆ ಬೆಂಗಳೂರು, ಅಮೆರಿಕ ಹಾಗೂ ಕೆನಡಾ ದೇಶಗಳಿಂದ ಚಿತ್ರೀಕರಣ ಮಾಡಿದ ವಿಡಿಯೋಗಳನ್ನು ಬಳಸಲಾಗಿದೆ. ಈ ವಿಡಿಯೋ ತುಣುಕುಗಳನ್ನು ಜೋಡಿಸಿ ಕಿರುಚಿತ್ರವನ್ನು ನಿರ್ಮಾಣ ಮಾಡಲಾಗಿದೆ. ಸದ್ಯಕ್ಕೆ ಪದ್ಮಜ ರಾವ್ ಈ ಕಿರುಚಿತ್ರದ ತುಣುಕೊಂದನ್ನು ಮಾತ್ರ ಬಿಡುಗಡೆ ಮಾಡಿದ್ದಾರೆ.

ಇದೊಂದು ಕ್ಯೂಟ್ ಕಥೆ. ಹಾಸ್ಯದ ಜೊತೆ ರೊಮ್ಯಾಂಟಿಕ್ ಆಗಿ ಮುಗಿಯಲಿದೆ ಎನ್ನುತ್ತಾರೆ ಪದ್ಮಜ ರಾವ್. ಈ ಕಿರುಚಿತ್ರಕ್ಕೆ 10 ಛಾಯಾಗ್ರಾಕಹರು ಕೆಲಸ ಮಾಡಿದ್ದಾರೆ. 11 ಪಾತ್ರಗಳು ಇರುತ್ತವೆ. ಅದರಲ್ಲಿ ಸುಧಾ ಬೆಳವಾಡಿ, ಪ್ರವೀಣ್ ಡಿ ರಾವ್ (ಇವರು ಹೆಸರಾಂತ ಸಂಗೀತ ನಿರ್ದೇಶಕ ಸಹ) ಇದ್ದಾರೆ. ಎಲ್ಲರೂ ಲಾಕ್ ಡೌನ್ ಸಂದರ್ಭದಲ್ಲಿ ಈ ಕಿರು ಚಿತ್ರವನ್ನು ಖುಷಿ ಖುಷಿಯಾಗಿ ನೋಡಬಹುದು ಎಂದು ಪದ್ಮಜ ರಾವ್ ಹೇಳಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.