ಕ್ರಿಕೆಟಿಗ ವಿರಾಟ್ ಕೊಹ್ಲಿ, ನಟಿ ತಮನ್ನಾ ಭಾಟಿಯಾ ಹಾಗೂ ನಟ ಅಜು ವರ್ಗೀಸ್ಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿದೆ. ಆನ್‌ಲೈನ್ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿದ ಹಿನ್ನೆಲೆ ಸಾರ್ವಜನಿಕ ಹಿತಾಸಕ್ತಿ ದೂರು ದಾಖಲಾಗಿದ್ದು, ಈ ಮೂವರು ಸೆಲೆಬ್ರೆಟಿಗಳಿಗೆ ಕೇರಳ ಹೈಕೋರ್ಟ್ ನೋಟಿಸ್ ನೀಡಿ ಉತ್ತರಿಸುವಂತೆ ಕೇಳಿದೆ.
ಕೇರಳ ಕ್ರೀಡಾ ಕಾಯ್ದೆ ಅನ್ವಯ ರಮ್ಮಿ ಆಟ ಕಾನೂನು ಬಾಹಿರವಾಗಿದೆ. ಆನ್‌ಲೈನ್ ರಮ್ಮಿಗೆ ರಾಯಭಾರಿಗಳಾಗಿ ರಮ್ಮಿ ಆಟಕ್ಕೆ ಪ್ರೋತ್ಸಾಹ ನೀಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವರ್ಗೀಸ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಇದ್ರ ಬಗ್ಗೆ ಇಂದು ವಿಚಾರಣೆ ನಡೆದಿದ್ದು, ಕೊಹ್ಲಿ, ತಮನ್ನಾಗೆ ನೋಟಿಸ್ ನೀಡ್ಲಾಗಿದೆ.
ಭಾರತದಲ್ಲಿ ಆನ್‌ಲೈನ್ ರಮ್ಮಿ ಚಾಲ್ತಿಯಲ್ಲಿದೆ. ಆದ್ರೆ, ಕೆಲ ರಾಜ್ಯಗಳು ಈ ರೀತಿಯ ಆನ್‌ಲೈನ್ ಜೂಜುಗಳನ್ನು ನಿಲ್ಲಿಸಿವೆ. ಕರ್ನಾಟಕದಲ್ಲಿ ಇದು ಚಾಲ್ತಿಯಲ್ಲಿದ್ದು, ನಟ ಸುದೀಪ್ ಇದರ ಪ್ರಚಾರಕರಾಗಿದ್ದಾರೆ.