ETV Bharat / sitara

ಮತ್ತೆ ಒಂದಾದ ಗಾಳಿಪಟ ಜೋಡಿ... ಮೋಡಿ ಮಾಡುತ್ತಾ ಗಾಳಿಪಟ-2 - ದಿಗಂತ್

ಗಾಳಿಪಟದಲ್ಲಿ ಒಟ್ಟಿಗೆ ನಟಿಸಿ ಮಿಂಚಿದ್ದ ಗಣೇಶ್​ ಮತ್ತು ದಿಗಂತ್​ ಜೋಡಿ, ಯೋಗರಾಜ್​ ಭಟ್​ ನಿರ್ದೇಶನದ ಗಾಳಿಪಟ-2 ಚಿತ್ರದ ಮೂಲಕ ಮತ್ತೆ ಒಂದಾಗಲಿದ್ದಾರೆ.

Galipata team
author img

By

Published : Jul 29, 2019, 5:24 PM IST

ಗಾಳಿಪಟ...ಯೋಗರಾಜ್ ಭಟ್ ಡೈರೆಕ್ಷನ್​​ನಲ್ಲಿ 2008ರಲ್ಲಿ ತೆರೆಕಂಡಿದ್ದ ಸಕ್ಸಸ್​ಫುಲ್ ಸಿನಿಮಾ. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ಕಾಂಬಿನೇಷನ್​ನ ಈ ಸಿನಿಮಾ ಯೂತ್ ಐಕಾನ್​ಗಳಿಗೆ ಲವ್ ಸ್ಟೋರಿಯ ಹೊಸ ಅಧ್ಯಾಯವನ್ನು ಸೃಷ್ಟಿಸಿತ್ತು. ಇದೀಗ ಭಟ್ರು ಹೊಸ ಟೀಮ್ ಜೊತೆಯಾಗಿ ಗಾಳಿಪಟ-2 ಸಿನಿಮಾ ಮಾಡೋಕೆ ಭರ್ಜರಿ ತಯಾರಿ ಮಾಡ್ತಿದ್ದಾರೆ.

ಸದ್ಯ ಚಿತ್ರಕ್ಕೆ ಹೊಸ ಸ್ಟಾರ್​​​​ಗಳಾಗಿ ಕಾಮಿಡಿ ಕಿಂಗ್ ಶರಣ್, ಕವಲುದಾರಿ ಖ್ಯಾತಿಯ ರಿಷಿ ಹಾಗೂ ಲೂಸಿಯಾ ಪವನ್ ಅವ​ರನ್ನು ಸೇರಿಸಿಕೊಂಡು ಭಟ್ರು ಸಿನಿಮಾ ಮಾಡೋದಾಗಿ ಈ ಹಿಂದೆ ಅನೌಸ್ ಮಾಡಿದ್ರು. ಜೊತೆಗೆ ಶೂಟಿಂಗ್ ನಡೆಸಲು ಮಲೆನಾಡು ಭಾಗ ಸೇರಿದಂತೆ ವಿದೇಶದೆಲ್ಲೆಡೆ ಅದ್ಭುತ ಲೊಕೇಷನ್ ಹುಡುಕಾಟ ಕೂಡ ನಡೆಸಿದ್ರು.

ಆದ್ರೆ, ಗಾಳಿಪಟ-2 ಚಿತ್ರದಿಂದ ಶರಣ್ ಹಾಗೂ ರಿಷಿ ಕೈ ಬಿಟ್ಟು, ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದೂದ್ ಪೇಡಾ ದಿಗಂತ್ ಟೀಮ್ ಜೊತೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ. ಇನ್ನೊಂದು ಕಡೆ ಗಣೇಶ್ ಹಾಗೂ ದಿಗಂತ್​ರನ್ನು ಸೇರಿಸಿಕೊಳ್ಳಬೇಕೆನ್ನುವ ಕೂಗು ಅಭಿಮಾನಿಗಳಲ್ಲಿ ಜಾಸ್ತಿಯಾಗಿತ್ತು. ಡೇಟ್ ಹೊಂದಾಣಿಕೆ ಹಾಗೂ ಸ್ಕ್ರೀಪ್ಟ್​ನಲ್ಲಿ ಕೆಲ ಬದಲಾವಣೆ ಮಾಡಿದ ಕಾರಣ, ಶರಣ್ ಹಾಗೂ ರಿಷಿ ಬದಲಾಗಿ ಗಣೇಶ್ ಹಾಗೂ ದಿಗಂತ್​​ ಅವರನ್ನು ಕರೆತರೋಕೆ ಚಿತ್ರತಂಡ ಪ್ಲಾನ್ ಮಾಡಿದೆ ಅಂತಾ ಗಾಂಧಿನಗರದಲ್ಲಿ ತುಂಬಾ ಸದ್ದು ಮಾಡ್ತಿದೆ.

ಚಿತ್ರದಲ್ಲಿ ಸೋನಾಲ್ ಮಾಂತೇರಿಯಾ, ಶರ್ಮಿಳಾ ಮಾಂಡ್ರೆ, ಅಧಿತಿ ಪ್ರಭುದೇವ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಇದೀಗ ಭಟ್ರು ಟೀಮ್​ಗೆ ಗಣಿ, ದಿಗಂತ್ ಮತ್ತೆ ಎಂಟ್ರಿ ಕೊಟ್ಟಿದ್ದು, ಇನ್ನು ಅಧಿಕೃತವಾಗಿ ನಿರ್ದೇಶಕ ಭಟ್ರು ಮಾಹಿತಿ ಹೇಳಬೇಕಿದೆ.

Intro:ಶರಣ್, ರಿಷಿ ಜಾಗಕ್ಕೆ ಬಂದ್ರು ಗಣೇಶ್ ಹಾಗು ದೂದ್ ಪೇಡಾ!!

ಗಾಳಿಪಟ.. ಯೋಗರಾಜ್ ಭಟ್ ಡೈರೆಕ್ಷನ್​​ನಲ್ಲಿ 2008ರಲ್ಲಿ ತೆರೆಕಂಡಿದ್ದ ಸಕ್ಸಸ್​ಫುಲ್ ಸಿನಿಮಾ. ಗಣೇಶ್, ದಿಗಂತ್, ರಾಜೇಶ್ ಕೃಷ್ಣನ್ ಕಾಂಬಿನೇಷನ್​ನ ಸಿನಿಮಾ ಯೂತ್ ಐಕಾನ್​ಗಳಿಗೆ ಲವ್ ಸ್ಟೋರಿಯ ಹೊಸ ಅಧ್ಯಾಯವನ್ನ ಸೃಷ್ಟಿಸಿದ ಚಿತ್ರ.‌ ಇದೀಗ ಭಟ್ರು ಹೊಸ ಟೀಮ್ ಜೊತೆಯಾಗಿ ಗಾಳಿಪಟ-2 ಸಿನಿಮಾ ಮಾಡೋಕೆ ಭರ್ಜರಿ ತಯಾರಿ ಮಾಡ್ತಿದ್ದಾರೆ. ಸದ್ಯ ಚಿತ್ರಕ್ಕೆ ಹೊಸ ಸ್ಟಾರ್​​​​ಗಳಾಗಿ ಕಾಮಿಡಿ ಕಿಂಗ್ ಶರಣ್, ಕವಲುದಾರಿ ಖ್ಯಾತಿಯ ರಿಷಿ, ಹಾಗೂ ಲೂಸಿಯಾ ಪವನ್​ರನ್ನು ಸೇರಿಸಿಕೊಂಡು ಭಟ್ರು ಸಿನಿಮಾ ಮಾಡೋದಾಗಿ ಈ ಹಿಂದೆ ಅನೌಸ್ ಮಾಡಿದ್ರು.. ಜೊತೆಗೆ ಶೂಟಿಂಗ್ ನಡೆಸೋಕೆ ಮಲೆನಾಡು ಭಾಗ ಸೇರಿದಂತೆ ವಿದೇಶದೆಲ್ಲೆಡೆ ಅದ್ಭುತ ಲೊಕೇಷನ್ ಹುಡುಕಾಟ ಕೂಡ ನಡೆಸಿದ್ರು. ಆದ್ರೆ ಗಾಳಿಪಟ-2 ಚಿತ್ರದಿಂದ ಶರಣ್ ಹಾಗೂ ರಿಷಿ ಕೈ ಬಿಟ್ಟು, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ದೂದ್ ಪೇಡಾ ದಿಗಂತ್ ಟೀಮ್ ಜೊತೆ ಸೇರ್ಪಡೆಯಾಗಿದ್ದಾರೆ ಎನ್ನಲಾಗಿದೆ.. Body:ಇನ್ನೊಂದು ಕಡೆ ಗಣೇಶ್ ಹಾಗೂ ದಿಗಂತ್​ರನ್ನು ಸೇರ್ಪಡೆ ಮಾಡಬೇಕು ಅನ್ನೋ ಕೂಗು ಅಭಿಮಾನಿಗಳಲ್ಲಿ  ಜಾಸ್ತಿ ಯಾಗಿತ್ತು..ಡೇಟ್ ಹೊಂದಾಣಿಕೆ  ಹಾಗೂ  ಸ್ಕ್ರೀಪ್ಟ್​​ ನಲ್ಲಿ ಕೆಲವೊಂದು ಬದಲಾವಣೆ ಮಾಡಿದ ಕಾರಣ, ನಿರ್ದೇಶಕ ಯೋಗರಾಜ್ ಭಟ್,ಶರಣ್ ಹಾಗೂ ರಿಷಿ ಬದಲಾಗಿ ಗಣೇಶ್  ಹಾಗೂ ದಿಗಂತ್​​ ಅವರನ್ನು ಕರೆತರೋಕೆ  ಚಿತ್ರತಂಡ ಪ್ಲಾನ್ ಮಾಡಿದೆ ಅಂತಾ, ಗಾಂಧಿನಗರದಲ್ಲಿ ಟಾಕ್ ಆಫ್ ದಿ ನ್ಯೂಸ್ ಆಗಿದೆ..ಚಿತ್ರದಲ್ಲಿ ಸೋನಾಲ್ ಮಾಂತೇರಿಯಾ, ಶರ್ಮಿಳಾ ಮಾಂಡ್ರೆ, ಅಧಿತಿ ಪ್ರಭುದೇವ ಸೇರಿದಂತೆ ಬಹುತೇಕರು ನಟಿಸಿದ್ದಾರೆ. ಇದೀಗ ಭಟ್ರು ಟೀಮ್​ಗೆ ಗಣಿ, ದಿಗಂತ್ ಮತ್ತೆ ಎಂಟ್ರಿ ಕೊಟ್ಟಿದ್ದು ಅಧಿಕೃತವಾಗಿ ಮಾಹಿತಿಯನ್ನ ನಿರ್ದೇಶಕ ಭಟ್ರು ಹೇಳಬೇಕಿದೆ..Conclusion:ರವಿಕುಮಾರ್ ಎಂಕೆ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.