ಪತಿಯಿಂದ ಬೇರೆಯಾಗಿದ್ದ ಬಂಗಾಳಿ ನಟಿ ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದೆ ನುಸ್ರತ್ ಜಹಾನ್ ಇದೀಗ ತನ್ನ ಹಾಲಿ ಪತಿ ಹಾಗೂ ಮಗುವಿನ ತಂದೆ ಯಾರೆಂಬ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಸುಳಿವು ನೀಡಿದ್ದಾರೆ.
ಮೊನ್ನೆ ಭಾನುವಾರ ನಟ ಯಶ್ ದಾಸ್ ಗುಪ್ತಾ ಅವರ ಹುಟ್ಟುಹಬ್ಬದ ಸಂಭ್ರಮದ ಕೆಲವು ಫೋಟೋಗಳನ್ನು ನುಸ್ರತ್ ಜಹಾನ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಾಕಿಕೊಂಡಿದ್ದರು. ಈ ಫೋಟೋಗಳನ್ನು ಕಂಡ ನೆಟ್ಟಿಗರು ನಟಿ ಬಗ್ಗೆ ಇದ್ದ ಅನೇಕ ಊಹಾಪೋಹಗಳು ನಿಜವೆಂದು ತಿಳಿದುಕೊಂಡಿರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.
ಯಶ್ ದಾಸ್ ಗುಪ್ತಾ ಜೊತೆ ಡಿನ್ನರ್ಗೆ ಕುಳಿತಿರುವ ಫೋಟೋ ಹಂಚಿಕೊಂಡಿರುವ ನಟಿ, "ಹ್ಯಾಪಿ ಬರ್ತ್ ಡೇ ಮೈ ಲವ್" ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಇವರಿಬ್ಬರ ನಡುವಿನ ಸಂಬಂಧವನ್ನು ದೃಢಪಡಿಸಿದರೆ, ಇನ್ನೊಂದು ಫೋಟೋ ಇವರಿಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದನ್ನು ಖಚಿತಪಡಿಸುವಂತಿದೆ.
ನಟಿ ಶೇರ್ ಮಾಡಿದ್ದ ಈ ಫೋಟೋದಲ್ಲಿ, ಕೇಕ್ ಮೇಲೆ ಹುಡುಗ-ಹುಡುಗಿಯ ಚಿತ್ರದೊಂದಿಗೆ 'Husband' ಎಂದು ಹಾಗೂ ತಂದೆ-ಮಗುವಿನ ಚಿತ್ರದೊಂದಿಗೆ 'Dad' ಎಂದು ಬರೆಯಲಾಗಿದೆ. ಹೀಗಾಗಿ ನುಸ್ರತ್ ಮಗುವಿನ ತಂದೆ ಯಶ್ ದಾಸ್ ಗುಪ್ತಾ ಎಂಬುದು ನೆಟ್ಟಿಗರ ಅಭಿಪ್ರಾಯ. ಆದರೆ ಈ ಬಗ್ಗೆ ಇವರಿಬ್ಬರು ಯಾವುದೇ ಸ್ಪಷ್ಟನೆ ನೀಡಿಲ್ಲ.
ಇದನ್ನೂ ಓದಿ: ನುಸ್ರತ್ ಜಹಾನ್ ಮಗುವಿನ ತಂದೆಯ ಕುರಿತಾದ ಊಹಾಪೋಹಕ್ಕೆ ತೆರೆ: ಶಿಶು ಜನನ ಪ್ರಮಾಣ ಪತ್ರದಲ್ಲೇನಿದೆ?
2019ರ ಜೂನ್ 19ರಲ್ಲಿ ಟರ್ಕಿಯಲ್ಲಿ ನಿಖಿಲ್ ಜೈನ್ ಎಂಬ ಉದ್ಯಮಿಯನ್ನು ನುಸ್ರತ್ ಜಹಾನ್ ವಿವಾಹವಾಗಿದ್ದರು. 2021ರಲ್ಲಿ ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದ ಅವರು, ನಾವಿಬ್ಬರೂ ಟರ್ಕಿಯಲ್ಲಿ ವಿವಾಹವಾಗಿದ್ದೇವೆ. ಆದರೆ, ಕಾನೂನಿನ ಅನ್ವಯ ಆ ವಿವಾಹ ಮಾನ್ಯವಾಗಿಲ್ಲ. ನಾವು 2020ರ ನವೆಂಬರ್ನಿಂದ ಪ್ರತ್ಯೇಕವಾಗಿದ್ದೇವೆ ಎಂದು ತಿಳಿಸಿದ್ದರು.
ಆ ಬಳಿಕ ಯಶ್ ದಾಸ್ ಗುಪ್ತಾ ಜೊತೆ ಡೇಟಿಂಗ್ನಲ್ಲಿರುವುದು, ಮಗುವಿಗೆ ಜನ್ಮ ನಿಡಿರುವುದು ವೈರಲ್ ಆಗಿತ್ತು. ಮಗುವಿನ ತಂದೆ ಯಾರೆಂಬ ಪ್ರಶ್ನೆಗಳು ಎಲ್ಲರ ಮನಸ್ಸಿನಲ್ಲಿತ್ತು. ಈ ಸಂದರ್ಭದಲ್ಲಿ ಕೋಲ್ಕತ್ತಾ ಮಹಾನಗರ ಪಾಲಿಕೆ ವೆಬ್‌ಸೈಟ್‌ನಲ್ಲಿ ಹಾಕಲಾಗಿದ್ದ ನುಸ್ರತ್ ಜಹಾನ್ ಅವರ ಶಿಶುವಿನ ಜನನ ಪ್ರಮಾಣಪತ್ರದಲ್ಲಿ ಅದರ ತಂದೆ ಬೆಂಗಾಳಿ ನಟ ಯಶ್ ದಾಸ್ಗುಪ್ತಾ ಎಂದು ದಾಖಲಾಗಿತ್ತು.