ಕನ್ನಡ ನಟ-ನಟಿಯರು ತೆಲುಗು, ತಮಿಳು, ಮಲಯಾಳಂ ಸಿನಿಮಾಗಳಲ್ಲಿ, ಬಾಲಿವುಡ್ ನಟರು ಹಾಲಿವುಡ್ ಸಿನಿಮಾಗಳಲ್ಲಿ ನಟಿಸಿರುವ ಎಷ್ಟೋ ಉದಾಹರಣೆಗಳಿವೆ. ಇದೀಗ ನಿತ್ಯಾ ಮೆನನ್ ಕೂಡಾ ಹಾಲಿವುಡ್ಗೆ ಹಾರುತ್ತಿದ್ದಾರೆ.
- " class="align-text-top noRightClick twitterSection" data="
">
ಆದ್ರೆ ನಿತ್ಯಾ ಆ ಸಿನಿಮಾದಲ್ಲಿ ನಟಿಸುತ್ತಿಲ್ಲ. ವಾಲ್ಟ್ ಡಿಸ್ನಿ ಸಂಸ್ಥೆ ನಿರ್ಮಿಸುತ್ತಿರುವ 'ಪ್ರೋಜನ್-2' ಎಂಬ ಹಾಲಿವುಡ್ ಸಿನಿಮಾದಲ್ಲಿ ನಿತ್ಯಾ, 'ಎಲ್ಸಾ' ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದಾರೆ. ಇದಕ್ಕೂ ಮುನ್ನ ಈ ಪಾತ್ರಕ್ಕೆ ನಟಿ ಕಾಜಲ್ ಅಗರ್ವಾಲ್ ಅಥವಾ ನಿಷಾ ಅಗರ್ವಾಲ್ ಧ್ವನಿ ನೀಡಲಿದ್ದಾರೆ ಎನ್ನಲಾಗಿತ್ತು. ಆದ್ರೆ ಕೊನೆಗೆ ನಿತ್ಯಾಗೆ ಅ ಅವಕಾಶ ಲಭಿಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಿತ್ಯಾ, 'ಇಂತಹ ಪಾತ್ರಕ್ಕೆ ಧ್ವನಿ ನೀಡಲು ನನಗೆ ಅವಕಾಶ ಲಭಿಸಿರುವುದು ನಿಜಕ್ಕೂ ಸಂತೋಷ. ನಾನು ಓದಿರುವ ಅತಿ ದೊಡ್ಡ ಸ್ಕ್ರಿಪ್ಟ್ಗಳಲ್ಲಿ ಇದೂ ಕೂಡಾ ಒಂದು. ಇದು ಕೇವಲ ತೆಲುಗು ಅಭಿಮಾನಿಗಳಿಗಾಗಿ ಮಾತ್ರ. ಹಿಂದಿ ಭಾಷೆಯ ಎಲ್ಸಾ ಪಾತ್ರಕ್ಕೆ ಪರಿಣಿತಿ ಛೋಪ್ರಾ ಡಬ್ಬಿಂಗ್ ಮಾಡಲಿದ್ದಾರೆ' ಎಂದು ಹೇಳಿದ್ದಾರೆ. ವಾಲ್ಟ್ ಡಿಸ್ನಿ ಸಂಸ್ಥೆಯ ಈ ಸಿನಿಮಾ ನವೆಂಬರ್ 22 ರಂದು ಪ್ರೇಕ್ಷಕರ ಮುಂದೆ ಬರಲಿದೆ. ನಿತ್ಯಾ ಇತ್ತೀಚೆಗೆ ಬಿಡುಗಡೆಯಾದ ಬಾಲಿವುಡ್ನ 'ಮಿಷನ್ ಮಂಗಳ್' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ವಿದ್ಯಾ ಬಾಲನ್, ಪರಿಣಿತಿ ಛೋಪ್ರಾ, ಸೋನಾಕ್ಷಿ ಸಿನ್ಹ ಹಾಗೂ ಇನ್ನಿತರರು ನಟಿಸಿದ್ದರು.