'7 ಓ ಕ್ಲಾಕ್' ಚಿತ್ರದ ಮೂಲಕ ಕನ್ನಡದಲ್ಲಿ ಕರಿಯರ್ ಆರಂಭಿಸಿ ತಮಿಳು, ತೆಲುಗು, ಹಿಂದಿ, ಮಲಯಾಳಂ ಸಿನಿಮಾಗಳಲ್ಲಿ ಕೂಡಾ ನಟಿಸಿ ಬೇಡಿಕೆ ನಟಿ ಎನಿಸಿಕೊಂಡಿರುವ ನಿತ್ಯಾ ಮೆನನ್ ಇದೀಗ ಸ್ವಲ್ಪ ಗರಂ ಆದಂತೆ ಕಂಡುಬಂದಿದ್ದಾರೆ.
ಮಹಿಳೆಯೊಬ್ಬರು ನಿತ್ಯಾ ಮೆನನ್ ಮನೆಗೆ ಬಂದು ಮದುವೆಯಾಗಿ ಮೂರು ವರ್ಷಗಳಾಯ್ತು ಏನೂ ಗುಡ್ ನ್ಯೂಸ್ ಇಲ್ವಾ ಎಂದು ಪ್ರಶ್ನಿಸುತ್ತಾರೆ. ಇದಕ್ಕೆ ಸ್ವಲ್ಪ ಗರಂ ಆದವರಂತೆ ಕಂಡರೂ ನಿತ್ಯಾ ಮೆನನ್, ಸ್ವಂತ ಮನೆ, 8 ಪ್ರಶಸ್ತಿಗಳು, ಒಂದು ಕಂಪನಿಯನ್ನು ಆರಂಭಿಸಿದ್ದೇನೆ, ಇದಕ್ಕಿಂತ ಗುಡ್ ನ್ಯೂಸ್ ಮತ್ತೇನು ಬೇಕು ಎಂದು ಕೂಲ್ ಆಗಿ ಉತ್ತರಿಸುತ್ತಾರೆ. ಅಂದಹಾಗೆ ಈ ಸಂಭಾಷಣೆ ಖಂಡಿತ ರಿಯಲ್ ಅಲ್ಲ. ಇದೊಂದು ಜಾಹೀರಾತಿನ ಸಂಭಾಷಣೆಗಳು. ಕಾಫಿ ಬ್ಯ್ರಾಂಡ್ ಒಂದರ ಹೊಸ ಜಾಹೀರಾತಿನಲ್ಲಿ ನಿತ್ಯಾ ನಟಿಸಿದ್ದು ಈ ಜಾಹೀರಾತು ಒಂದು ತಿಂಗಳಿಂದ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ನಿತ್ಯಾ ಅಭಿಮಾನಿಗಳು ಈ ಜಾಹೀರಾತನ್ನು ಬಹಳ ಮೆಚ್ಚಿಕೊಂಡಿದ್ದಾರೆ.