ETV Bharat / sitara

ಡಾ.ರಾಜ್ ಮೊಮ್ಮಗಳ ಮೊದಲ ಚಿತ್ರದ ಟ್ರೈಲರ್​ ಬಿಡುಗಡೆ

ಆಗಸ್ಟ್ 20ರಂದು ಬಿಡುಗಡೆಗೆ ಸಜ್ಜಾಗಿರುವ ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

author img

By

Published : Aug 2, 2021, 10:26 AM IST

Ninna Sanihake film  trailer released
ನಿನ್ನ ಸನಿಹಕೆ ಟ್ರೈಲರ್

ಡಾ. ರಾಜ್​​ಕುಮಾರ್​ ಅವರ ಮೊಮ್ಮಗಳು ಮತ್ತು ನಟ ರಾಮ್​​​ಕುಮಾರ್​ ಅವರ ಮಗಳು ಧನ್ಯಾ ರಾಮ್​​ಕುಮಾರ್ 'ನಿನ್ನ ಸನಿಹಕೆ' ಎಂಬ ಚಿತ್ರದಲ್ಲಿ ನಟಿಸುತ್ತಿರುವ ವಿಷಯ ಗೊತ್ತೇ ಇದೆ. ಈ ಚಿತ್ರ ವರ ಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಗಸ್ಟ್ 20ರಂದು ರಾಜ್ಯಾದ್ಯಂತ ಬಿಡುಗಡೆಯಾಗಲು ಸಜ್ಜಾಗಿದೆ. ಈ ಮಧ್ಯೆ, ಭಾನುವಾರ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

ರಘು ದೀಕ್ಷಿತ್ ಯೂಟ್ಯೂಬ್​ ಮ್ಯೂಸಿಕ್ ಚಾನೆಲ್​ನಲ್ಲಿ 'ನಿನ್ನ ಸನಿಹಕೆ' ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ಇದುವರೆಗೆ ಎಂಟು ಲಕ್ಷಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದಿದೆ. ನಾಯಕಿ ಅಮೃತಾ ಅಲಿಯಾಸ್ ಡಿಂಪಿಯ ಪರಿಚಯದಿಂದ ಶುರುವಾಗುವ ಈ ಟ್ರೈಲರ್​​ನಲ್ಲಿ​,​ ಕ್ರಮೇಣ ನಾಯಕನ ಪರಿಚಯ, ಅವರಿಬ್ಬರ ಸ್ನೇಹ, ಪ್ರೀತಿ, ಕಿತ್ತಾಟ ಮುಂತಾದ ಹಲವು ದೃಶ್ಯಗಳಿವೆ. ಈ ಪ್ರೇಮಕಥೆ ಸುಖಾಂತ್ಯ ಕಾಣುತ್ತದಾ ಅಥವಾ ದುರಂತ ಅಂತ್ಯ ಕಾಣುತ್ತದಾ ಎಂಬುವುದನ್ನು ಆಗಸ್ಟ್ 20ರಂದು ತೆರೆಯ ಮೇಲೆ ನೋಡಬೇಕು.

ಇದನ್ನೂ ಓದಿ: ವಿಜಯಾನಂದ ಫಸ್ಟ್​ಲುಕ್​ ಬಿಡುಗಡೆ: ಬಯೋಪಿಕ್ ಆಗ್ತಿದೆ ಡಾ.ವಿಜಯ ಸಂಕೇಶ್ವರ ಜೀವನ

ವೈಟ್ ಆಂಡ್​​ ಗ್ರೇ ಫಿಲಂಸ್​ ನಿರ್ಮಿಸಿರುವ ಈ ಚಿತ್ರವನ್ನು, ಸೂರಜ್ ಗೌಡ ನಿರ್ದೇಶನ ಮಾಡಿದ್ದಾರೆ. ಎರಡು ವರ್ಷಗಳ ಹಿಂದೆ ಚಿತ್ರ ಪ್ರಾರಂಭವಾದಾಗ, ನಿರ್ದೇಶಕರಾಗಿ ಸುಮನ್ ಜಾದೂಗರ್ ಇದ್ದರು. ಆದರೆ, ಅವರಿಗೆ ಅಪಘಾತವಾಗಿ ಚಿತ್ರೀಕರಣ ಮುಂದುವರೆಸುವುದಕ್ಕೆ ಕಷ್ಟವಾದ ಕಾರಣ, ನಿರ್ದೇಶನದ ಜವಾಬ್ದಾರಿಯನ್ನು ಸೂರಜ್​ಗೆ ನೀಡಲಾಗಿದೆ.

ಚಿತ್ರಕ್ಕೆ ಸೂರಜ್ ಬರೀ ಹೀರೋ ಅಷ್ಟೇ ಅಲ್ಲ, ಕಥೆ ಸಹ ಅವರದ್ದೇ. ಹಾಗಾಗಿ, ಈ ಚಿತ್ರ ನಿರ್ದೇಶಿಸುವುದಕ್ಕೆ ಅವರೇ ಸರಿ ಎಂಬ ಕಾರಣಕ್ಕೆ ಅವರಿಗೆ ನಿರ್ದೇಶನದ ಜವಾಬ್ದಾರಿ ವಹಿಸಲಾಗಿದೆ. ಸೂರಜ್, ಈ ಚಿತ್ರದಲ್ಲಿ ಕಥೆ, ನಿರ್ದೇಶನ ಮತ್ತು ನಟನೆಯ ಮೂರು ಜವಾಬ್ದಾರಿಗಳನ್ನು ಹೊತ್ತಿದ್ದಾರೆ.

ಧನ್ಯಾ ರಾಮ್​​ಕುಮಾರ್​ ಮತ್ತು ಸೂರಜ್ ಗೌಡ ಅಲ್ಲದೆ, ಅರುಣಾ ಬಾಲರಾಜ್, ಚಿತ್ಕಲಾ ಬಿರಾದರ್, ಮಂಜುನಾಥ ಹೆಗಡೆ ಸೇರಿದಂತೆ ಹಲವರು ನಟಿಸಿರುವ 'ನಿನ್ನ ಸನಿಹಕೆ' ಚಿತ್ರಕ್ಕೆ ರಘು ದೀಕ್ಷಿತ್ ಸಂಗೀತ ಸಂಯೋಜಿಸಿದ್ದಾರೆ. ಅಭಿಲಾಷ್ ಕಲತ್ತಿ ಛಾಯಾಗ್ರಹಣ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.