ಲಾಕ್ಡೌನ್ ಸಮಯದಲ್ಲಿ ಸಿನಿಮಾ ನೋಡಿ, ಪುಸ್ತಕ ಓದುತ್ತಾ ಕಾಲ ಕಳೆದಿದ್ದೇನೆ. ಈಗ ಸಿನಿಮಾ ಸಮಯ ಶುರುವಾಗಿದೆ ಎಂದು ಡಾಲಿ ಧನಂಜಯ್ ಹೇಳಿದರು.
ಹೇ ರಾಮ್ ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ಡಾಲಿ ಧನಂಜಯ್ ಮಾಧ್ಯಮದವರೊಂದಿಗೆ ಮಾತನಾಡಿ, ಸಲಗ, ಯುವರತ್ನ ಸಿನಿಮಾ ರಿಲೀಸ್ಗೆ ಸಿದ್ಧವಾಗಿದೆ. ಅಷ್ಟೇ ಅಲ್ಲದೆ, ಬಡವ ಱಸ್ಕಲ್ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿ ಇದೆ. ಜಯರಾಜ್ ಅವರ ಜೀವನ ಕಥನ ಹಾಗೂ ರತ್ನನ್ ಪ್ರಪಂಚ ಸಿನಿಮಾದ ಜೊತೆಗೆ ನನ್ನ ಹುಟ್ಟು ಹಬ್ಬದಂದು ಮತ್ತೊಂದು ಹೊಸ ಪ್ರಾಜೆಕ್ಟ್ ಅನೌನ್ಸ್ ಆಗಲಿದೆ ಎಂದರು.
ಕೊರೊನಾ ಎಂದು ಭಯದಲ್ಲಿ ಕೂರುವ ಬದಲು ಅದರ ಜೊತೆಗೆ ಕೆಲಸ ಮಾಡಿಕೊಂಡು ಹೇಗಬೇಕು. ಬದುಕು ಕಟ್ಟಿಕೊಳ್ಳದಿದ್ದರೆ ಕಷ್ಟವಾಗುತ್ತದೆ. ಇನ್ನು ರತ್ನನ್ ಪ್ರಪಂಚ ಸಿನಿಮಾದ ಶೂಟಿಂಗ್ ಸೆಪ್ಟೆಂಬರ್ನಿಂದ ಆರಂಭವಾಗಲಿದೆ. ಜೊತೆಗೆ ಮುಂದಿನ ವರ್ಷ ಶಿವಣ್ಣನ ಜೊತೆಗಿನ ಪ್ರಾಜೆಕ್ಟ್ ಶುರುವಾಗಲಿದೆ. ಸದ್ಯ ಕೆಲಸ ನಡೆಯುತ್ತಿದ್ದು, ಅದು ಬೇರೆತರಹದ ಪ್ರಾಜೆಕ್ಟ್. ಇನ್ನು ಜಯರಾಜ್ ಚಿತ್ರಕ್ಕಾಗಿ ಪ್ರಿಪೇರ್ ಆಗಬೇಕು ಎಂದರು.
ಪೈಲ್ವಾನ್ ಜಯರಾಜ್ ಅವರ ಪಾತ್ರಕ್ಕೆ ಸಾಕಷ್ಟು ವರ್ಕೌಟ್ ಮಾಡುತ್ತಿದ್ದು, ಆಗಸ್ಟ್ 15ಕ್ಕೆ ಆ ಚಿತ್ರದ ಟೈಟಲ್ ಅನೌನ್ಸ್ ಮಾಡಲಿದ್ದೇವೆ. ರತ್ನನ್ ಪ್ರಪಂಚ ಚಿತ್ರದಲ್ಲಿ ಮುಗ್ಧ ಪಾತ್ರದಲ್ಲಿ ಕಾಣಿಸಲಿದ್ದು, ಮಧ್ಯಮ ವರ್ಗದ ಜೀವನಕಥೆ ಇರಲಿದೆ ಎಂದು ಡಾಲಿ ವಿವರಿಸಿದರು.