ETV Bharat / sitara

ನೈಜ ಘಟನೆಗಳ ಸಿನಿಮಾ 'ನ್ಯೂರಾನ್' ಟ್ರೇಲರ್​ ಬಿಡುಗಡೆ

author img

By

Published : Jun 16, 2019, 9:59 PM IST

Updated : Jun 16, 2019, 10:13 PM IST

ವಿಕಾಸ್ ಪುಷ್ಪಗಿರಿ ನಿರ್ದೇಶನದ ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ 'ನ್ಯೂರಾನ್' ಟ್ರೇಲರ್​​ ಬಿಡುಗಡೆಯಾಗಿದ್ದು, ಸಿನಿಮಾ ಶೀಘ್ರವೇ ತೆರೆ ಕಾಣಲಿದೆ. ಈ ಚಿತ್ರದ ಮೂಲಕ ನಾಯಕ 'ಯುವ' ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

'ನ್ಯೂರಾನ್'

ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ 'ನ್ಯೂರಾನ್' ಟ್ರೇಲರ್​​ ಬಿಡುಗಡೆಯಾಗಿದೆ. ನಿರ್ದೇಶಕ ವಿಕಾಸ್​​​ ಪುಷ್ಪಗಿರಿ ಸಾಕಷ್ಟು ಅಧ್ಯಯನ ಮಾಡಿ ಈ ಸಿನಿಮಾ ನಿರ್ದೇಶನಕ್ಕೆ ಧುಮುಕಿದ್ದಾರೆ. ನಿಜಜೀವನದ ಕೆಲವೊಂದು ಘಟನೆಗಳನ್ನು ಮುಂದಿಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ.

  • " class="align-text-top noRightClick twitterSection" data="">

'ನ್ಯೂರಾನ್' ಎಂದರೆ ‘ನರ ಕೋಶ’. ಮನುಷ್ಯರಲ್ಲಿ ಈ ‘ನರ ಕೋಶ’ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ಇದೇ ವಿಚಾರವನ್ನು ಇಟ್ಟುಕೊಂಡು ಈ ಸಿನಿಮಾ ಮಾಡಲಾಗಿದೆ ಎಂದು ನಿರ್ದೇಶಕ ವಿಕಾಸ್ ಹೇಳುತ್ತಾರೆ. ಸಿನಿಮಾ ಚಿತ್ರೀಕರಣ ಪೂರೈಸಿ ಈಗ ಟ್ರೇಲರ್ ಕೂಡಾ ಬಿಡುಗಡೆ ಆಗಿದೆ. 45 ದಿನಗಳ ಕಾಲ ಬೆಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಐವರು ಜೊತೆಗೂಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಈ ಸಿನಿಮಾದ ಮೂಲಕ ನಾಯಕ 'ಯುವ' ಚಿತ್ರರಂಗಕ್ಕೆ ಅಡಿಯಿಟ್ಟಿದ್ದಾರೆ. ಸುಮಾರು 3 ವರ್ಷಗಳ ಹಿಂದೆಯೇ ಈ ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಸಿನಿಮಾ ಆರಂಭಕ್ಕೂ ಮುನ್ನ ಅದಕ್ಕಾಗಿ 6 ತಿಂಗಳ ಕಾಲ ನಟರಿಗೆ, ತಂತ್ರಜ್ಞರಿಗೆ ತರಬೇತಿ ನೀಡಲಾಗಿದೆಯಂತೆ. ಇದರಲ್ಲಿ ನೇಹಾ ಪಾಟೀಲ್ ಸಾಮಾಜಿಕ ಕಾರ್ಯಕರ್ತೆ ಆಗಿ ನಟಿಸಿದ್ದಾರೆ. ಇವರೊಂದಿಗೆ ಕಿರುತೆರೆಯ ಶಿಲ್ಪಾ, ವೈಷ್ಣವಿ ಚಂದ್ರನ್ ಮೆನನ್ ಹಾಗೂ ಇನ್ನಿತರರು ಬಣ್ಣ ಹಚ್ಚಿದ್ದಾರೆ.

ನ್ಯೂರಾನ್ ಟ್ರೈಲರ್ ಬಂತು

ನ್ಯೂರಾನ್ ಎಂದರೆ ಏನು? ಇದಕ್ಕೆ ನರ ಕೋಶ ಅಂತ ಹೇಳುತ್ತಾರೆ. ಇದಕ್ಕೂ ಸಿನಿಮಕ್ಕೂ ಏನು ಸಂಬಂದ? ಮಾನವ ಜೀವಿಯಲ್ಲಿ ನರ ಕೋಶ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ನರ ಕೋಶ 17 ಪರ್ಸೆಂಟ್ ಅಷ್ಟು ಐಂಸ್ಟೈನ್ ಎಂಬ ವಿಜ್ಞಾನಿ ಹತ್ತಿರ ಜಾಸ್ತಿ ಇದ್ದದ್ದು ಗೊತ್ತಿದೆ. ಆದರೆ ಸಾಮಾನ್ಯ ಜೀವಿಗಳಲ್ಲಿ? ಅದು ಅವರಿಗೆ ಗೊತ್ತಿರುವುದಿಲ್ಲ. ಸಮಯ, ಸಂದರ್ಭಕ್ಕೆ ಸರಿಯಾಗಿ ನರ ಕೋಶದ ಶಕ್ತಿ ವ್ಯಕ್ತ ಆಗುತ್ತದೆ.

ಇದೊಂದು ಸೈಂಟಿಫಿಕ್ ಥ್ರಿಲ್ಲರ್ ಸಿನಿಮಾ. ನಿರ್ದೇಶಕ ವಿಕಾಸ್ ಪುಷ್ಪಗಿರಿ ಅಧ್ಯಯನ ಮಾಡಿಯೇ ಈ ಸಿನಿಮಾಕ್ಕೆ ದುಕುಕಿದ್ದಾರೆ. ನಿಜ ಜೀವನದ ಕೆಲವು ಘಟನೆಗಳನ್ನು ಇಟ್ಟುಕೊಂಡು ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಚಿತ್ರೀಕರಣ ಪೂರೈಸಿ ಈಗ ಟ್ರೈಲರ್ ಬಿಡುಗಡೆ ಸಂದರ್ಭಕ್ಕೆ ಬಂದಿದ್ದಾರೆ. 45 ದಿವಸ ಬೆಂಗಳೂರು ಹಾಗೂ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಿದ್ದಾರೆ. 30 ರಿಂದ 33 ವರ್ಷದ ವಯಸ್ಸಿನ ತಂಡ ಈ ಸಿನಿಮಾಕ್ಕೆ ಕೆಲಸ ಮಾಡಿದೆ.

ಫ್ರೆಂಡ್ಸ್ ಸಿನಿಮಾಸ್ ಅಲ್ಲಿ ಐವರು ಈ ಸಿನಿಮಾಕ್ಕೆ ಹಣ ಹೂಡಿದ್ದಾರೆ. ಶ್ರೀನಿವಾಸ್ ಗೌಡ ಅದರಲ್ಲಿ ಪ್ರಮುಖರು. ಲೋಹಿತ್ ಭರಣಿ ಸಹ ನಿರ್ಮಾಪಕರಲ್ಲಿ ಒಬ್ಬರು. ಬೇರೆ ಸಿನಿಮಾಕ್ಕೆ 10 ಲಕ್ಷ ಹೂಡಿದ್ದರು. ಈ ಚಿತ್ರದ ಕಥೆ ಕೇಳಿ ವಿಕಾಸ್ ಪುಷ್ಪಗಿರಿ ಅವರಿಗೆ ಚೊಚ್ಚಲ ನಿರ್ದೇಶನದ ಜವಾಬ್ದಾರಿ ನೀಡಿದ್ದಾರೆ.

ಯುವ ಚಿತ್ರದ ಕಥಾ ನಾಯಕ. 3 ವರ್ಷಗಳ ಪಯಣ ಈ ಸಿನಿಮಾದೊಂದಿಗೆ ಸಾಗಿದೆ ಎನ್ನುತ್ತಾರೆ. ಆರು ತಿಂಗಳ ಕಾರ್ಯಾಗಾರ ಸಿನಿಮಾ ಮಾಡುವುದಕ್ಕೂ ಮೊದಲು ಬಹಳ ಸುಲಭ ಆಯಿತು ಎನ್ನುತ್ತಾರೆ. ನೇಹ ಪಾಟೀಲ್ ಸಾಮಾಜಿಕ ಕಾರ್ಯಕರ್ತೆ ಆಗಿ, ಶಿಲ್ಪಾ ಶೆಟ್ಟಿ ಕಿರು ತೆರೆ ಇಂದ ಹಿರಿ ತೆರೆಗೆ ನಾಯಕಿ ಆಗಿದ್ದಾರೆ, ವೈಷ್ಣವಿ ಚಂದ್ರನ್ ಮೆನನ್ 20 ರ ವಯಸ್ಸಿನಲ್ಲಿ 35 ವಯಸ್ಸಿನ ಪಾತ್ರ ಬೋಲ್ಡ್ ಆಗಿ ನಿರ್ವಹಿಸಿದ್ದಾರೆ.

Last Updated : Jun 16, 2019, 10:13 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.