ಕನ್ನಡ ಚಿತ್ರ ರಂಗದಲ್ಲಿ ನೀತು 2004 ರಲ್ಲೇ ಯಾಹೂ ಮುಖಾಂತರ ಕನ್ನಡ ಸಿನಿಮಾಕ್ಕೆ ಎಂಟ್ರಿ ಕೊಟ್ಟು ಇಂದಿಗೆ 15 ವರ್ಷಗಳ ಪೂರೈಸಿದ್ದಾರೆ. ನೀತು ಜೀವನದಲ್ಲಿ 2008ರಲ್ಲಿ ಗಾಳಿಪಟ ಸಿನಿಮಾ ಬೇರೆ ಆಯಾಮ ನೀಡಿತು. ಜೋಕ್ ಫಾಲ್ಸ್ ಸಿನಿಮಾದಲ್ಲಿ ರಮೇಶ್ ಅರವಿಂದ್ ಜೊತೆ ನಟಿಸಿದ್ದು, ಆ ಸಿನಿಮಾ 100 ದಿವಸ ಪ್ರದರ್ಶನ ಕಂಡಿತು. ಆಮೇಲೆ ಅವರು 20 ಸಿನಿಮಾಗಳಲ್ಲಿ ಅಭಿನಯಿಸಿದರೂ ಇವರಿಗೆ ದೊಡ್ಡ ಮಟ್ಟದ ಸ್ಥಾನ ಸಿಕ್ಕಲಿಲ್ಲ.
ಬೇರು, ಕರಾವಳಿ ಹುಡುಗಿ, ಇಶಾ, ಪೂಜಾರಿ, ಅಗ್ರಹಾರ, ಗಣೇಶ ಮತ್ತೆ ಬಂದ ಸಿನಿಮಾಗಳಲ್ಲಿ ಇವರು ನಟಿಸಿದ್ದರು. ಅಷ್ಟೆ ಅಲ್ಲದೆ ಮನಸಾರೆ ಸಿನಿಮಾದ ಒಂದು ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ. ಅದಾದ ಮೇಲೆ ವಿ.ರವಿಚಂದ್ರನ್ ಅವರ ಸಿನಿಮಾದಲ್ಲಿ ಒಂದು ಹಾಡಿಗೆ ಬಂದು ಹೋದರು.
ಈಗ ‘ಹ್ಯಾಂಗ್ ಓವರ್’ ಸಿನಿಮಾದಲ್ಲಿ ಒಂದು ಹಾಡಿಗೆ ನೀತು ಕುಣಿದಿದ್ದಾರೆ. ಅದಕ್ಕೆ ವಿಠಲ್ ಭಟ್ ಅವರ ಸ್ನೇಹ ಕಾರಣ. ಅದರ ಜೊತೆಗೆ ನನ್ನ ಪರ್ಸ್ ಸಹ ನಾನು ನೋಡಿಕೊಳ್ಳಬೇಕಲ್ಲ ಎನ್ನುತ್ತಾರೆ ನೀತು. ಈ ಹ್ಯಾಂಗ್ಓವರ್ ಸಿನಿಮಾದ ನಾನು ಋಕ್ಕು ಕೊಡ್ತೀನಿ ಲುಕ್ಕು ಹಾಡಿನಲ್ಲಿ ಹೆಜ್ಜೆ ಹಾಕಿದ್ದು, ಅಂತಹ ರೋಚಕವಾದದ್ದು ಏನೂ ಇಲ್ಲ. ನನ್ನ ಮುಂದಿನ ಸಿನಿಮಾ ‘ವಜ್ರಮುಖಿ’ ಹಾಗೂ ‘1888. ಈ ಸಿನಿಮಾಗಳು ನನಗೆ ಒಳ್ಳೆಯ ಅವಕಾಶ ನೀಡುತ್ತವೆ ಎಂಬ ಭರವಸೆ ಇದೆ ಅಂತಾರೆ ನೀತು.