ಕಳೆದ ವಾರ ಬಿಡುಗಡೆ ಆದ ‘ಬಡ್ಡಿಮಗನ್ ಲೈಫು’ ಚಿತ್ರದ ’ಏನ್ ಚಂದಾನೋ ತಕೋ' ಹಾಡನ್ನು ಸಾಕಷ್ಟು ಜನರು ನೋಡಿ, ಕೇಳಿ ಮೆಚ್ಚಿದ್ದಾರೆ. ಈ ಹಾಡಿನಿಂದ ನವೀನ್ ಸಜ್ಜು ಅವರ ಅಭಿಮಾನಿಗಳ ಸಂಖ್ಯೆ ಕೂಡಾ ಮತ್ತಷ್ಟು ಹೆಚ್ಚಾಗಿದೆ ಎಂದರೆ ತಪ್ಪಿಲ್ಲ.
- " class="align-text-top noRightClick twitterSection" data="">
ಈ ಮುನ್ನ ಕಂಡವರ ಮನೆ ಬಗ್ಗೆ ಮಾತನಾಡಿದ್ದ ನವೀನ್ ಸಜ್ಜು ಈಗ 'ನಾಳೆಯಿಂದ ಎಣ್ಣೆ ಬುಡ್ಬುಡ್ತೀನಿ' ಎನ್ನುತ್ತಿದ್ದಾರೆ. ಹೊಸ ವರ್ಷದ ಪಾರ್ಟಿ ಸಂಭ್ರಮದಲ್ಲಿ ಇರುವ ಜನರಿಗೆ ನವೀನ್ ಸಜ್ಜು ಮತ್ತಷ್ಟು ಕಿಕ್, ಜೋಷ್ ನೀಡಲು ರೆಡಿಯಾಗಿದ್ದಾರೆ. ನವೀನ್ ಸಜ್ಜು ಬಿಗ್ಬಾಸ್ ಮನೆಯಲ್ಲಿ ಇದ್ದಾಗ ಈ ಹಾಡು ಕಟ್ಟಿದ್ದರು. ನಿನ್ನೆ ರಾತ್ರಿ 10 ಗಂಟೆಗೆ ಬಿಗ್ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪ್ ಈ ವಿಡಿಯೋ ಹಾಡನ್ನು ಬಿಡುಗಡೆ ಮಾಡಿದ್ದಾರೆ. 'ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳನ್ನು ಹೇಳುತ್ತಾ, ಬಿಗ್ಬಾಸ್ ಮನೆಯಲ್ಲೇ ರಚಿಸಿದ ‘ನಾಳೆಯಿಂದ ಎಣ್ಣೆ ಬುಟ್ಬುಟ್ತಿನಿ’ ಹಾಡನ್ನು ಬಿಗ್ಬಾಸ್ ವೇದಿಕೆಯಲ್ಲಿ ಕಿಚ್ಚ ಸುದೀಪಣ್ಣ ಅವರು ಬಿಡುಗಡೆ ಮಾಡಿರುವುದು ಸಂತಸವನ್ನು ದುಪ್ಪಟ್ಟುಗೊಳಿಸಿದೆ' ಹಾಡು ಕೇಳಿ, ಆನಂದಿಸಿ, ಹಾರೈಸಿ...ಎಂದು ನವೀನ್ ಸಜ್ಜು ತಮ್ಮ ಫೇಸ್ಬುಕ್ನಲ್ಲಿ ಹಾಡಿನ ಲಿಂಗ್ ಹಾಗೂ ಸುದೀಪ್ ಜೊತೆಗಿನ ಫೋಟೋವನ್ನು ಷೇರ್ ಮಾಡಿಕೊಂಡಿದ್ದಾರೆ.
![Naveen sajju](https://etvbharatimages.akamaized.net/etvbharat/prod-images/naveen-sajju-nale-inda-enne-butbudthini1577673982135-77_3012email_1577673993_524.jpg)