ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಉಪ್ಪಿನ ಸತ್ಯಾಗ್ರಹದ ಬಗ್ಗೆ 'ದಂಡಿ' ಎಂಬ ಟೈಟಲ್ನಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿನಿಮಾವೊಂದು ಬರುತ್ತಿದೆ. ಈ ಚಿತ್ರದಲ್ಲಿ ತಾರಾ ಅನುರಾಧ ಹಾಗೂ ಸುಚೇಂದ್ರ ಪ್ರಸಾದ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
!['ದಂಡಿ' ಎಂಬ ಚಿತ್ರದಲ್ಲಿ ರಾಷ್ಟ್ರ ಪ್ರಶಸ್ತಿ ವಿಜೇತೆ ತಾರಾ ನಟನೆ](https://etvbharatimages.akamaized.net/etvbharat/prod-images/kn-bng-04-dhandi-cinemadahlie-actress-thara-72047350_23032021170611_2303f_1616499371_592.jpg)
ಇತ್ತೀಚೆಗಷ್ಟೇ ಹೊನ್ನಾವರದ ಮೂಡ ಗಣಪತಿ ದೇವಸ್ಥಾನದಲ್ಲಿ ಈ ಸಿನಿಮಾ ಸೆಟ್ಟೇರಿ ಚಿತ್ರೀಕರಣ ಕೂಡ ಶುರು ಮಾಡಿದೆ. ಪದ್ಮಶ್ರೀ ಪುರಸ್ಕೃತ ಸುಕ್ರಿ ಗೌಡ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ. ಡಾ.ರಾಜಶೇಖರ್ ಮಠಪತಿ ಅವರ ಕಾದಂಬರಿ ಆಧರಿಸಿ ನಿರ್ಮಾಣವಾಗುತ್ತಿರುವ ದಂಡಿ ಚಿತ್ರಕ್ಕೆ ವಿಶಾಲ್ ರಾಜ್ ನಿರ್ದೇಶನ ಮಾಡುತ್ತಿದ್ದಾರೆ.
![ದಂಡಿ ಸಿನಿಮಾದ ಚಿತ್ರೀಕರಣ ಆರಂಭ](https://etvbharatimages.akamaized.net/etvbharat/prod-images/kn-bng-04-dhandi-cinemadahlie-actress-thara-72047350_23032021170611_2303f_1616499371_832.jpg)
ಹೊನ್ನಾವರ, ಸಿದ್ದಾಪುರ, ಅಂಕೋಲ ಸುತ್ತಮುತ್ತ ಮೂವತ್ತು ದಿನಗಳ ಕಾಲ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಕಲ್ಯಾಣಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಉಷಾರಾಣಿ ಅವರು ನಿರ್ಮಿಸುತ್ತಿರುವ ಈ ಚಿತ್ರವನ್ನು ವಿಶಾಲ್ ರಾಜ್ ನಿರ್ದೇಶಿಸುತ್ತಿದ್ದಾರೆ.
ವಿಶಾಲ್ ರಾಜ್ ಅವರೇ ಚಿತ್ರಕಥೆ ಬರೆದಿದ್ದು, ವೆಂಕಟೇಶ್ ಅವರ ಛಾಯಾಗ್ರಹಣವಿದೆ. ಸಾಹಿತ್ಯ ಹಾಗೂ ಸಂಭಾಷಣೆಯನ್ನು ರಾಗಂ ಅವರು ಬರೆದಿದ್ದು, ರಾಮ್ ಕ್ರಿಶ್ ಸಂಗೀತ ನೀಡುತ್ತಿದ್ದಾರೆ.
![ದಂಡಿ ಸಿನಿಮಾದ ಚಿತ್ರೀಕರಣ ಆರಂಭ](https://etvbharatimages.akamaized.net/etvbharat/prod-images/kn-bng-04-dhandi-cinemadahlie-actress-thara-72047350_23032021170611_2303f_1616499371_51.jpg)
ತಾರಾ ಅನುರಾದ ಮತ್ತು ಸುಚೀಂದ್ರ ಪ್ರಸಾದ್ ಅಲ್ಲದೇ, ನೂತನ ಪ್ರತಿಭೆಗಳಾದ ಯುವಾನ್ ದೇವ್(ನಿರ್ಮಾಪಕರ ಪುತ್ರ) ಹಾಗೂ ಶಾಲಿನಿ ಭಟ್ ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ದಾಮೋದರ್ ನಾಯ್ಡು ಕೂಡ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಉತ್ತರ ಕನ್ನಡದ ಸ್ವಾತಂತ್ರ್ಯ ಹೋರಾಟಗಾರರಿಗೆ ಈ ಚಿತ್ರ ಸಮರ್ಪಣೆಯಾಗಲಿದೆ. ಸ್ವತಂತ್ರ ಬಂದು 75 ವರ್ಷಗಳಾಗುತ್ತಿರುವ ಈ ಶುಭ ಸಂದರ್ಭದಲ್ಲಿ ಈ ಚಿತ್ರವನ್ನು ತೆರೆಗೆ ತರಲು ನಿರ್ದೇಶಕರು ಮುಂದಾಗಿದ್ದಾರೆ.