ETV Bharat / sitara

ಮಹಾನಟಿ ನಂತರ 'ಮಿಸ್ ಇಂಡಿಯಾ' ಆಗಲು ಹೊರಟ ಕೀರ್ತಿ ಸುರೇಶ್ - Director Narendra Nath

ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್ ಕಳೆದ ವರ್ಷ ಬಿಡುಗಡೆಯಾದ 'ಮಹಾನಟಿ' ಚಿತ್ರದ ನಂತರ ಮತ್ತೆ ತೆಲುಗು ಚಿತ್ರದಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಅವರು 'ಮಿಸ್​ ಇಂಡಿಯಾ' ಆಗಲು ಹೊರಟಿದ್ದಾರೆ. ನರೇಂದ್ರನಾಥ್ ನಿರ್ದೇಶನದ 'ಮಿಸ್ ಇಂಡಿಯಾ' ಸಿನಿಮಾದಲ್ಲಿ ಕೀರ್ತಿ ನಟಿಸುತ್ತಿದ್ದಾರೆ.

ಕೀರ್ತಿ ಸುರೇಶ್
author img

By

Published : Aug 27, 2019, 4:56 PM IST

'ಮಹಾನಟಿ' ಚಿತ್ರದ ನಂತರ ನಟಿ ಕೀರ್ತಿ ಸುರೇಶ್ ಬೇರೆ ಭಾಷೆಯ ಸಿನಿಮಾಗಳಲ್ಲಿ ಬ್ಯುಸಿ ಆದರು. ಅಜಯ್ ದೇವಗನ್ ಜೊತೆ 'ಮೈದಾನ್' ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್​​​​ಗೆ ಕೂಡಾ ಕಾಲಿರಿಸಿದರು. ಇದೀಗ ಅವರ ಮತ್ತೊಂದು ತೆಲುಗು ಸಿನಿಮಾ ರೆಡಿಯಾಗುತ್ತಿದೆ.

  • " class="align-text-top noRightClick twitterSection" data="">

ಈಗಾಗಲೇ ಚಿತ್ರದ ಶೂಟಿಂಗ್ ಕೂಡಾ ಆರಂಭವಾಗಿದ್ದು ಕೀರ್ತಿ ಕೂಡಾ ಶೂಟಿಂಗ್​​ನಲ್ಲಿ ಭಾಗವಹಿಸುತ್ತಿದ್ದಾರೆ. ನಿನ್ನೆ ಕೀರ್ತಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಈ ಚಿತ್ರದ ಟೀಸರನ್ನು ಶೇರ್ ಮಾಡಿಕೊಂಡಿದ್ದಾರೆ. ನರೇಂದ್ರನಾಥ್ ಈ ಸಿನಿಮಾವನ್ನು ನಿರ್ದೇಶಿಸುತ್ತಿದ್ದು ಸಿನಿಮಾಗೆ 'ಮಿಸ್ ಇಂಡಿಯಾ' ಎಂದು ಹೆಸರಿಟ್ಟಿರುವುದಾಗಿ ತಿಳಿದುಬಂದಿದೆ. ಚಿತ್ರದಲ್ಲಿ ಕೀರ್ತಿ ಮಿಸ್ ಇಂಡಿಯಾ ಆಗಿ ನಟಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಈಸ್ಟ್ ಕೋಸ್ಟ್​ ಪ್ರೊಡಕ್ಷನ್ ಬ್ಯಾನರ್ ಅಡಿ ಮಹೇಶ್ ಎಸ್. ಕೊನೇರು ಈ ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ. ನರೇಂದ್ರನಾಥ್ ಹಾಗೂ ತರುಣ್ ಚಿತ್ರಕಥೆ ಬರೆದಿದ್ದು ಚಿತ್ರದ ಹಾಡುಗಳಿಗೆ ತಮನ್. ಎಸ್​​​​ ಸಂಗೀತ ನೀಡುತ್ತಿದ್ದಾರೆ. ಜಗಪತಿಬಾಬು, ನವೀನ್​ ಚಂದ್ರ, ರಾಜೇಂದ್ರ ಪ್ರಸಾದ್, ನರೇಶ್​, ಭಾನುಶ್ರೀ ಮೆಹ್ರಾ, ಸುಮಂತ್ ಹಾಗೂ ಇನ್ನಿತರರು ಚಿತ್ರದ ತಾರಾಗಣದಲ್ಲಿದ್ದಾರೆ.

Keerthy Suresh

Intro:Body:

Keerthy Suresh

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.