ETV Bharat / sitara

ಹಿಂದಿಗೆ ರೀಮೇಕ್ ಆಗುತ್ತಿದೆ 'ಮೈನಾ'...ನಿರ್ದೇಶನ ಮಾಡ್ತಿರೋದು ನಾಗಶೇಖರ್​​​ - abhishek ambareesh

ನಿತ್ಯಾ ಮೆನನ್ ಹಾಗೂ ಚೇತನ್ ಕುಮಾರ್ ನಟಿಸಿದ್ದ 'ಮೈನಾ' ಸಿನಿಮಾ ಇದೀಗ 'ಕಲರ್​​​​ಫುಲ್' ಹೆಸರಿನಲ್ಲಿ ಹಿಂದಿಗೆ ರೀಮೇಕ್ ಆಗುತ್ತಿದ್ದು ಈ ಸಿನಿಮಾವನ್ನು ಕೂಡಾ ರಾಜಶೇಖರ್ ಅವರೇ ನಿರ್ದೇಶಿಸಲು ಹೊರಟಿದ್ದಾರೆ. ಚಿತ್ರದ ನಾಯಕ ಆಯ್ಕೆಯಾಗಿದ್ದು ನಾಯಕಿಯ ಹುಡುಕಾಟ ನಡೆಯುತ್ತಿದೆ.

ನಾಗಶೇಖರ್​​​
author img

By

Published : Jul 29, 2019, 10:55 AM IST

2013 ರಲ್ಲಿ ಬಿಡುಗಡೆಯಾಗಿ ಸೂಪರ್ ಸಕ್ಸಸ್ ಕಂಡ 'ಮೈನಾ' ಸಿನಿಮಾ ಹಿಂದಿಗೆ ರೀಮೇಕ್ ಆಗುತ್ತಿದ್ದು ಕನ್ನಡದಲ್ಲಿ ಈ ಸಿನಿಮಾವನ್ನು ನಿರ್ದೇಶಿಸಿದ್ದ ನಾಗಶೇಖರ್ ಅವರೇ ಹಿಂದಿಯಲ್ಲಿ ಕೂಡಾ ನಿರ್ದೇಶಿಸಲು ಹೊರಟಿದ್ದಾರೆ.

myna movie
'ಮೈನಾ' ಚಿತ್ರದಲ್ಲಿ ನಿತ್ಯಾ ಮೆನನ್​, ಚೇತನ್​​

'ಅರಮನೆ', 'ಸಂಜು ಮತ್ತು ಗೀತಾ' ಹಾಗೂ 'ಮೈನಾ' ಸಿನಿಮಾಗಳನ್ನು ನಿರ್ದೇಶಿಸಿ ಹ್ಯಾಟ್ರಿಕ್ ನಿರ್ದೇಶಕ ಎಂದು ಹೆಸರಾದವರು ರಾಜಶೇಖರ್​​​. ಅವರು ನಿರ್ದೇಶಿಸಿದ ದುನಿಯಾ ವಿಜಯ್ ಅಭಿನಯದ 'ಮಾಸ್ತಿಗುಡಿ' ಮತ್ತು ಅಭಿಷೇಕ್ ಅಂಬರೀಶ್ ಅಭಿನಯದ 'ಅಮರ್' ಸಿನಿಮಾಗಳಿಗೆ ಒಳ್ಳೆ ಪ್ರತಿಕ್ರಿಯೆ ದೊರೆತರೂ ಬಾಕ್ಸ್​ ಆಫೀಸಿನಲ್ಲಿ ಹೇಳಿಕೊಳ್ಳುವ ಗಳಿಕೆ ಮಾಡಲಿಲ್ಲ. ಇದೀಗ ಅವರು ತಾವು 2013 ರಲ್ಲಿ ನಿರ್ದೇಶಿಸಿದ್ದ ಚೇತನ್ ಹಾಗೂ ನಿತ್ಯಾ ಮೆನನ್ ನಟಿಸಿರುವ 'ಮೈನಾ' ಸಿನಿಮಾವನ್ನು ಹಿಂದಿಯಲ್ಲಿ ನಿರ್ದೇಶಿಸುತ್ತಿದ್ದಾರೆ.

ಈ ಸಿನಿಮಾಗೆ ‘ಕಲರ್​ಫುಲ್’ಎಂದೂ ಹೆಸರಿಟ್ಟಿದ್ದಾರೆ. ಮುಂಬೈ ಮೂಲದ ನಿರ್ಮಾಪಕರೊಬ್ಬರ ಪುತ್ರನನ್ನು ಸಿನಿಮಾಗೆ ನಾಯಕನನ್ನಾಗಿ ಆಯ್ಕೆ ಮಾಡಿದ್ದು ನಾಯಕಿಗಾಗಿ ಹುಡುಕಾಟ ನಡೆಸಿದ್ದಾರೆ. ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗ್ಡೆ ಅವರು ‘ಮೈನಾ’ ಚಿತ್ರದ ಛಾಯಾಗ್ರಹಣದಲ್ಲಿ ದೂಧ್ ಸಾಗರ್ ಎಂಬ ಸ್ಥಳವನ್ನು ರಮಣೀಯವಾಗಿ ತೋರಿಸಿದ್ದರು. ಈಗ ಈ ರೀಮೇಕ್ ಸಿನಿಮಾಕ್ಕೂ ಸತ್ಯಹೆಗ್ಡೆ ಅವರೇ ಛಾಯಾಗ್ರಹಣ ಮಾಡಲಿದ್ದಾರೆ. ಆದರೆ ಕಥಾವಸ್ತು ನಿರೂಪಣೆಯಲ್ಲಿ ನಾಗಶೇಖರ್ ಕೆಲವೊಂದು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ನಾಗಶೇಖರ್ ಕನ್ನಡದ ಮೈನಾ ಹಿಂದಿಗೆ ನಿರ್ದೇಶನ

ಮೊದಲ ಮೂರು ಸಿನಿಮಾಗಳ ಯಶಸ್ಸಿನಿಂದ – ಅರಮನೆ, ಸಂಜು ಮತ್ತು ಗೀತಾ ಮತ್ತು ಮೈನಾ ಸಿನಿಮಗಳಿಂದ ಹ್ಯಾಟ್ ಟ್ರಿಕ್ ಎಂಬ ಬಿರುದು ಪಡೆದ ನಗೆ ನಟ ಹಾಗೂ ನಿರ್ದೇಶಕ ನಾಗಶೇಖರ್ – ಮಾಸ್ತಿ ಗುಡಿ ಮತ್ತು ಅಮರ್ ಸಿನಿಮಗಳಿಂದ ಯಶಸ್ಸಿನ ಗಲ್ಲಾಪೆಟ್ಟಿಗೆಯಲ್ಲಿ ಯಾಕೋ ಸೊರಗಿದರು.

ಈಗ ಅವರು ಸದ್ದಿಲ್ಲದೇ ಅವರ ಮೈನಾ (ಚೇತನ್ ಕುಮಾರ್ ಹಾಗೂ ನಿತ್ಯ ಮೆನನ್) ಸಿನಿಮಾವನ್ನು ಹಿಂದಿ ಭಾಷೆಗೆ ಆರು ವರ್ಷಗಳ ಬಳಿಕ ನಿರ್ದೇಶನ ಮಾಡಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿಯಲ್ಲಿ ರೀಮೇಕ್ ಆಗುತ್ತಿರುವ ಸಿನಿಮಾಕ್ಕೆ ಕಲರ್ ಫುಲ್ ಎಂದು ನಾಮಕರಣ ಮಾಡಿಕೊಂಡಿದ್ದಾರೆ ನಿರ್ದೇಶಕ ನಾಗಶೇಖರ್.

ತಮ್ಮ ಫೇಸ್ ಬುಕ್ ಎಕೌಂಟ್ ಅಲ್ಲಿ ನಾಗಶೇಖರ್ ಅವರ ನಿರ್ಧಾರ ಸರಿಯಾಗಿ ಇದೆಯಾ ಅಥವಾ ಇಲ್ಲವ ಎಂದು ಅವರ ಅಭಿಮಾನಿಗಳನ್ನು ಕೇಳಿದ್ದಾರೆ.

ಮುಂಬೈ ಮೂಲದ ನಿರ್ಮಾಪಕ ಅವರ ಪುತ್ರನನ್ನು ಈ ಕನ್ನಡದ ಮೈನಾ ರೀಮೇಕ್ ಕಲರ್ ಫುಲ್ ಸಿನಿಮಾ ಇಂದ ಪರಿಚಯ ಮಾಡುತ್ತಿದ್ದಾರೆ. ನಾಯಕಿಯ ತಲಾಷ್ ನಾಗಶೇಖರ್ ಮಾಡುತ್ತಿದ್ದಾರೆ.

ಕನ್ನಡದ ಹೆಸರಾಂತ ಛಾಯಾಗ್ರಾಹಕ ಸತ್ಯ ಹೆಗ್ಡೆ ಅವರು ಮೈನಾ ಚಿತ್ರಕ್ಕೆ ಛಾಯಾಗ್ರಹಣದಲ್ಲಿ ದೂಧ್ ಸಾಗರ್ ಎಂಬ ಸ್ಥಳವನ್ನು ರಮಣೀಯವಾಗಿ ತೋರಿಸಿದ್ದರು. ಈಗ ಈ ರೀಮೇಕ್ ಸಿನಿಮಕ್ಕೂ ಸತ್ಯ ಹೆಗ್ಡೆ ಅವರೇ ಛಾಯಾಗ್ರಹಣ ಮಾಡಲಿದ್ದಾರೆ. ಆದರೆ ಕಥಾ ವಸ್ತು ನಿರೂಪಣೆಯಲ್ಲಿ ನಾಗಶೇಖರ್ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.