ಸೆಲಬ್ರಿಟಿಗಳ ಮಕ್ಕಳು ಚಿತ್ರರಂಗಕ್ಕೆ ಬರುವುದು ಸುಲಭ. ಆದರೂ ಈ ಸಿನಿಮಾ ಎಂಬ ಮಾಯಾ ಬಜಾರ್ನಲ್ಲಿ ನೆಲೆ ಕಾಣುವುದು ಬಹಳ ಕಷ್ಟದ ಕೆಲಸ. ಇದುವರೆಗೂ ಎಷ್ಟೋ ಸೆಲಬ್ರಿಟಿಗಳ ಮಕ್ಕಳು ನಾಯಕ-ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದಾರೆ.

ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಎಂ.ಎಂ.ಕೀರವಾಣಿ ಕಿರಿಯ ಪುತ್ರ ಶ್ರೀ ಸಿಂಹ ಇದೀಗ ನಾಯಕನಾಗಿ ಟಾಲಿವುಡ್ಗೆ ಕಾಲಿಟ್ಟಿದ್ದಾರೆ. ಟಾಲಿವುಡ್ನ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆ 'ಮೈತ್ರಿ ಮೂವಿ ಮೇಕರ್ಸ್' ತಯಾರಿಸುತ್ತಿರುವ 'ಮತ್ತು ವದಲರಾ' ಎಂಬ ಚಿತ್ರದ ಮೂಲಕ ಶ್ರೀ ಸಿಂಹ ಕೊಡೂರಿ ನಾಯಕನಾಗಿ ಪರಿಚಯವಾಗುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ಅನ್ನು ಜ್ಯೂ. ಎನ್ಟಿಆರ್ ಬಿಡುಗಡೆ ಮಾಡಿದ್ದು, ಚಿತ್ರಕ್ಕೆ ಶುಭ ಕೋರಿದ್ದಾರೆ. ಚಿತ್ರದ ಫಸ್ಟ್ ಲುಕ್ ಕೂಡಾ ಬಹಳ ವಿಭಿನ್ನವಾಗಿದೆ. ಖ್ಯಾತ ಗಾಯಕ ಕೀರವಾಣಿ ಮೊದಲ ಪುತ್ರ ಕಾಲಭೈರವ ಈ ಚಿತ್ರದ ಮೂಲಕ ಸಂಗೀತ ನಿರ್ದೇಶನಕ್ಕೆ ಕಾಲಿಟ್ಟಿದ್ದಾರೆ.
-
Time flies and how! My brothers are all grown up! It gives me immense pleasure to release #MathuVadalaraFirstLook featuring Simha @Simhakoduri2302 in the lead role and Bhairi @kaalabhairava7 as the music director. Wishing them the very best on their debut. Good luck to the team! pic.twitter.com/mQzdlEqXdk
— Jr NTR (@tarak9999) October 23, 2019 " class="align-text-top noRightClick twitterSection" data="
">Time flies and how! My brothers are all grown up! It gives me immense pleasure to release #MathuVadalaraFirstLook featuring Simha @Simhakoduri2302 in the lead role and Bhairi @kaalabhairava7 as the music director. Wishing them the very best on their debut. Good luck to the team! pic.twitter.com/mQzdlEqXdk
— Jr NTR (@tarak9999) October 23, 2019Time flies and how! My brothers are all grown up! It gives me immense pleasure to release #MathuVadalaraFirstLook featuring Simha @Simhakoduri2302 in the lead role and Bhairi @kaalabhairava7 as the music director. Wishing them the very best on their debut. Good luck to the team! pic.twitter.com/mQzdlEqXdk
— Jr NTR (@tarak9999) October 23, 2019
ಕೀರವಾಣಿ ತೆಲುಗು, ತಮಿಳು, ಮಲಯಾಳಂ ಜೊತೆಗೆ ಕನ್ನಡದ ಅಳಿಮಯ್ಯ, ಭೈರವ, ಸ್ವಾತಿ, ಅಪ್ಪಾಜಿ, ಕರ್ನಾಟಕ ಸುಪುತ್ರ, ದೀಪಾವಳಿ, ಸುಂದರಕಾಂಡ, ಜಮೀನ್ದಾರ್ರು, ವೀರ ಮದಕರಿ ಚಿತ್ರದ ಹಾಡುಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದೀಗ ತಮ್ಮ ಪುತ್ರನನ್ನು ನಾಯಕನನ್ನಾಗಿ ಟಾಲಿವುಡ್ಗೆ ಪರಿಚಯಿಸುತ್ತಿದ್ದಾರೆ. ರಿತೇಶ್ ರಾಣಾ 'ಮತ್ತು ವದಲರಾ' ಚಿತ್ರವನ್ನು ನಿರ್ದೇಶಿಸುತ್ತಿದ್ದು, ಶ್ರೀ ಸಿಂಹ ಟಾಲಿವುಡ್ನಲ್ಲಿ ಹೇಗೆ ನೆಲೆ ನಿಲ್ಲುತ್ತಾರೆ ಕಾದು ನೋಡಬೇಕು.
