ಮಂಸೋರೆ ನಿರ್ದೇಶನದ, ಯಜ್ಞ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿರುವ ಆ್ಯಕ್ಟ್-1978 ಸಿನಿಮಾ ರಾಜ್ಯಾದ್ಯಂತ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಹಾಗೂ ಸಿನಿಮಾ ತಾರೆಯರ ಮನಗೆದ್ದಿದೆ. ಇದೀಗ ನಾದ ಬ್ರಹ್ಮ ಹಂಸಲೇಖ ಸಹ ಆ್ಯಕ್ಟ್-1978 ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.
ಲಾಕ್ಡೌನ್ ಬಳಿಕ ಸಿನಿಮಾ ನೋಡಲು ಮಾಲ್ಗೆ ಹೋಗಿದ್ದೆವು. ಟೈಟಲ್ನಿಂದಲೇ ಗಮನ ಸೆಳೆದ ಚಿತ್ರ ಆ್ಯಕ್ಟ್-1978. ಸಿನಿಮಾದ ಕತೆ, ಸ್ಕ್ರೀನ್ ಪ್ಲೇ ಬಹಳ ಚೆನ್ನಾಗಿದೆ. ಕನ್ನಡದಲ್ಲಿ ಇಂತಹ ಸಿನಿಮಾ ಬಂದಿರುವುದು ಖುಷಿಯ ವಿಚಾರ. ಈ ಚಿತ್ರದಲ್ಲಿ ರೈತ ತೆಂಗಿನ ಮರದಿಂದ ಬೀಳುವ ದೃಶ್ಯ ನನ್ನ, ಕಣ್ಣಲ್ಲಿ ಕಟ್ಟಿದೆ. ಈ ಸಿನಿಮಾ ನಮ್ಮ ಕನ್ನಡದ ಗೌರವವನ್ನ ಹೆಚ್ಚಿಸಿದೆ. ನಮ್ಮ ಸಮಾಜದ ಕನ್ನಡಿಯನ್ನ ಎತ್ತಿ ತೋರಿಸುವ ಚಿತ್ರ ಇದಾಗಿದೆ ಎಂದು ಹೇಳಿದ್ದಾರೆ.
ಗೀತಾ ಎಂಬ ನೊಂದ ಮಹಿಳೆ ಪಾತ್ರದಲ್ಲಿ ಯಜ್ಞ ಶೆಟ್ಟಿ ಅದ್ಭುತವಾಗಿ ನಟಿಸಿದ್ದು, ವಯಸ್ಸಾದ ವೃದ್ಧನ ಪಾತ್ರಕ್ಕೆ ನಟ ಬಿ.ಸುರೇಶ್ ಜೀವ ತುಂಬಿದ್ದಾರೆ. ಇದರ ಜೊತೆಗೆ ಹಿರಿಯ ನಟ ದತ್ತಣ್ಣ, ಅವಿನಾಶ್, ಅಚ್ಯುತ್ ಕುಮಾರ್, ಶೃತಿ, ಪ್ರಮೋದ್ ಶೆಟ್ಟಿ , ಸಂಚಾರಿ ವಿಜಯ್ ಸೇರಿದಂತೆ ಸಾಕಷ್ಟು ಕಲಾವಿದರ ದಂಡು ಈ ಚಿತ್ರದಲ್ಲಿದೆ.