ETV Bharat / sitara

ಬರ್ತಿದೆ ಮಾಜಿ ಭೂಗತ ಪಾತಕಿ ಮುತ್ತಪ್ಪ ರೈ ಸಿನಿಮಾ: ಟೈಟಲ್ ಏನು ಗೊತ್ತಾ? - MR is Muthappa Rai Biography movie

2005ರಲ್ಲಿ ಡೆಡ್ಲಿ ಸೋಮ ಎಂಬ ರೌಡಿಯ ಕಥೆ ಹೇಳಿ ಸಕ್ಸಸ್ ಕಂಡಿದ್ದ ರವಿ ಶ್ರೀವತ್ಸ ಈ ಬಾರಿ ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಬಗ್ಗೆ ಹೇಳೋದಿಕ್ಕೆ ಬರ್ತಾ ಇದ್ದಾರೆ.

MR is Muthappa Rai Biography movie
ಬರ್ತಿದೆ ಮಾಜಿ ಭೂಗತ ದೊರೆ ಮುತ್ತಪ್ಪ ರೈ ಸಿನಿಮಾ : ಟೈಟಲ್ ಏನು ಗೊತ್ತಾ?
author img

By

Published : Nov 26, 2020, 7:33 PM IST

ಕನ್ನಡ ಚಿತ್ರರಂಗದಲ್ಲಿ ರಿಯಲ್ ರೌಡಿಗಳ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವ ಪರಿಪಾಠ ಮೊದಲಿನಿಂದಲೂ ಇದೆ. ಈ ಹಿಂದೆ ಬೆಂಗಳೂರು ಡಾನ್ ಆಗಿ ಮೆರೆದ ಎಂ.ಪಿ ಜಯರಾಜ್ ಬಯೋಗ್ರಾಫಿ ಸಿನಿಮಾ ಈಗಾಗಲೇ ಶುರುವಾಗಿದೆ. ಇದರ ಬೆನ್ನಲ್ಲೇ ಅಂಡರ್ ವರ್ಲ್ಡ್ ಸಿನಿಮಾಗಳ ನಿರ್ದೇಶಕ ಅಂತಾ ಕರೆಯಿಸಿಕೊಂಡಿರುವ ನಿರ್ದೇಶಕ ರವಿ ಶ್ರೀವತ್ಸ ಮತ್ತೊಂದು ಅಂಡರ್ ವರ್ಲ್ಡ್ ಕಥೆಯನ್ನ ತೆರೆ ಮೇಲೆ ತರಲು ಮುಂದಾಗಿದ್ದಾರೆ.

MR is Muthappa Rai Biography movie
ರವಿ ಶ್ರೀವತ್ಸ

2005ರಲ್ಲಿ ಡೆಡ್ಲಿ ಸೋಮ ಎಂಬ ರೌಡಿಯ ಕಥೆ ಹೇಳಿ ಸಕ್ಸಸ್ ಕಂಡಿದ್ದ ರವಿ ಶ್ರೀವತ್ಸ ಈ ಬಾರಿ ಅಂಡರ್ ವರ್ಲ್ಡ್ ಡಾನ್ ಆಗಿ ಮೆರೆದ ಮುತ್ತಪ್ಪ ರೈ ಬಗ್ಗೆ ಹೇಳೋದಿಕ್ಕೆ ಬರ್ತಾ ಇದ್ದಾರೆ.

MR is Muthappa Rai Biography movie
ಡೆಡ್ಲಿ ಸೋಮೊ ಸಿನಿಮಾ

ಮುತ್ತಪ್ಪ ರೈ ಸಿನಿಮಾ ಮಾಡುವ ಉದ್ದೇಶದಿಂದ ಕಳೆದ 20 ವರ್ಷಗಳಿಂದ ರೈ ಬಗ್ಗೆ ರಿಸರ್ಚ್ ಮಾಡಿರುವ ರವಿ ಶ್ರೀವತ್ಸ, ಈಗ ರೈ ನಿಧನದ ಬಳಿಕ ಸಿನಿಮಾ ಮಾಡಲು ಹೊರಟ್ಟಿದ್ದಾರೆ. ಈ ಚಿತ್ರಕ್ಕೆ M.R ಅಂಥಾ ಟೈಟಲ್ ಇಟ್ಟಿದ್ದು, ಸಿನಿಮಾದ ಅದ್ದೂರಿ ಫೋಟೋಶೂಟ್​​ ಮಾಡಿಸಿದ್ದಾರೆ.

ರಾಮನಗರದ ಬಂಡೆಗಳ ಮಧ್ಯೆದಲ್ಲಿರೋ ಹೆಲಿಪ್ಯಾಡ್​​ನಲ್ಲಿ, ನಿರ್ದೇಶಕ ರವಿ ಶ್ರೀವತ್ಸ M.R ಚಿತ್ರದ ಫೋಟೋಶೂಟ್ ಮಾಡಿಸಿದ್ದಾರೆ. ಇನ್ನು ದೀಕ್ಷಿತ್ ಎಂಬ ಯುವ ನಟ ಮುತ್ತಪ್ಪ ರೈ ಪಾತ್ರವನ್ನ ಮಾಡುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ, ಯುವ ನಟ ದೀಕ್ಷಿತ್ ಬಂದು ಸಖತ್ ರಾಯಲ್ ಇಳಿಯುವ ಸ್ಟೈಲ್​​​ ಅನ್ನು ನಿರ್ದೇಶಕ ರವಿ ಶ್ರೀವತ್ಸ ಫೋಟೋ ಶೂಟ್ ಮಾಡಿಸಿದ್ದಾರೆ.

MR is Muthappa Rai Biography movie
ದೀಕ್ಷಿತ್

ಈ ಚಿತ್ರದಲ್ಲಿ ಮುತ್ತಪ್ಪ ರೈ ಬ್ಯಾಂಕ್ ಉದ್ಯೋಗಿ ಆದಾಗಿನಿಂದ, ಜಯಕರ್ನಾಟಕ ಸಂಘಟನೆ ಸ್ಥಾಪನೆಯವರೆಗಿನ ಕಥೆ ಇರಲಿದೆಯಂತೆ. ಮುಖ್ಯವಾಗಿ ಮುತ್ತಪ್ಪ ರೈ ಅಂಡರ್ ವರ್ಲ್ಡ್ ಆಗಿದ್ದು ಹೇಗೆ ಅಲ್ಲದೆ ಮುತ್ತಪ್ಪ ರೈ ಲವ್ ಸ್ಟೋರಿ ಕೂಡ ಈ ಸಿನಿಮಾದಲ್ಲಿ ಇದೆಯಂತೆ.

MR is Muthappa Rai Biography movie
ದೀಕ್ಷಿತ್

ಈ ಚಿತ್ರದಲ್ಲಿ ನಾಯಕನ ಹೆಸರು ಮುತ್ತಪ್ಪ, ಅಲ್ಲದೆ ಡಾನ್ ಆದ ನಂತ್ರ ರೈನ ಯಾವ ಹೆಸರಲ್ಲಿ ಭೂಗತ ಜಗತ್ತು ಕರೆಯುತ್ತಿತ್ತು ಎಂಬುದನ್ನು ಚಿತ್ರದಲ್ಲಿ ನೋಡಬಹುದಂತೆ. ಇನ್ನು ಡೆಡ್ಲಿ ಸೋಮ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಪಕ ಎಮ್.ಮಂಜುನಾಥ್ ಗೌಡ ಈ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷ ಏನಂದ್ರೆ ನಿರ್ಮಾಪಕ ಮಂಜುನಾಥ್ ಗೌಡ ಚಿತ್ರದಲ್ಲಿ ದೀಕ್ಷಿತ್ ಮುತ್ತಪ್ಪ ರೈ ಪಾತ್ರ ಮಾಡುತ್ತಾರಂತೆ.

MR is Muthappa Rai Biography movie
ದೀಕ್ಷಿತ್

ಚಿತ್ರೀಕರಣವನ್ನು ಪುತ್ತೂರು, ದುಬೈ, ಮಂಗಳೂರು ಸುತ್ತಮುತ್ತ ಮಾಡಲು ನಿರ್ದೇಶಕ ರವಿಶ್ರೀವತ್ಸ ಸಿದ್ಧತೆ ನಡೆಸಿದ್ದಾರೆ. ಜನವರಿ ಮೊದಲ ವಾರದಿಂದ ಈ M.R ಸಿನಿಮಾದ ಚಿತ್ರೀಕರಣ ಶುರುವಾಗಲಿದೆ.

ಫೋಟೋಶೂಟ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.