ETV Bharat / sitara

'ಸಲಗ' ಸಿನಿಮಾ ನೋಡುವ ಇಚ್ಛೆ ವ್ಯಕ್ತಪಡಿಸಿದ ಸಂಸದ ತೇಜಸ್ವಿ ಸೂರ್ಯ - Duniya Vijay starring Salaga

ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ 'ಸಲಗ' ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಮಾತ್ರವಲ್ಲ ಸಂಸದ ತೇಜಸ್ವಿ ಸೂರ್ಯ ಕೂಡಾ ಹಂಬಲ ವ್ಯಕ್ತಪಡಿಸಿದ್ದಾರೆ.

Salaga movie
'ಸಲಗ'
author img

By

Published : Feb 24, 2021, 4:59 PM IST

'ಸಲಗ' ಸಿನಿಮಾ ಹಲವಾರು ವಿಶೇಷತೆಗಳಿಂದ ಸದ್ದು ಮಾಡುತ್ತಿರುವ ಸಿನಿಮಾ. ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶನದ ಜೊತೆಗೆ ಅಭಿನಯಿಸುತ್ತಿರುವ ಸಿನಿಮಾ ಇದು. ಲಾಕ್​ಡೌನ್ ತೆರವುಗೊಳಿಸುತ್ತಿದ್ದಂತೆ ಸಿನಿಮಾ ರಿಲೀಸ್ ಮಾಡುವುದಾಗಿ ವಿಜಯ್ ಹೇಳಿದ್ದರು. ಆದರೆ ಚಿತ್ರಮಂದಿರದಲ್ಲಿ ಶೇ. 50 ರಷ್ಟು ಸೀಟುಗಳಿಗೆ ಮಾತ್ರ ಅವಕಾಶವಿದ್ದು ಜನರು ಚಿತ್ರಮಂದಿರಗಳಿಗೆ ಬಾರದ ಕಾರಣ ಸಿನಿಮಾ ರಿಲೀಸ್ ಮುಂದೂಡಲಾಗಿತ್ತು.

ದುನಿಯಾ ವಿಜಯ್ ನಿವಾಸಕ್ಕೆ ಭೇಟಿ ನೀಡಿದ್ದ ಸಂಸದ ತೇಜಸ್ವಿ ಸೂರ್ಯ

ಇದನ್ನೂ ಓದಿ: 'ಪೊಗರು' ವಿವಾದ...ಫಿಲ್ಮ್ ಚೇಂಬರ್​​​​​ಗೆ ತೆರಳಿ ಮನವಿ ಸಲ್ಲಿಸಿದ ಧ್ರುವ ಅಭಿಮಾನಿಗಳು

ಈಗಾಗಲೇ 'ಸಲಗ'ಸಿನಿಮಾ, ಟೀಸರ್ ಹಾಗೂ ಹಾಡುಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿದೆ. ವಿಜಯ್ ಅಭಿಮಾನಿಗಳು ಸಿನಿಮಾ ನೋಡಲು ಕಾಯುತ್ತಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೂಡಾ ಸಿನಿಮಾ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಷ್ಟೇ ತೇಜಸ್ವಿ ಸೂರ್ಯ, ತಮ್ಮ ನಿವಾಸದ ಸಮೀಪದಲ್ಲಿರುವ ದುನಿಯಾ ವಿಜಯ್ ಮನೆಗೆ ಭೇಟಿ ನೀಡಿದ್ದರು. 'ಸಲಗ' ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನು ಕೇಳಿರುವುದರ ಜೊತೆಗೆ ಟೀಸರ್​​​​​ ವೀಕ್ಷಿಸಿರುವ ತೇಜಸ್ವಿ ಸೂರ್ಯ, ಚಿತ್ರದ ಬಗ್ಗೆ ಕುತೂಹಲ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಿಜಯ್ ಅವರ ಚೊಚ್ಚಲ‌ ನಿರ್ದೇಶನಕ್ಕೆ ಶುಭವಾಗಲಿ ಎಂದು ಹಾರೈಸಿದ್ದಾರೆ. ಈ ಸಮಯದಲ್ಲಿ ನಿರ್ಮಾಪಕ ಕೆ.ಪಿ. ಶ್ರೀಕಾಂತ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ ಈ ಚಿತ್ರದಲ್ಲಿ ಡಾಲಿ ಧನಂಜಯ, ಸಂಜನಾ ಆನಂದ್ ಪ್ರಮುಖ‌ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.