2020ರ ಆರಂಭದಲ್ಲಿ ರಿಲೀಸ್ ಆದ ಲವ್ ಮಾಕ್ಟೈಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು. ಇದೀಗ ಡಾರ್ಲಿಂಗ್ ಕೃಷ್ಣ ಅಭಿನಯಿಸಿ, ನಿರ್ದೇಶನ ಮಾಡಿರುವ ಲವ್ ಮಾಕ್ಟೈಲ್-2 ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಕುತೂಹಲ ಹುಟ್ಟಿಸಿದೆ.
ಲವ್ ಮಾಕ್ಟೈಲ್ 1ರಲ್ಲಿ ನಿಧಿಮಾ ಪಾತ್ರ ಸಾಕಷ್ಟು ಸದ್ದು ಮಾಡಿತ್ತು. ಸಿನಿಮಾದಲ್ಲಿ ನಿಧಿಮಾ ಪಾತ್ರ ಮೃತಪಡುತ್ತೆ. ಲವ್ ಮಾಕ್ಟೈಲ್ 2ನಲ್ಲಿ ಈ ಪಾತ್ರ ಇರುವುದಿಲ್ಲ ಅಂತಾ ಚಿತ್ರತಂಡ ಹೇಳಿತ್ತು. ಆದರೂ ಲವ್ ಮಾಕ್ಟೈಲ್ 2 ಟ್ರೈಲರ್ನಲ್ಲಿ ನಿಧಿಮಾ ನೆನಪಲ್ಲಿ ಆದಿ ಪಾತ್ರ ಕಾಲ ಕಳೆಯುತ್ತೆ. ನಂತರ ಮತ್ತೊಂದು ಮದುವೆ ಆಗುವುದಕ್ಕೆ ತೀರ್ಮಾನ ಮಾಡುತ್ತಾರೆ. ಆಮೇಲೆ ಏನಾಗುತ್ತೆ? ಅನ್ನುವುದೇ ಕಥೆಯ ಜೀವಾಂಶ ಎಂಬುಂದು ಟ್ರೈಲರ್ನಲ್ಲೇ ತಿಳಿಯಲಿದೆ.
- " class="align-text-top noRightClick twitterSection" data="">
ಲವ್ ಮಾಕ್ಟೈಲ್2 ಸಿನಿಮಾ ಬಿಡುಗಡೆ ಆದ ಬಳಿಕ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಚಾರ್ಮ್ ಹೆಚ್ಚಿತು. ಈ ಸಿನಿಮಾ ಸಕ್ಸಸ್ ಬಳಿಕ ಈ ಸ್ಟಾರ್ ಜೋಡಿ ದಾಂಪತ್ಯ ಜೀವನಕ್ಕೂ ಕಾಲಿಟ್ಟು ಇದೇ ಫೆಬ್ರವರಿಗೆ ಒಂದು ವರ್ಷ ಆಗಲಿದೆ. ಇದೇ ಸಂತಸದಲ್ಲಿ ಲವ್ ಮಾಕ್ಟೈಲ್ -2 ಸಿನಿಮಾ ಪ್ರೇಮಿಗಳ ದಿನಕ್ಕೆ ಮೂರು ದಿನ ಮುಂಚಿತವಾಗಿ ರಿಲೀಸ್ ಮಾಡುವ ಪ್ಲಾನ್ನಲ್ಲಿ ಚಿತ್ರತಂಡ ಇದೆ.
ಇದನ್ನೂ ಓದಿ: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಕೆಜಿಎಫ್-2 ಚಿತ್ರತಂಡ ಭೇಟಿ: ವಿಶೇಷ ಪೂಜೆ ಸಲ್ಲಿಸಿದ ಯಶ್
ಚಿತ್ರದಲ್ಲಿ ಕ್ಯಾಮೆರಾ ವರ್ಕ್ ಸೊಗಸಾಗಿ ಮೂಡಿ ಬಂದಿದೆ. ರಾಘವೇಂದ್ರ ಕಾಮತ್ ಬರೆದಿರುವ ಸಾಹಿತ್ಯಕ್ಕೆ ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದಾರೆ. ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್, ಅಮೃತಾ ಅಯ್ಯಂಗಾರ್, ರಚನಾ ಇಂದರ್, ಸುಶ್ಮಿತಾ ಗೌಡ ಅಭಿನಯಿಸಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ