ಸ್ಯಾಂಡಲ್ವುಡ್ನ ಹಾಸ್ಯ ನಟ ಮೈಕಲ್ ಮಧು ನಿನ್ನೆ ಅನಾರೋಗ್ಯದಿಂದ ನಿಧರನಾರಾಗಿದ್ದು, ಸರ್ಕಾರದ ಆದೇಶದಂತೆ ಮೈಕಲ್ ಪಾರ್ಥೀವ ಶರೀರವನ್ನು ಕೊವೀಡ್ ಟೆಸ್ಟ್‌ಗೆ ಒಳಪಡಿಸಲಾಗಿದೆ. ಈಗಾಗಲೇ ಕಿಮ್ಸ್ನ ವೈದ್ಯರು ಕೋವಿಡ್ ಟೆಸ್ಟ್‌ಗೆ ಸ್ಯಾಂಪಲ್ ಕಳಿಸಲಾಗಿದ್ದು, ವರದಿ ಬಂದನಂತರವಷ್ಟೇ ಪಾರ್ಥಿವ ಶರೀರವನ್ನ ಕುಟುಂಬದವರಿಗೆ ಕಿಮ್ಸ್ ವೈದ್ಯರು ಹಸ್ತಾಂತರಿಸಲಿದ್ದಾರೆ.
ಸದ್ಯ ಮೃತದೇಹವು ಕಿಮ್ಸ್ ಶವಗಾರದಲ್ಲಿದ್ದು ಆಸ್ಪತ್ರೆಯ ಬಳಿ ಕುಟುಂಬದವರು ಕಾಯುತ್ತಿದ್ದಾರೆ. ಇನ್ನು ಮೈಕಲ್ ಮಧು ಅಂತ್ಯಕ್ರಿಯೆಯನ್ನು ಚಾಮರಾಜಪೇಟೆ ಸ್ಮಶಾನದಲ್ಲಿ ಮಾಡಲಾಗುವುದು ಎಂದು ಅವರ ಪತ್ನಿ ತಿಳಿಸಿದ್ದಾರೆ.
ಈಗಾಗಲೇ ಅಂತ್ಯ ಕ್ರಿಯೆಗೆ ಎಲ್ಲಾ ಸಿದ್ದತೆ ಮಾಡಿಕೊಂಡಿದ್ದು ಪಾರ್ಥಿವ ಶರೀರಕ್ಕಾಗಿ ಕುಟುಂಬದವರು ಕಾಯುತ್ತಿದ್ದಾರೆ. ಅಲ್ಲದೆ ಈಗಾಗಲೇ ಚಿತ್ರರಂಗದ ಗಣ್ಯರು ಮೈಕಲ್ ಮಧು ಪತ್ನಿ ಕವಿತಾ ಅವರಿಗೆ ಕಾಲ್ ಮಾಡಿ ಸಂತಾಪ ಸೂಚಿಸಿದ್ದಾರೆ. ಇನ್ನು ಕೊವೀಡ್ ಟೆಸ್ಟ್ ವರದಿ ಸಾಯಂಕಾಲ ಬರಯವ ಸಾಧ್ಯತೆ ಇದೆ. ಒಂದು ವೇಳೆ ವರದಿ ಬರಯವುದು ತಡವಾದರೆ ನಾಳೆ ಮೈಕಲ್ ಮಧು ಅಂತ್ಯಕ್ರಿಯೆ ಮಾಡಲಾಗುವುದು.
ಚಿತ್ರರಂಗದಲ್ಲಿ ಅವಕಾಶ ಇಲ್ಲದೆ ಡಿಪ್ರೆಶನ್ಗೆ ಹೋಗಿದ್ದ ಹಾಸ್ಯನಟನ ಆರೋಗ್ಯ ಹದಗೆಟ್ಟಿತ್ತು. ಮೈಕಲ್ ಮಧುಗೆ ಒಬ್ಬಳು ಮಗಳಿದ್ದು, ಈಗ ಕುಟುಂಬದ ಜವಾಬ್ದಾರಿ ಅವರ ಪತ್ನಿ ಹೆಗಲೇರಿದೆ. ಸದ್ಯ ಕುಟುಂಬದವರು ಚಿತ್ರರಂಗದ ನೆರವಿನ ನಿರೀಕ್ಷೆಯಲ್ಲಿದ್ದಾರೆ.