ಮಲಯಾಳಂ ನಟ ಇಂದ್ರಜಿತ್ ಸುಕುಮಾರನ್ ಅವರು ತಮ್ಮ ನಿವಾಸಕ್ಕೆ ಇತ್ತೀಚಿಗೆ ಭೇಟಿ ನೀಡಿದ್ದ ಬಗ್ಗೆ ನಟಿ ಮೇಘನಾ ರಾಜ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಬರೆದು ಕೊಂಡಿದ್ದಾರೆ.
ಪ್ರೀತಿಯಿಂದ ಅವರನ್ನು ಇಂದ್ರು ಎಂದು ಕರೆಯುವ ಮೇಘನಾ ಅವರು ಕೆಲವು ದಿನಗಳ ಹಿಂದೆ ಅವರನ್ನು ಭೇಟಿಯಾಗಿದ್ದು, ಇದೀಗ ಅವರೊಂದಿಗಿನ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಜೂನಿಯರ್ ಚಿರು ಇಂದ್ರಜಿತ್ ಅವರ ಜೊತೆ ಸಕತ್ ಎಂಜಾಯ್ ಮಾಡಿದ ಎಂದು ಮೇಘನಾ ತಮ್ಮ ಹಾಗೂ ಇಂದ್ರಜಿತ್ ಅವರ ಹಲವು ವರ್ಷಗಳ ಸ್ನೇಹದ ಬಗ್ಗೆ ಹಂಚಿಕೊಂಡಿದ್ದಾರೆ.
ಇಂದ್ರಜಿತ್ ಸುಕುಮಾರನ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿರುವ ತನ್ನ ಸ್ನೇಹಿತೆ ಮೇಘನಾ ಅವರ ಮನೆಗೆ ಭೇಟಿ ನೀಡಿದ್ದರು. ಅವರು ಮೇಘನಾ ಅವರ ಕುಟುಂಬದೊಂದಿಗೆ ಊಟ ಮಾಡಿದರು ಮತ್ತು ಅವರೊಂದಿಗೆ, ಅವರ ಮಗ ಜೂನಿಯರ್ ಚಿರು ಮತ್ತು ಅವರ ಪೋಷಕರಾದ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಜೊತೆಗೆ ಒಂದಿಷ್ಟು ಸಂತಸದ ಕ್ಷಣಗಳನ್ನ ಕಳೆದರು.
ಇಂದ್ರಜಿತ್ ಜೊತೆಗಿನ ಫೋಟೋಗಳನ್ನು ಮೇಘನಾ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದು, ಶೀಘ್ರದಲ್ಲೇ ಇಂದ್ರಜಿತ್ ಅವರ ಪತ್ನಿ ಪೂರ್ಣಿಮಾ ಅವರನ್ನು ನೋಡಲು ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಬಿರಿಯಾನಿ ಮತ್ತು ಜೂನಿಯರ್ ಚಿರು ಕಂಪನಿಯನ್ನು ನೀವು ಆನಂದಿಸಿದ್ದೀರಿ ಎಂದು ಭಾವಿಸುತ್ತೇವೆ ಅಂತಾ ಮೇಘನಾ ಇನ್ಸ್ಟಾದಲ್ಲಿ ಬರೆದುಕೊಂಡಿದ್ದಾರೆ.
ಮೇಘನಾ ರಾಜ್ ತನ್ನ ಮಗನನ್ನು ಚಿಂಟು, ಜೂನಿಯರ್ ಚಿರು, ಬೇಬಿ ಸಿ ಮತ್ತು ಸಿಂಬಾ ಎಂಬೆಲ್ಲಾ ಹೆಸರುಗಳಿಂದ ಕರೆಯುತ್ತಾರೆ.