ETV Bharat / sitara

ಇಂದ್ರಜಿತ್ ಲಂಕೇಶ್​ ಕ್ಷಮೆಯಾಚಿಸಲಿ ಎಂದ ಮೇಘನಾ ರಾಜ್ - ಎನ್ ಎಂ ಸುರೇಶ್

ಚಿರಂಜೀವಿ ಸರ್ಜಾ ಮೃತದೇಹವನ್ನ ಯಾಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಿಲ್ಲ ಎಂಬ ಹೇಳಿಕೆ ನೀಡಿರುವ ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಕ್ಷಮೆ ಕೇಳಲಿ ಎಂದು ಆಗ್ರಹಿಸಿ ಮೇಘನಾ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದಿದ್ದಾರೆ.

Meghana Raj demands apology from Indrajit Lankesh
ಇಂದ್ರಜಿತ್ ಲಂಕೇಶ್​ ಕ್ಷಮೆ ಯಾಚಿಸಲಿ ಎಂದ ಮೇಘನಾ ರಾಜ್
author img

By

Published : Sep 5, 2020, 4:42 PM IST

ಬೆಂಗಳೂರು: ಡ್ರಗ್ಸ್ ಮಾಫಿಯಾ ವಿರುದ್ಧ ಧ್ವನಿ ಎತ್ತುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿರುವ ನಿರ್ದೇಶಕ ಇಂದ್ರಜಿತ್ ಲಂಕೇಶ್ ವಿರುದ್ಧ ನಟಿ ಮೇಘನಾ ರಾಜ್ ಅಸಮಾಧಾನಗೊಂಡಿದ್ದಾರೆ.

ಮಾಧ್ಯಮಗಳೊಂದಿಗೆ ಎನ್ ಎಂ ಸುರೇಶ್

ಚಿರಂಜೀವಿ ಸರ್ಜಾ ಮೃತದೇಹವನ್ನ ಯಾಕೆ ಮರಣೋತ್ತರ ಪರೀಕ್ಷೆಗೆ ಕಳುಹಿಸಲಿಲ್ಲ ಎಂಬ ಹೇಳಿಕೆ ನೀಡಿದ್ದ ಇಂದ್ರಜಿತ್ ಲಂಕೇಶ್ ವಿರುದ್ಧ ಇದೀಗ ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರವೊಂದನ್ನ ಬರೆದಿದ್ದಾರೆ.

ಈ ಸಂಬಂಧ ಮಾಧ್ಯಮಗಳೊಂದಿಗೆ ಮಾಹಿತಿ ಹಂಚಿಕೊಂಡ ಫಿಲ್ಮ್ ಚೇಂಬರ್ ಗೌರವ ಕಾರ್ಯದರ್ಶಿ ಎನ್ ಎಂ ಸುರೇಶ್, "ನನ್ನ ಪತಿ ತೀರಿಕೊಂಡು ಮೂರು ತಿಂಗಳು ಆಗಲಿಲ್ಲ. ನಮ್ಮ ಕುಟುಂಬ ಆ ನೋವಿನಿಂದ ಹೊರ ಬರುವ ಮುನ್ನವೇ ಪತಿಯ ಮೇಲೆ ಇಲ್ಲ ಸಲ್ಲದ, ಆಧಾರ ರಹಿತ ಆರೋಪ ಮಾಡಲಾಗುತ್ತಿದೆ‌. ಇಂದ್ರಜಿತ್ ಲಂಕೇಶ್ ಅವರ ಹೇಳಿಕೆಯಿಂದ ನೋವಾಗಿದೆ. ಗರ್ಭವತಿ ಆಗಿರುವ ನಾನು ಮಾನಸಿಕವಾಗಿ ಕುಗ್ಗಿದ್ದೇನೆ. ಇಂದ್ರಜಿತ್ ಲಂಕೇಶ್ ಸಾರ್ವಜನಿಕವಾಗಿ ಕ್ಷಮೆ ಕೇಳಲಿ" ಎಂದು ಪತ್ರದಲ್ಲಿ ಮೇಘನಾ ಆಗ್ರಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.