ETV Bharat / sitara

ಮತ್ತೆ ಧಾರಾವಾಹಿ ಕಡೆ ಮುಖ ಮಾಡಿದ ಮಾಸ್ಟರ್​​ ಆನಂದ್​​

author img

By

Published : Dec 6, 2020, 6:36 PM IST

ಕಾಮಿಡಿ ಕಿಲಾಡಿಗಳು, ಡ್ರಾಮ ಜೂನಿಯರ್ಸ್‌ ಸೇರಿದಂತೆ ಕೆಲವು ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿರುವ ಆನಂದ್,​​ ಇದೀಗ ಧಾರಾವಾಹಿಯೊಂದರ ನಿರ್ದೇಶನಕ್ಕೆ ಇಳಿದಿದ್ದಾರೆ. ಈ ಬಗ್ಗೆ ಸ್ವತಃ ಮಾಸ್ಟರ್​​ ಆನಂದ್​​ ಮಾಹಿತಿ ನೀಡಿದ್ದಾರೆ.

master anand directing new serial
ಮತ್ತೆ ಧಾರಾವಾಹಿ ಕಡೆ ಬಂದ ಮಸ್ಟರ್​​ ಆನಂದ್​​

ನಟ, ನಿರ್ದೇಶಕ ಹಾಗು ನಿರೂಪಕನಾಗಿರುವ ಮಾಸ್ಟರ್ ಆನಂದ್ ಮತ್ತೆ ಧಾರಾವಾಹಿ ನಿರ್ದೇಶನದ ಕಡೆ ಹೊರಟಿದ್ದಾರೆ. ಹಲವು ಸಿನಿಮಾಗಳಲ್ಲಿ ನಟನಾಗಿ ಅದಕ್ಕೂ ಮುಂಚೆ ಬಾಲನಟನಾಗಿ ಬಣ್ಣ ಹಚ್ಚಿದ್ದ ಆನಂದ್ ನಿರ್ದೇಶನ ಕೂಡ ಮಾಡಿದ್ದಾರೆ.

ಕಾಮಿಡಿ ಕಿಲಾಡಿಗಳು, ಡ್ರಾಮ ಜೂನಿಯರ್ಸ್‌​​ ಸೇರಿದಂತೆ ಕೆಲವು ರಿಯಾಲಿಟಿ ಶೋಗಳ ನಿರೂಪಕರಾಗಿಯೂ ಕೆಲಸ ಮಾಡಿರುವ ಇವರು​​ ಇದೀಗ ಧಾರಾವಾಹಿಯೊಂದರ ನಿರ್ದೇಶನಕ್ಕೆ ಇಳಿದಿದ್ದಾರೆ.

ಸೋಷಿಯಲ್​ ಮೀಡಿಯಾದಲ್ಲಿ ಈ ಬಗ್ಗೆ ವಿಚಾರ ಹಂಚಿಕೊಂಡಿರುವ ಆನಂದ್‌, ಧಾರಾವಾಹಿಗೆ ಬೇಕಾಗಿರುವ ನಟ, ನಟಿಯರಿಗೆ ಆಡಿಶನ್​​ ನಡೆಸುವುದಾಗಿ ತಿಳಿಸಿದ್ದಾರೆ. ಆಡಿಷನ್ ಕರೆಯುವ ಜೊತೆಗೆ ಒಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಆಡಿಷನ್‌ನಲ್ಲಿ ತುಂಬಾ ಮೋಸವಾಗುತ್ತೆ, ಮಾಸ್ಟರ್ ಆನಂದ್ ಧಾರಾವಾಹಿಗೆ ಕಲಾವಿದರು ಬೇಕು ಎಂದು ಹೇಳಿ ಹಣ ಕೇಳಿ ಮೋಸ ಮಾಡುತ್ತಾರೆ. ಹಾಗಾಗಿ ನೇರವಾಗಿ ನಾನೇ ವಿಡಿಯೋ ಮೂಲಕ ಹೇಳುತ್ತಿರುವೆ ಎಂದಿದ್ದಾರೆ.

ಆನಂದ್​ ನಿರ್ದೇಶನ ಮಾಡುತ್ತಿರುವ ಧಾರಾವಾಹಿ ಯಾವುದು, ಅದರ ಕಥೆ ಏನು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.