ನಂದಿನಿ ಧಾರಾವಾಹಿಯಲ್ಲಿ ದೇವಸೇನಾ ಆಗಿ ನಟಿಸುತ್ತಿರುವ ಕೊಡಗಿನ ಸುಂದರಿ ಅನು ಪೂವಮ್ಮ ಕ್ರಿಕೆಟರ್ ಅಯ್ಯಪ್ಪ ಅವರೊಂದಿಗೆ ಜನವರಿ 20ರಂದು ಹಸೆಮಣೆ ಏರಿದರು.
ಅಗ್ನಿಸಾಕ್ಷಿ ಧಾರಾವಾಹಿಯ ಸಿದ್ಧಾರ್ಥ್ ಆಗಿ ನೂರಾರು ಪ್ರೇಕ್ಷಕರ ಮನದಲ್ಲಿ ಕಾಯಂ ಸ್ಥಾನ ಪಡೆದ ಗುಳಿಕೆನ್ನೆಯ ಚೆಲುವ ವಿಜಯ್ ಸೂರ್ಯ ಚೈತ್ರಾ ಅವರ ಜೊತೆ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಸದ್ಯ ವಿಜಯ್ ಪ್ರೇಮಲೋಕ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ರಾಜ್ ಗುರು ಕುಟುಂಬದ ಹಿರಿ ಮಗ ಸಾಕೇತ್ ಆಗಿ ನಟಿಸುತ್ತಿರುವ ರಘು ಮತ್ತು ಕುಲವಧು ಧಾರಾವಾಹಿಯ ವಚನಾ ಖ್ಯಾತಿಯ ಅಮೃತಾ ರಾಮಮೂರ್ತಿ ಮೇ ತಿಂಗಳಿನಲ್ಲಿ ವಿವಾಹವಾಗಿದ್ದಾರೆ.
ಪುಟ್ಟಗೌರಿ ಮದುವೆಯ ಮಹೇಶ ಎಂದೇ ಜನಪ್ರಿಯವಾಗಿರುವ ರಕ್ಷ್ ತಮ್ಮ ಗೆಳತಿ ಅನುಷಾ ಜೊತೆ ಹಸೆಮಣೆ ಏರಿದ್ದಾರೆ. ಇದೀಗ ಗಟ್ಟಿ ಮೇಳದ ವೇದಾಂತ್ ಆಗಿ ನಟಿಸುವುದರಲ್ಲಿ ರಕ್ಷ್ ಬ್ಯುಸಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರ್ವ ಮಂಗಳ ಮಾಂಗಲ್ಯೇ ಧಾರಾವಾಹಿಯಲ್ಲಿ ನಾಯಕಿ ಪಾರ್ವತಿ ಆಗಿ ಗಮನ ಸೆಳೆಯುತ್ತಿರುವ ಮುದ್ದು ಮುಖದ ಚೆಲುವೆ ಐಶ್ವರ್ಯಾ ಪಿಸ್ಸೆ ಹರಿ ವಿನಯ್ ಅವರೊದಿಗೆ ಸಪ್ತಪದಿ ತುಳಿದಿದ್ದಾರೆ.
ಕುಲವಧು ಧಾರಾವಾಹಿಯಲ್ಲಿ ಹಿರಿಸೊಸೆ ಧನ್ಯಾಳಾಗಿ ಮನೆ ಮಾತಾಗಿದ್ದ ದೀಪಿಕಾ ಅದೇ ಧಾರಾವಾಹಿಯಲ್ಲಿ ಶರತ್ ಪಾತ್ರಕ್ಕೆ ಜೀವ ತುಂಬುತ್ತಿದ್ದ ಆಕರ್ಶ್ ಅವರೊಂದಿಗೆ ದಾಂಪತ್ಯ ಜೀವನ ಆರಂಭಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೀತಾ ವಲ್ಲಭ ಧಾರಾವಾಹಿಯಲ್ಲಿ ನಾಯಕ ಆರ್ಯ ವಲ್ಲಭ ಆಗಿ ನಟಿಸುತ್ತಿರುವ ಜಗನ್ ತಮ್ಮ ಬಹು ಕಾಲದ ಗೆಳತಿ, ಫ್ಯಾಷನ್ ಡಿಸೈನರ್ ರಕ್ಷಿತ ಮುನಿಯಪ್ಪ ಅವರನ್ನು ವಿವಾಹವಾಗಿದ್ದಾರೆ.
ಸುಬ್ಬಲಕ್ಷ್ಮಿ ಸಂಸಾರದಲ್ಲಿ ನಾಯಕ ಗುರುಮೂರ್ತಿ ಆಗಿ ಕಾಣಿಸಿಕೊಂಡಿದ್ದ ಭವಾನಿ ಸಿಂಗ್ ನಟಿ ಪಂಕಜಾ ಶಿವಣ್ಣ ಅವರನ್ನು ವರಿಸಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿಯ ಮಾಯಾ ಪಾತ್ರಧಾರಿ ಇಶಿತಾ ವರ್ಷ ಅವರು ಕೊರಿಯೋಗ್ರಫರ್ ಮುರುಗನ್ ಅವರೊಂದಿಗೆ ವೈವಾಹಿಕ ಜೀವನ ಆರಂಭಿಸಿದ್ದಾರೆ.
ಉದಯ ವಾಹಿನಿಯ ನಂದಿನಿ ಧಾರಾವಾಹಿಯ ಜನನಿ ಆಗಿ ಮನೆ ಮಾತಾಗಿದ್ದ ನಿತ್ಯಾ ರಾಮ್ ಗೌತಮ್ ಅವರೊಂದಿಗೆ ಹಸೆಮಣೆ ಏರಿದ್ದಾರೆ.
ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋನಲ್ಲಿ ನವಿರಾದ ಹಾಸ್ಯದ ಮೂಲಕ ಪ್ರೇಕ್ಷಕರ ಮನ ಸೆಳೆಯುತ್ತಿದ್ದ ದಿವ್ಯಾ ಮತ್ತು ಗೋವಿಂದೇಗೌಡ ಈ ವರ್ಷ ಮದುವೆಯಾಗಿದ್ದಾರೆ.
ಮರಳಿ ಬಂದಳು ಸೀತೆ ಧಾರಾವಾಹಿಯಲ್ಲಿ ಪೋಲೀಸ್ ಅಧಿಕಾರಿ ಅಲೋಕ್ ಕುಮಾರ್ ಆಗಿ ಅಭಿನಯಿಸುತ್ತಿರುವ ಮಧು ಹೆಗಡೆ ಸಕಲೇಶಪುರದ ನಮ್ರತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ಮಗಳು ಜಾನಕಿ ಧಾರಾವಾಹಿಯಲ್ಲಿ ಜಾನಕಿ ತಂಗಿ ಚಂಚಲಾ ಆಗಿ ನಟಿಸುತ್ತಿರುವ ಪೂಜಾ ಬಾರಿತ್ತಾಯ ರಂಜಿತ್ ಕೇಕುನ್ನಾಯ ಅವರೊಂದಿಗೆ ಇತ್ತೀಚೆಗಷ್ಟೇ ಹಸೆಮಣೆ ಏರಿದ್ದಾರೆ.