ETV Bharat / sitara

ತಮಿಳು, ಹಿಂದಿಗೆ ‘ಮಹರ್ಷಿ‘ ರೀಮೇಕ್​: ಹಿಂದಿಯಲ್ಲಿ ಸಲ್ಲುಭಾಯ್​​​​​​​​​​​​​​​​​​​​​​​​​ ‘ರಿಷಿ‘ ಆಗುವ ಸಾಧ್ಯತೆ - undefined

ಮೇ 9 ರಂದು ಬಿಡುಗಡೆಯಾದ ಮಹೇಶ್ ಬಾಬು ಅಭಿನಯದ ‘ಮಹರ್ಷಿ‘ ಬಾಕ್ಸ್​​​ ಆಫೀಸಿನಲ್ಲಿ ದೊಡ್ಡ ವಿಜಯವನ್ನೇ ಸಾಧಿಸಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸೂಪರ್ ಹಿಟ್ ಸಿನಿಮಾ ಮಹೇಶ್ ಬಾಬು ಅಭಿನಯದ 25 ನೇ ಚಿತ್ರ.

ಮಹೇಶ್​ ಬಾಬು, ಸಲ್ಮಾನ್ ಖಾನ್
author img

By

Published : May 19, 2019, 3:22 PM IST

ಮಹೇಶ್ ಬಾಬು ಅಭಿನಯದ ‘ಮಹರ್ಷಿ‘ ಸಿನಿಮಾವನ್ನು ಇತರ ಭಾಷೆಗಳಲ್ಲೂ ರೀಮೇಕ್ ಮಾಡಲು ಡಿಮ್ಯಾಂಡ್ ಬಂದಿದೆಯಂತೆ. ಈಗಾಗಲೇ ತಮಿಳು ಫಿಲಮ್​​​ ಮೇಕರ್​​​​​ಗಳು ‘ಮಹರ್ಷಿ‘ ರೀಮೇಕ್ ಹಕ್ಕನ್ನು ಪಡೆದಿದ್ದು ಚಿತ್ರದ ಕೆಲಸಗಳು ಆರಂಭವಾಗಿ ವಿಜಯ್ ಈ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಇದರೊಂದಿಗೆ ಬಾಲಿವುಡ್​​ನಲ್ಲಿ ಕೂಡಾ ಈ ಸಿನಿಮಾ ರೀಮೇಕ್ ಮಾಡಲು ಎಲ್ಲಾ ಸಿದ್ಧತೆಗಳು ಆರಂಭವಾಗಿದೆ ಎನ್ನಲಾಗಿದೆ. ಸಲ್ಮಾನ್ ಖಾನ್ ಮಹೇಶ್​ ಬಾಬು ಪಾತ್ರವನ್ನು ಮಾಡಬೇಕು ಎಂಬುದು ಚಿತ್ರ ನಿರ್ಮಾಪಕರ ಆಸೆಯಾಗಿದ್ದು ಅವರಿಗೆ ಚಿತ್ರವನ್ನು ತೋರಿಸಲು ಪ್ರತ್ಯೇಕ ಪ್ರದರ್ಶನವೊಂದನ್ನು ಏರ್ಪಡಿಸಲಾಗಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಚಿತ್ರವನ್ನು ನೋಡಿ ಸಲ್ಮಾನ್ ಮೆಚ್ಚಿದರೆ ಆದಷ್ಟು ಬೇಗ ರಿಮೇಕ್ ಕೆಲಸಗಳು ಆರಂಭವಾಗಲಿವೆ ಎನ್ನಲಾಗಿದೆ.

ಕೆಲವು ವರ್ಷಗಳ ಹಿಂದೆ ಸಲ್ಮಾನ್ ಕೆರಿಯರ್​​ನಲ್ಲಿ ಸಾಲು ಸಾಲು ಚಿತ್ರಗಳು ಸೋಲುವ ಪರಿಸ್ಥಿತಿ ಎದುರಾದಾಗ ಮಹೇಶ್ ಬಾಬು ಅಭಿನಯದ ‘ಪೋಕರಿ‘ ಹಿಂದಿ ರೀಮೇಕ್ ‘ವಾಂಟೆಡ್​​​​​​​‘ನಲ್ಲಿ ಸಲ್ಲು ನಟಿಸಿದ್ದರು. ಆ ಸಿನಿಮಾ ಸಲ್ಮಾನ್​​​ಗೆ ಬ್ರೇಕ್ ನೀಡಿತ್ತು. ಇದೀಗ ‘ಮಹರ್ಷಿ‘ ರೀಮೇಕ್​​​​​​ಗೆ ಕೂಡಾ ಸಲ್ಮಾನ್ ಗ್ರೀನ್ ಸಿಗ್ನಲ್ ನೀಡುವ ಸಂಭವವಿದೆ ಎನ್ನಲಾಗುತ್ತಿದೆ.

Intro:Body:

maharshi remake

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.