ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಅಭಿನಯದ 'ಲವ್ ಮಾಕ್ಟೈಲ್' ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಆರಂಭದಲ್ಲಿ ಜನರು ಅಷ್ಟಾಗಿ ಥಿಯೇಟರ್ಗೆ ಹೋಗದಿರುವವರು ನಂತರ ಸಿನಿಮಾ ನೋಡಲು ಆಸಕ್ತಿ ತೋರಲಾರಂಭಿಸಿದ್ದಾರೆ. ಮೊನ್ನೆ ಮೊನ್ನೆಯವರೆಗೂ 'ಲವ್ ಮಾಕ್ಟೈಲ್' ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿತ್ತು. ಸದ್ಯಕ್ಕೆ ಥಿಯೇಟರ್ಗಳು ಬಂದ್ ಆಗಿದೆ.

ಆಸಕ್ತಿಕರ ವಿಚಾರವೆಂದರೆ ಕೃಷ್ಣ ಹಾಗೂ ಮಿಲನ ಮದುವೆ ಆಗುವುದಕ್ಕೆ ಮುನ್ನ 'ಲವ್ ಮಾಕ್ಟೈಲ್' ಭಾಗ ಎರಡು ತಯಾರಾಗಲಿದೆ ಎಂಬ ಮಾತು ಕೇಳಿಬರುತ್ತಿದೆ. 45 ದಿನಗಲ ಕಾಲ ಪ್ರದರ್ಶನ ಕಂಡಿರುವ 'ಲವ್ ಮಾಕ್ಟೈಲ್' ಚಿತ್ರವನ್ನು ಡಾರ್ಲಿಂಗ್ ಕೃಷ್ಣ ಮೊದಲ ಬಾರಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಮಿಲನ ನಾಗರಾಜ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ನಿಧಿ ಪಾತ್ರದಲ್ಲಿ ಮಿಲನ್ ನಾಗರಾಜ್ ಬಹಳ ಚೆನ್ನಾಗಿ ಅಭಿನಯಿಸಿದ್ದಾರೆ. ಈಗ ಲವ್ ಮಾಕ್ಟೈಲ್ 2 ಆರಂಭಿಸುವುದು ಖಚಿತ ಎನ್ನಲಾಗಿದೆ. ಆದರೆ ಕೃಷ್ಣ ಅವರ ಬಳಿ ಬಂದು ಕಥೆ ಹೇಳುವವರು, ನಮಗೊಂದು ಸಿನಿಮಾ ನಿರ್ದೇಶನ ಮಾಡಿಕೊಡಿ ಎಂದು ಕೇಳುವ ನಿರ್ಮಾಪಕರು ಹೆಚ್ಚಾಗಿದ್ದಾರಂತೆ. ಒಟ್ಟಿನಲ್ಲಿ ಈ ಸೂಪರ್ ಜೋಡಿ ನಿಜ ಜೀವನದ ಮದುವೆಗೂ ಮುನ್ನ 'ಲವ್ ಮಾಕ್ಟೈಲ್' ಸಿಕ್ವೆಲ್ ಬರುವುದು ಪಕ್ಕಾ ಎನ್ನಲಾಗುತ್ತಿದೆ.
