ಸದ್ಯಕ್ಕೆ ಎಲ್ಲಾ ಕಡೆ ಐಪಿಎಲ್ ಫೀವರ್ ಜೋರಾಗಿದೆ. ಇದರ ನಡುವೆಯೂ ಈ ವಾರ ಗಾಂಧಿನಗರದಲ್ಲಿ ಸಿನಿಮಾಗಳ ಸುಗ್ಗಿ. ಈ ವಾರ ಬಿಗ್ಬಾಸ್ ಖ್ಯಾತಿಯ ಶೃತಿ ಪ್ರಕಾಶ್ ಅಭಿನಯದ 'Londonalli ಲಂಬೋದರ' ಸೇರಿ 9 ಕನ್ನಡ ಸಿನಿಮಾಗಳು ತೆರೆ ಕಾಣುತ್ತಿವೆ.
ಈಗಾಗಲೇ ಈ ಸಿನಿಮಾ ಪೋಸ್ಟರ್ಗಳು ಹಾಗೂ ಟ್ರೇಲರ್ ಭಾರೀ ಕುತೂಹಲ ಹುಟ್ಟಿಸಿವೆ. ಸುಮಾರು 100ಕ್ಕೂ ಹೆಚ್ಚು ಥಿಯೇಟರ್ಗಳಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ರಾಜ್ ಸೂರ್ಯ ಈ ಚಿತ್ರವನ್ನು ನಿರ್ದೇಶಿಸಿದ್ದು ಮೈಸೂರು ಮೂಲದ ಲಂಡನ್ ವಾಸಿ ಸಂತೋಷ್ ಎಂಬುವವರು ಲಂಬೋದರನ ಅವತಾರದಲ್ಲಿ ಕಾಣಿಸಿದ್ದಾರೆ. ರಶ್ಮಿ ಎಂಬ ಪಾತ್ರದಲ್ಲಿ ಶೃತಿ ಪ್ರಕಾಶ್ ಕಾಣಿಸಿಕೊಂಡಿದ್ದಾರೆ.
ಇಬ್ಬರಿಗೂ ಇದು ಮೊದಲ ಸಿನಿಮಾವಾಗಿದ್ದು ಅದೃಷ್ಟ ಪರೀಕ್ಷೆಗೆ ಸಿದ್ಧರಾಗಿದ್ದಾರೆ. ಈ ಚಿತ್ರವನ್ನು ಲಂಡನ್ ಸ್ಕ್ರೀನ್ ಬ್ಯಾನರ್ ಅಡಿ ಲಂಡನಿನಲ್ಲಿ ವಾಸವಿರುವ 20 ಭಾರತೀಯರು ನಿರ್ಮಿಸಿದ್ದಾರೆ. ಈ ಸಿನಿಮಾ ಈಗಾಗಲೇ ಲಂಡನಿನಲ್ಲಿ ಸ್ಕ್ರೀನಿಂಗ್ ಆಗಿದ್ದು ಸಿನಿಮಾ ನೋಡಿದವರು ಲಂಬೋದರನ ಕಾಮಿಡಿ ಪಂಚ್ಗೆ ಫಿದಾ ಆಗಿದ್ದಾರೆ. 29 ರಂದು ಲಂಬೋದರ ಗಾಂಧಿನಗರಕ್ಕೆ ಬರುತಿದ್ದು ಜನರು ಹೇಗೆ ವೆಲ್ಕಮ್ ಮಾಡುತ್ತಾರೋ ಕಾದು ನೋಡಬೇಕು.