ಕನ್ನಡದ ಬಿಗ್- ಇಷ್ಟು ದಿನ ಬಿಗ್ ಬಾಸ್ ಮನೆಗೆ ಯಾರೆಲ್ಲ ಹೊಗ್ತಾರೆ ಎಂದು ಕಾದು ಕುಳಿತಿದ್ದ ಜನರಿಗೆ ಕೊನೆಯದಾಗಿ ಇಂದು ಕುತೂಹಲ ತಣಿದಿದೆ. ಕಿಚ್ಚ ಸುದೀಪ್ ಬಿಗ್ ಬಾಸ್ ಸೆಟ್ಗೆ ಎಂಟ್ರಿ ಕೊಟ್ಟು ನೀನೆ ರಾಮ ನೀನೆ ಶಾಮ ಎಂಬ ಹಾಡು ಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತ್ರ ಬಿಗ್ ಬಾಸ್ ಮನೆಗೆ ಹೋಗೋ ಸ್ಪರ್ಧಿಗಳನ್ನು ಒಬ್ಬಬ್ಬರನ್ನಾಗಿಯೇ ಸ್ವಾಗತಿಸಿ ಬಿಗ್ ಬಾಸ್ ಮನೆಗೆ ಬೀಳ್ಕೊಟ್ಟರು.
ಮನೆಗೆ ಹೊದವರು ಯಾರ್ಯಾರು :
ಕುರಿ ಪ್ರತಾಪ್
ಮೊದಲ ಸ್ಪರ್ಧಿಯಾಗಿ ಬಿಗ್ ಮನೆ ಪ್ರವೇಶ ಮಾಡಿದ ಕುರಿ ಪ್ರತಾಪ್ ಗೆ ಮೊದಲ ದಿನವೇ ಬಿಗ್ ಬಾಸ್ ವಿಶೇಷ ಟಾಸ್ಕ್ ನೀಡಿದರು. ನಿಮಗೆ ಒಗಟುಗಳು ಗೊತ್ತೆ ಎಂದು ಕುರಿ ಪ್ರತಾಪ್ ಅವರನ್ನು ಬಿಗ್ ಬಾಸ್ ಪ್ರಶ್ನೆ ಮಾಡಿದಾಗ ಕುರಿ ಪ್ರತಾಪ್ ಕೈ ಕೆಸರಾದರೆ ಬಾಯಿ ಮೊಸರು ಎಂದು ಗಾದೆ ಮಾತು ಹೇಳಿದರು. ಅದು ತಪ್ಪು ಆಗಿರುವುದರಿಂದ ಪ್ರತಾಪರನ್ನು ಬಿಗ್ ಬಾಸ್ ಸರಿ ಮಾಡಿದರು. ಮಾತ್ರವಲ್ಲ ಅದು ಗಾದೆ ಮಾತು ಒಗಟುಗಳು ಎಂದರೆ ಬೇರೆ ಎಂದು ತಿಳಿಸಿದರು.
ಮುಂದೆ ‘ಸುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ’ ಈ ಒಗಟನ್ನು ಮತ್ತೊಬ್ಬ ಸ್ಪರ್ಧಿ ಬಳಿ ಕೇಳಿ ಉತ್ತರ ಪಡೆದುಕೊಳ್ಳಬೇಕು. ಆದರೆ ಕನ್ನಡದಲ್ಲಿ ಕೇಳುವ ಹಾಗಿಲ್ಲ.. ಇಂಗ್ಲಿಷ್ ನಲ್ಲಿಯೇ ಕೇಳಬೇಕು ಎಂದು ಷರತ್ತು ವಿಧಿಸಿ ಕಳುಹಿಸಿದರು. ‘ಹಿಡಿದರೆ ಹಿಡಿಯಷ್ಟು, ಬಿಟ್ಟರೆ ಮನೆ ತುಂಬಾ’ ಎಂಬ ಎರಡನೇ ಒಗಟನ್ನು ಮೊದಲನೆ ಒಗಟಿಗೆ ಉತ್ತರ ಬಂದ ನಂತರ ಕೇಳಬೇಕು ಎಂದು ತಿಳಿಸಿ ಕಳಿಸಿದರು.
ಪ್ರಿಯಾಂಕ
ನಂತರ, ಎರಡನೇ ಸ್ಪರ್ಧಿಯಾಗಿ ಕಿರಿತೆರೆಯ ಬ್ಯೂಟಿಫುಲ್ ವಿಲನ್ ಎಂದೇ ಜನಪ್ರಿಯವಾಗಿರುವ, ಅಗ್ನಿಸಾಕ್ಷಿ ಧಾರಾವಾಹಿಯ ಚಂದ್ರಿಕಾ ಪಾತ್ರಧಾರಿ ಪ್ರಿಯಾಂಕ ಬಿಗ್ ಬಾಸ್ ಮನೆಗೆ ಕಾಲಿಟ್ಟರು. ಈ ಮೊದಲು ಚಂದ್ರಿಕಾ ಅವರ ಹೆಸರು ಎಲ್ಲಿಯೂ ಕೇಳಿ ಬರದ ಕಾರಣ ವೀಕ್ಷಕರಿಗೆ ಕೊಂಚ ಅಚ್ಚರಿಯಾಗಿದ್ದು ನಿಜ. ಅಗ್ನಿಸಾಕ್ಷಿಯ ಸನ್ನಿಧಿ ಪ್ರಿಯಾಂಕಾ ಅವರನ್ನು ಅದ್ಧೂರಿಯಾಗಿ ವೇದಿಕೆಗೆ ಕರೆತಂದರು. ನಂತರ ಸುದೀಪ್ ಪ್ರಿಯಾಂಕ ಅವರ ತಾಯಿ ಹಾಗೂ ಫ್ಯಾಮಿಲಿ ಫ್ರೆಂಡ್ ಒಬ್ಬರನ್ನು ಪರಿಚಯಿಸಿದರು.
ರವಿ ಬೆಳಗೆರೆ
ಮೂರನೇ ಸ್ಪರ್ಧಿಯಾಗಿ ಪತ್ರಕರ್ತ ರವಿ ಬೆಳಗೆರೆ ತಮ್ಮ ಮಗಳೊಂದಿಗೆ ಎಂಟ್ರಿ ಕೊಟ್ರು. ಇವರು ನಿತ್ಯ 40 ಸಿಗರೇಟ್ ಸೇದುತ್ತಿದ್ದರಂತೆ. ನಂತರ 38ಕ್ಕೆ ಇಳಿಸಿದ್ದಾರಂತೆ. ಸಿಗರೇಟ್ ಸೇದುವ ಜಾಗದಲ್ಲಿ ಮಾತ್ರ ಸೇದುತ್ತೇನೆ ಎಂದರು.ಇವರ ಪತ್ನಿ ಹಾಗೂ ಮಗ ಹಿಮವಂತ್ ಆಗಮಿಸಿದ್ದರು. ಸುದೀಪ್ ಇವರಿಗೆ ಬೆಲ್ ಒಂದನ್ನು ನೀಡಿ ಒಳ ಕಳುಹಿಸಿದರು.
ಚಂದನಾ
ನಾಲ್ಕನೇ ಸ್ಪರ್ಧಿಯಾಗಿ ಚಂದನಾ ಪ್ರವೇಶಿಸಿದ್ದಾರೆ. ಪುಟ್ಮಲ್ಲಿ ಧಾರಾವಾಹಿಯಲ್ಲಿ ನಾಯಕನ ತಂಗಿಯಾಗಿ ಅಭಿನಯಿಸಿ ಮನೆ ಮಾತಾಗಿದ್ದ ತುಮಕೂರಿನ ಚೆಲುವೆ ಚಂದನಾ ಜನಪ್ರಿಯರಾಗಿದ್ದು ಎಡವಡ್ ರಾಣಿಯಾಗಿ! ಅರ್ಥಾತ್ ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಾಜ ರಾಣಿ ಧಾರಾವಾಹಿಯಲ್ಲಿ ನಾಯಕಿ ಚುಕ್ಕಿಯಾಗಿ ವೀಕ್ಷಕರ ಮನ ಸೆಳೆದಿರುವ ಚಂದನಾ ಬಿಗ್ ಬಾಸ್ ಒಳಗೆ ಹೋಗಿದ್ದಾರೆ
ವಾಸುಕಿ ವೈಭವ್
ಐದನೇ ಸ್ಪರ್ಧಿಯಾಗಿ ವಾಸುಕಿ ವೈಭವ್ ಎಂಟ್ರಿ ಕೊಟ್ಡಿದ್ದಾರೆ. ಮೂಲತಃ ರಂಗಭೂಮಿ ಕಲಾವಿದರಾದ ವಾಸುಕಿ ಹಾಡು ಹಾಡುವ ಮೂಲಕ ಸುದೀಪ್ ಅವರಿಗೆ ಖುಷಿ ಉಂಟುಮಾಡಿದರು. ಸುದೀಪ್ ಅವರು ಬಿಗ್ ಬಾಸ್ ನಾಲ್ಕು ಸಾಲುಗಳನ್ನು ಹಾಡಿ ಎಂದಾಗ, ಬಿಗ್ ಬಾಸ್ ಬದಲು ನಿಮ್ಮ ಬಗ್ಗೆಯೇ ಹಾಡುತ್ತೇನೆ ಎಂದು ಸುದೀಪ್ ಅವರನ್ನು ನಾಲ್ಕು ಸಾಲುಗಳಲ್ಲಿ ಬಣ್ಣಿಸಿದರು.
ದೀಪಿಕಾ ದಾಸ್
ಆರನೇ ಸ್ಪರ್ಧಿಯಾಗಿ ನಾಗಿಣಿ ಧಾರಾವಾಹಿಯ ಅಮೃತಾ ಪಾತ್ರಧಾರಿ ದೀಪಿಕಾ ದಾಸ್ ಬಿಗ್ ಬಾಸ್ ಮನೆಯೊಳಗೆ ಹೋದರು. ಜಬರ್ ದಸ್ತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ವೇದಿಕೆಗೆ ಬಂದ ದೀಪಿಕಾ " ಪ್ರತಿದಿನ ಮೂರು ಗಂಟೆಗಳ ಕಾಲ ಇನ್ ಸ್ಟಾಗ್ರಾಂ ನೋಡ್ತೇನೆ. ನಾನು ನನ್ನ ಇನ್ಸ್ಟಾಗ್ರಾಂ ಐದು ಲಕ್ಷ ಅಭಿಮಾನಿಗಳನ್ನು ಮಿಸ್ ಮಾಡ್ತೇನೆ. ಜನರು ನನ್ನನ್ನು ಇಲ್ಲಿಯ ತನಕ ಅಮೃತಾ ಆಗಿಯೇ ನೋಡಿದ್ದಾರೆ. ನಾನೀಗ ಬಿಗ್ ಬಾಸ್ಗೆ ಹೋಗುವುದರಿಂದ ದೀಪಿಕಾಳ ಪರಿಚಯವಾಗಲಿದೆ. ಜೊತೆಗೆ ನಾನೇನು ಎಂದು ಇದರಿಂದ ತಿಳಿಯಲಿದೆ ಎಂದರು.
ಜೈ ಜಗದೀಶ್
ತಮ್ಮ ಮೂವರು ಮಕ್ಕಳು ಡ್ಯಾನ್ಸ್ ಮಾಡುವ ಮೂಲಕ ತಮ್ಮ ತಂದೆಯನ್ನು ವೇದಿಕೆಗೆ ಪರಿಚಯಿಸಿದರು ಅವರೇ ನಟ ಹಾಗೂ ನಿರ್ದೇಶಕ ಜೈಜಗದೀಶ್, ಮೂವರು ಮಕ್ಕಳು ತಮ್ಮ ತಂದೆ ಯಲ್ಲಿರುವ ವೀಕ್ನೆಸ್ ಗಳನ್ನು ಹೇಳುವ ಮೂಲಕ ಅಚ್ಚರಿ ಮೂಡಿಸಿದರು.
ಗುರುಲಿಂಗಸ್ವಾಮಿ
ಉತ್ತರ ಕರ್ನಾಟಕದಲ್ಲಿ ಸಂಭವಿಸಿರುವ ನೆರೆ ಹಾವಳಿಯಲ್ಲಿ ಸಂತ್ರಸ್ತರಾಗಿರುವ ಜನರಿಗೆ ಸಹಾಯ ಮಾಡುವ ಸಲುವಾಗಿ ಅಗಡಿ ಮಠದ ಗುರುಲಿಂಗಸ್ವಾಮಿ ಮನೆಗೆ ಪ್ರವೇಶಿಸಿದ್ದಾರೆ.
ಬಸವಣ್ಣನವರ ಅನುಯಾಯಿ ಆಗಿರುವ ಇವರು ಬಿಗ್ ಬಾಸ್ ಮನೆಯಲ್ಲಿ ಬಸವಣ್ಣನವರ ವಚನಗಳನ್ನು ಹೇಳುವ ಮೂಲಕ ಬದಲಾವಣೆ ತರುವ ಉದ್ದೇಶವನ್ನು ಹೊಂದಿರುವುದಾಗಿ ತಿಳಿಸಿದರು. ಸಮಾಜ ಸೇವೆಯಲ್ಲಿ ತೊಡಗಿರುವ ಇವರಿಗೆ ಸುದೀಪ್ ಗಿಡಗಳನ್ನು ನೀಡುವ ಮೂಲಕ ಮನೆಗೆ ಎಂಟ್ರಿ ಕೊಡಿಸಿದರು.
ಭೂಮಿ ಶೆಟ್ಟಿ
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಕಿನ್ನರಿ ಧಾರಾವಾಹಿಯ ಮಣಿ ಪಾತ್ರಧಾರಿಯಾಗಿ ಮಿಂಚಿದ ಕುಂದಾಪುರದ ಬೆಡಗಿ ಭೂಮಿಕಾ ಶೆಟ್ಟಿ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ರಾಯಲ್ ಶೆಟ್ಟಿ ಎಂದೇ ಜನಜನಿತರಾಗಿರುವ ಭೂಮಿಕಾ ಅಜ್ಜ ಅಜ್ಜಿಯರೊಂದಿಗೆ ಬೆಳೆದಿದ್ದೇ ಹೆಚ್ಚು. ಬಾಂಗಡೆ ಮೀನಿನ ಪ್ರಿಯರಾಗಿರುವ ಭೂಮಿಕಾಗೆ ಬಾಂಗಡೆ ಇಲ್ಲವಾದರೆ ಊಟ ಸೇರುವುದೇ ಇಲ್ಲವಂತೆ. ಎಲ್ಲರ ಜೊತೆ ಜಾಲಿಯಾಗಿ ಇರ್ತೇನೆ. ಆಟ ಸರಿಯಾಗಿ ಆಡ್ತೇನೆ. ನಾನು ನಾನಾಗಿ ಇರೋದೇ ನನ್ನ ಪ್ಲಸ್ ಪಾಯಿಂಟ್. ಇದರಿಂದ ನಾನು ತೊಂಭತ್ತೊಂಭತ್ತು ದಿನ ಇರಬಹುದು ಅನ್ಸುತ್ತೆ ಎಂದರು. ಲೈಫಲ್ಲಿ ಬಂದ ಒಂದು ಒಳ್ಳೆಯ ಆಪಾರ್ಚುನಿಟಿ ಈ ಬಿಗ್ ಬಾಸ್. ಆದರಿಂದ ಅದನ್ನು ಮಿಸ್ ಮಾಡಲೇ ಇಲ್ಲ ಎಂದು ಸುದೀಪ್ ಕೊಟ್ಟ ಸೈಕಲ್ ಎತ್ತಿಕೊಂಡು ಬಿಗ್ ಬಾಸ್ ಮನೆಯೊಳಗೆ ಪಾದ ಬೆಳಿಸಿದರು.
ಕಿಶನ್
ಪಾಸಿಟಿವ್ ಆಗಿರಬೇಕು ಅಂತ ಹೇಳಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟರು ಡಾನ್ಸರ್ ಕಿಶನ್. ಬಟ್ಟೆ ಅಂದ್ರೆ ತುಂಬಾ ಇಷ್ಟ ಆಗಾಗಿ 2 ಸೂಟ್ಕೇಸ್ ಬಟ್ಟೆ ತಂದಿರುವ ಕಿಶನ್, ಡೆಸರ್ಟ್ ಗಳನ್ನು ಮಾಡುವಲ್ಲಿ ಎಕ್ಸ್ಪರ್ಟ್ ಅಂತೆ. ಕನ್ನಡ ಅಂದ್ರೆ ತುಂಬಾ ಇಷ್ಟ ಅಂತೆ. ಬಿಗ್ ಬಾಸ್ ಮನೆಯಲ್ಲಿ ಸ್ಟ್ರಾಟಜಿ ಮಾಡಿಕೊಂಡು ಆಟ ಆಡುವುದು ಇವರ ಸ್ಟ್ರಾಟಜಿ ಅಂತೆ.
ದುನಿಯಾ ರಶ್ಮಿ
ಸೂರಿ ನಿರ್ದೇಶನದ ದುನಿಯಾ ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟಿರುವ ರಶ್ಮಿ ಇಂದಿಗೂ ದುನಿಯಸ ರಶ್ಮಿ ಎಂದೇ ಚಿರಪರಿಚಿತ. ಮುಂದೆ ಮುರಾರಿ, ಅಕ್ಕ ತಂಗಿ, ಮದರಂಗಿ, ಜಗ್ಗಿ ಜಗನ್ನಾಥ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ ರಶ್ಮಿ ಇದೀಗ ಬಿಗ್ ಬಾಸ್ ಸೀಸನ್ 7 ರ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಬಣ್ಣದ ಲೋಕದಲ್ಲಿ ಅಷ್ಟೊಂದು ಯಶಸ್ಸು ಕಾಣದ ದುನಿಯಾ ರಶ್ಮಿ ಬಿಗ್ ಬಾಸ್ ಬಲ್ಲಿ ಯಶಸ್ಸು ಕಾಣುತ್ತಾರಾ ಕಾದು ನೋಡಬೇಕು.
ಚಂದನ್ ಆಚಾರ್
ಕಿರಿಕ್ ಪಾರ್ಟಿ ಮೂಲಕ ಹಿರಿ ತೆರೆಯಲ್ಲಿ ಕಾಣಿಸಿಕೊಂಡ ಚಂದನ ಮೈಸೂರಿನ ಹುಡುಗ. ಸಿಕ್ಕ ಅವಕಾಶ ವನ್ನು ಬಳಸಿಕೊಂಡು ಮುಂದೆ ಹೋಗಬೇಕು ಎಂಬ ಛಲ ಇದೆ ಹೀಗಾಗಿ ಬಿಗ್ ಬಾಸ್ ಮನೆಗೆ ಬಂದಿದ್ದಾಗಿ ಹೇಳಿಕೊಂಡಿದ್ದಾರೆ.
ಸುಜಾತಾ
ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಸಿತಾರಾ ದೇವಿಯಾಗಿ ಮಿಂಚಿದ ಸುಜಾತಾ ಅಕ್ಷಯಾ ಹದಿಮೂರನೇ ಸ್ಫರ್ಧಿಯಾಗಿ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ರಾಧಾ ರಮಣ ಧಾರಾವಾಹಿಯಲ್ಲಿ ವಿಲನ್ ಆಗಿ ಮನೆ ಮಾತಾಗಿರುವ ಸುಜಾತಾ ಅವರಿಗೆ ಚಾಲೆಂಜ್ ಅಂದರೆ ತುಂಬಾ ಇಷ್ಟ. ಅದೇ ಕಾರಣದಿಂದ ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿದ್ದೇನೆ ಎನ್ನುವ ಸುಜಾತಾ ಅಕ್ಷಯಾ ಸ್ಟ್ರೈಟ್ ಫಾರ್ವರ್ಡ್. ಇರುವ ವಿಷಯವನ್ನ ನೇರವಾಗಿ ಹೇಳಬೇಕು. ಇಲ್ಲಂದ್ರೆ ಸಿಟ್ಟು ಬರುತ್ತದೆ. ಜೊತೆಗೆ ನಾನು ಸ್ವಲ್ಪ ಇಮೋಷನಲ್ ಎನ್ನುವ ಸುಜಾತಾ ಬಿಗ್ ಬಾಸ್ ನೊಳಗೆ ಎಷ್ಟು ದಿನ ಇರುತ್ತಾರೆ ಎಂದು ಕಾದು ನೋಡಬೇಕು.
ರಾಜು ತಾಳಿಕೋಟಿ
ರಂಗಭೂಮಿ ಕಲಾವಿದ ರಾಜು ತಾಳಿಕೋಟೆ ಬಿಗ್ ಬಾಸ್ ಮನೆ ಪ್ರವೇಶಿಸಿದ್ದಾರೆ. ತಮ್ಮ ಇಡೀ ಕುಟುಂಬವನ್ನು ಪರಿಚಯಿಸಿದರು. ಕುಟುಂಬ ದಂತೆಯೇ ಬಿಗ್ಬಾಸ್ ಮನೆಯಲ್ಲಿ ಇರುವುದಾಗಿ ಹೇಳಿಕೊಂಡಿದ್ದಾರೆ ಅಲ್ಲದೆ ತಮಗೆ ಅತಿಯಾಗಿ ಕೋಪ ಬರುತ್ತದೆ ಅದನ್ನು ಕಂಟ್ರೋಲ್ ಮಾಡುವುದಾಗಿ ಕೂಡ ತಿಳಿಸಿದ್ದಾರೆ. ಸುದೀಪ್ ಇವರಿಗೊಂದು ಇಳಕಲ್ ಸೀರೆಯನ್ನು ಕೊಟ್ಟು ಕಳಿಸಿದ್ದಾರೆ ತಮಗೆ ಇಷ್ಟವಾದವರಿಗೆ ಯಾವಾಗ ಬೇಕಾದರೂ ಕೊಡಬಹುದು ಎಂದು ಕೂಡ ಹೇಳಿದ್ದಾರೆ.
ಚೈತ್ರಾ ವಾಸುದೇವನ್
ಕಲರ್ಸ್ ಕನ್ನಡ ಸಿನಿಮಾ ಚಾನೆಲ್ ನಲ್ಲಿ ಒಂದು ಸಿನಿಮಾ ಕತೆಯ ನಿರೂಪಕಿಯಾಗಿರುವ ಚೈತ್ರಾ ವಾಸುದೇವನ್ ಅವರು ಹದಿನೈದನೇ ಸ್ಫರ್ಧಿಯಾಗಿ ಕಾಣಿಸಿಕೊಂಡಿದ್ದಾರೆ. ಹಲವಾರು ಚಾನೆಲ್ ಗಳಲ್ಲಿ ನಿರೂಪಕಿಯಾಗಿ ಗಮನ ಸೆಳೆದಿರುವ ಪೈಲ್ವಾನ್ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದಾರೆ.
ಚೈತ್ರಾ ಕೋಟೂರ್
ಬರಹಗಾರ್ತಿ ಯಾಗಿರುವ ಚೈತ್ರಾ ಕೋಟೂರ್ ರಂಗಭೂಮಿ ಕಲಾವಿದೆಯೂ ಹೌದು. ಜೊತೆಗೆ ಡೈರೆಕ್ಷನ್ ಕೂಡ ಗೊತ್ತು ಎನ್ನುವ ಚೈತ್ರಾ ಅವರಿಗೆ ಇದ್ದುದನ್ನ ನೇರವಾಗಿ ಹೇಳುವ ಒಂದು ಅಭ್ಯಾಸ ವಿದೆ. ಇದು ಅವರಿಗೆ ವರವಾಗುತ್ತಾ ಶಾಪವಾಗುತ್ತಾ ಕಾದು ನೋಡಬೇಕಷ್ಟೇ!
ಶೈನ್ ಶೆಟ್ಟಿ
ಕಿರುತೆರೆ ನಟ ಶೈನ್ ಶೆಟ್ಟಿ ಕೂಡ 17ನೇ ಸ್ಪರ್ಧಿಯಾಗಿ ಎಂಟ್ರಿ ನೀಡಿದ್ದಾರೆ. ಹಲವಾರು ಸೀರಿಯಲ್ ಗಳಲ್ಲಿ ನಟಿಸಿರುವ ಇವರಿಗೆ ಸಿನಿಮಾದಲ್ಲಿ ನಟಿಸುವ ಆಸೆಯಿದೆ. ಆದರೆ ಅವಕಾಶ ಮಾತ್ರ ಇನ್ನೂ ಸಿಕ್ಕಿಲ್ಲ. ಆದರೆ ಏನಾದರೂ ಮಾಡಿ ದುಡ್ಡು ಮಾಡಬೇಕು ಎಂಬ ಛಲದಿಂದ ಸ್ವಂತ ಕೆಟರಿಂಗ್ ಆರಂಭಿಸಿದ್ದಾರೆ. ಮುಂದೆ ಕೂಡ ಅವಕಾಶ ಸಿಕ್ಕರೆ ನಟಿಸುವುದಾಗಿ ಹೇಳಿದ್ದಾರೆ.
ನಟ ಹರೀಶ್ ರಾಜ್
ಅಂತಿಮ ಅಭ್ಯರ್ಥಿಯಾಗಿ ನಟ ಹರೀಶ್ ರಾಜ್ ಮನೆ ಪ್ರವೇಶಿಸಿದ್ದಾರೆ ಹಿಂದೆಯೂ ಅವಕಾಶ ಬಂದಿತ್ತು ಆದರೆ ಈ ಬಾರಿ ಅದಕ್ಕೆ ಸಮಯ ಒದಗಿ ಬಂದಿದೆ. ಮನೆಯಲ್ಲಿ ಉತ್ತಮ ಬಾಂಧವ್ಯ ಹಾಗೂ ಹಲವು ವಿಷಯಗಳನ್ನು ಕಲಿಯುವುದು ಮುಖ್ಯ ಉದ್ದೇಶ ಎಂದಿದ್ದಾರೆ.