ETV Bharat / sitara

ಕನ್ನಡಕ್ಕೆ ಕಂಬ್ಯಾಕ್ ಮಾಡಿದ ಜೂಲಿ ಬೆಡಗಿ... ಬಿರುಸಿನಿಂದ ಸಾಗಿದ 'ಝಾನ್ಸಿ' ಶೂಟಿಂಗ್

ಝಾನ್ಸಿ ಚಿತ್ರಕ್ಕೆ 35 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಚಿತ್ರದಲ್ಲಿ ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ಸನ್ನಿವೇಶವನ್ನು ಒಳಗೊಂಡಿದೆ. ಈ ಚಿತ್ರಕ್ಕಾಗಿ ನಟಿ ಲಕ್ಷ್ಮಿ ರಾಯ್ ಮಾರ್ಷಲ್ ಆರ್ಟ್​ ಸಹ ಕಲಿತಿದ್ದಾರೆ.

ನಟಿ ಲಕ್ಷ್ಮಿ ರಾಯ್
author img

By

Published : Jun 19, 2019, 5:19 PM IST

ಕನ್ನಡತಿ ಲಕ್ಷ್ಮಿ ರಾಯ್ ತಮ್ಮ ತವರು ಚಿತ್ರರಂಗಕ್ಕೆ ಕಂಬ್ಯಾಕ್ ಮಾಡುತ್ತಿರುವ ಝಾನ್ಸಿ ಚಿತ್ರದ ಶೂಟಿಂಗ್ ಬಿರುಸಿನಿಂದ ಸಾಗುತ್ತಿದೆ.

ಸಾಹಸಮಯ ಚಿತ್ರ ಝಾನ್ಸಿಯ ಚಿತ್ರೀಕರಣ ಇತ್ತೀಚೆಗೆ ಮುಂಬೈನಲ್ಲಿ ನಡೆದಿದ್ದು, ಈ ವೇಳೆ ಅದ್ಬುತ ಥ್ರಿಲ್ಲರ್ ಸನ್ನಿವೇಶ ಚಿತ್ರೀಕರಿಸಲಾಗಿದೆ.

ಝಾನ್ಸಿ ಚಿತ್ರಕ್ಕೆ 35 ದಿನಗಳ ಕಾಲ ಶೂಟಿಂಗ್ ನಡೆದಿದ್ದು, ಚಿತ್ರದಲ್ಲಿ ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೇಸಿಂಗ್ ಸನ್ನಿವೇಶವನ್ನು ಒಳಗೊಂಡಿದೆ. ಈ ಚಿತ್ರಕ್ಕಾಗಿ ನಟಿ ಲಕ್ಷ್ಮಿ ರಾಯ್ ಮಾರ್ಷಲ್ ಆರ್ಟ್​ ಸಹ ಕಲಿತಿದ್ದಾರೆ.

ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ 500 ನೇ ಸಿನಿಮಾ ಇದಾಗಿದ್ದು, ಸಂಗೀತ ನಿರ್ದೇಶಕ ಎಂ ಎನ್ ಕೃಪಾಕರ್ ಅವರಿಗೆ ಇದು 50ನೇ ಚಿತ್ರ ಎನ್ನುವುದು ಮತ್ತೊಂದು ವಿಶೇಷ.

lakshmi-rai
ನಟಿ ಲಕ್ಷ್ಮಿ ರಾಯ್

ನಿರ್ದೇಶಕ ಪಿ.ವಿ.ಎಸ್ ಗುರುಪ್ರಸಾದ್ ಝಾನ್ಸಿ ಆಗಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲಕ್ಷ್ಮಿ ರಾಯ್ ಅನ್ನು ತೆರೆಯ ಮೇಲೆ ತರುತ್ತಿದ್ದಾರೆ. ಈ ಮೊದಲು 'ಮರ್ಯಾದ ರಾಮಣ್ಣ' ಸಿನಿಮಾ ಮಾಡಿದ್ದ ಗುರುಪ್ರಸಾದ್ ಇದೀಗ ಆ್ಯಕ್ಷನ್ ಸಿನಿಮಾನ್ನು ನೋಡುಗರ ಮುಂದೆ ತರುತ್ತಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆಯ ಜೊತೆಗೆ ಸಂಭಾಷಣೆ ಬರೆದಿದ್ದಾರೆ.

ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಕೊರಿಯೋಗ್ರಫಿ ಮಾಡಿದ್ದಾರೆ. ಮುಖೇಶ್​ ತಿವಾರಿ, ವೀರ್ ಹನಿಫ್, ರವಿ ಕಾಳೆ ನೆಗೆಟಿವ್ ರೋಲ್​ನಲ್ಲಿ ನಟಿಸಿದ್ದು, ಝಾನ್ಸಿ ಚಿತ್ರಕ್ಕೆ ವೀರೇಶ್ ಛಾಯಾಗ್ರಹಣ ಮಾಡಿದ್ದಾರೆ.

ಡ್ರಗ್ಸ್, ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ ‘ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎಂದು ನಿರ್ದೇಶಕರು ಹೇಳಿದ್ದಾರೆ.

ಭವಾನಿ ಎಂಟರ್​​ಟೇನ್ಮೆಂಟ್​​ ಅಡಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಬಸವರಾಜ್ ಸಂಕಲನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಲಕ್ಷ್ಮಿ ರಾಯ್ ಝಾನ್ಸಿ ಚಿತ್ರಕ್ಕೆ ಥ್ರಿಲ್ಲರ್ ಸನ್ನಿವೇಶ ಚಿತ್ರೀಕರಣ

ಕನ್ನಡತಿ ಲಕ್ಷ್ಮಿ ರಾಯ್ ಅವರ ಮರು ಆಗಮನದ ಸಾಹಸಮಯ ಚಿತ್ರ ಝಾನ್ಸಿ ಇತ್ತೀಚಿಗೆ ಮುಂಬೈ ಅಲ್ಲಿ ಒಂದು ಅದ್ಬುತ ಥ್ರಿಲ್ಲರ್ ಸನ್ನಿವೇಶವನ್ನು ಚಿತ್ರೀಕರಿಸಿಕೊಂಡಿದೆ.

ಅದು ಸ್ವಿಮ್ಮಿಂಗ್ ಪೂಲ್ ಆವರಣ, ಮುಂಬೈ ಬಾಯಿ ರವಿ ಕಾಳೆ ಅವರ ಸಂಹಾರಕ್ಕೆ ಕಾಳಿಂಗ ಸ್ಕೆಚ್ಚು ಹಾಕಿರುತ್ತಾನೆ. ಒಂದು ಒಂದು ಕಡೆ ಅಲ್ಲ ಎರಡು ಕಡೆ ಇಂದ ಪಿಸ್ತೂಲ್ ರವಿ ಕಾಳೆ ಗುಂಡಿಗೆ ಹೊಕ್ಕಲು ಸಿದ್ದವಾಗಿದೆ. ಆ ಸಮಯಕ್ಕೆ ಸರಿಯಾಗಿ ಆಗಮಿಸುವ ಝಾನ್ಸಿ ಪಾತ್ರದಾರಿ ಇದನ್ನು ಗಮನಿಸಿ ಎರಡು ವ್ಯಕ್ತಿಗಳನ್ನು ಗುಂಡಿಕ್ಕಿ ಕೊಂಡು ರವಿ ಕಾಲೆ ಬಚಾವ್ ಮಾಡಿ ಆಮೇಲೆ ನೀರಿನ ಆಳಕ್ಕೆ ಜಿಗಿಯುತ್ತಾಳೆ. ಖಳ ನಟರ ತಂಡ ಝಾನ್ಸಿ ನೀರಿನಲ್ಲಿ ಅಡಗಿರುವುದನ್ನು ಕಂಡು ವಾಪಸ್ಸಾಗುತ್ತಾರೆ. ಝಾನ್ಸಿ ಈ ರೀತಿ ಮುಂಬೈ ಡಾನ್ ರವಿ ಕಾಳೆ ರಕ್ಷಿಸಲು ಒಂದು ಶಂಡ್ಯಂತ್ರ ಇದೆ. ಅದನ್ನು ನೀವು ಸಿನಿಮಾದಲ್ಲಿ ನೋಡಬೇಕು ಅಂತ ಹೇಳುತ್ತಾರೆ ನಿರ್ದೇಶಕ ಗುರುಪ್ರಸಾದ್.

ಝಾನ್ಸಿ ಚಿತ್ರಕ್ಕೆ 35 ದಿವಸಗಳ ಕಾಲ ಚಿತ್ರೀಕರಣ ಮಾಡಿದ್ದಾರೆ ನಿರ್ದೇಶಕರೂ. ಅದರಲ್ಲಿ ನಾಲ್ಕು ಸಾಹಸ ಸನ್ನಿವೇಶ ಹಾಗೂ ಒಂದು ಚೆಸ್ ಸಹ ಇದೆ. ಹಿರಿಯ ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರ 500 ನೇ ಸಿನಿಮಾ ಇದು. ಹಾಗೆ ಸಂಗೀತ ನಿರ್ದೇಶಕ ಎಂ ಎನ್ ಕೃಪಾಕರ್ ಅವರ 50 ನೇ ಸಂಗೀತ ನಿರ್ದೇಶನದ ಚಿತ್ರ.

 ನಿರ್ದೇಶಕ ಪಿ ವಿ ಎಸ್ ಗುರುಪ್ರಸಾದ್ ಝಾನ್ಸಿ’ ಆಗಿ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಲಕ್ಷ್ಮಿ ರಾಯ್ ಅನ್ನು ತೆರೆಯ ಮೇಲೆ ತಂಡಿದ್ದಾರೆ. ಈ ಚಿತ್ರಕ್ಕಾಗಿ ಅವರು ಮಾರ್ಷಿಯಲ್ ಆರ್ಟ್ ಸಹ ಕಲಿತಿದ್ದಾರೆ. ಒಂದು ಹಾಡಿಗೆ ನೃತ್ಯ ನಿರ್ದೇಶಕ ಧನ್ ಕುಮಾರ್ ಸ್ಟೆಪ್ಸ್ ಕೂಡ ಹಾಕಿಸಿದ್ದಾರೆ. ಖಳ ನಟರ ಪೈಕಿ ಮುಕೇಷ್ ತಿವಾರಿ, ವೀರ್ ಹನಿಫ್, ರವಿ ಕಾಳೆ ಇದ್ದಾರೆ.

ನಿರ್ದೇಶಕ ಗುರುಪ್ರಸಾದ್ ಈ ಹಿಂದೆ ‘ಮರ್ಯಾದ ರಾಮಣ್ಣ’ ಚಿತ್ರವನ್ನು ನಿರ್ದೇಶನ ಮಾಡಿದವರು. ಈ ‘ಝಾನ್ಸಿ’ ಚಿತ್ರಕ್ಕೆ ಅವರದೇ ಕಥೆಚಿತ್ರಕಥೆ ಸಂಭಾಷಣೆ ಸಹ ಮಾಡಿದ್ದಾರೆ. ವೀರೇಶ್ ಈ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ.

ಡ್ರಗ್ಸ್ಲ್ಯಾಂಡ್ ಮಾಫಿಯಾ ಹಾಗೂ ಇನ್ನಿತರ ವಿಚಾರಗಳನ್ನು ಒಳಗೊಂಡ ‘ಝಾನ್ಸಿ’ ಮಾಸ್ ಹಾಗೂ ಕುಟುಂಬ ಸಮೇತ ನೋಡುವಂತಹ ಚಿತ್ರ ಎಂದು ನಿರ್ದೇಶಕರು ತಿಳಿಸುತ್ತಾರೆ.

ಭವಾನಿ ಎಂಟರ್ಟೈನ್ಮೇಂಟ್ ಅಡಿಯಲ್ಲಿ ಮುಂಬಯಿ ಮೂಲದ ರಾಜೇಶ್ ಕುಮಾರ್ ಈ ಚಿತ್ರದ ನಿರ್ಮಾಪಕರು. ಬಸವರಾಜ್ ಸಂಕಲನ ಒದಗಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.